/newsfirstlive-kannada/media/post_attachments/wp-content/uploads/2024/10/MODI_CHAINA_XI.jpg)
ಕೊನೆಗೂ ಎಲ್ಎಸಿಯಲ್ಲಿ ಭಾರತ-ಚೀನಾ ಮಿಲಿಟರಿ ಬಿಕ್ಕಟ್ಟು ಇತ್ಯರ್ಥಗೊಂಡಿದೆ. ಎಲ್ಎಸಿಯಿಂದ ಭಾರತ-ಚೀನಾ ಸೇನೆ ವಾಪಸ್ ತೆಗೆದುಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡಿದೆ. ಎರಡೂ ದೇಶಗಳು ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳಲು ಯೋಜಿಸಿವೆ. ಈ ಮೂಲಕ ಎಲ್ಎಸಿಯಲ್ಲಿ ಏಳು ದಶಕಗಳ ಕಾಲ ಎರಡು ದೇಶಗಳ ನಡುವಿನ ಅತ್ಯಂತ ಗಂಭೀರವಾದ ಮಿಲಿಟರಿ ಸಂಘರ್ಷಕ್ಕೆ ತೆರೆಬಿದ್ದಿದೆ.
ಲೈನ್ ಆಫ್ ಆಕ್ಚುವೆಲ್ ಕಂಟ್ರೋಲ್ (ಎಲ್ಎಸಿ) ವಿಶ್ವದ ದೊಡ್ಡ ಆರ್ಥಿಕತೆ ಹೊಂದಿರುವ ಎರಡು ರಾಷ್ಟ್ರಗಳ ನಡುವಿನ ಗಡಿ ಗುದ್ದಾಟಕ್ಕೆ ಕಾರಣವಾಗಿದ್ದ ಪ್ರದೇಶ. ದಶಕಗಳ ಕಾಲ ನಡೆದ ಘರ್ಷಣೆ ಕೊನೆಗೊಂಡಂತಿದೆ. ಸ್ನೇಹ-ಸೌಹಾರ್ದ ಬೆಸೆದಿದೆ. ಭವಿಷ್ಯದ ಹಿತದೃಷ್ಟಿಯಿಂದ ಶಾಂತಿ ಮಂತ್ರ ಮೊಳಗಿದೆ.
ಇದನ್ನೂ ಓದಿ:RCB ಫ್ರಾಂಚೈಸಿಯಿಂದ ಹೊರಬಿತ್ತು ಬಿಗ್ ನ್ಯೂಸ್.. ವಿರಾಟ್ ಕೊಹ್ಲಿಗೆ ದೊಡ್ಡ ಜವಾಬ್ದಾರಿ?
ಭಾರತ-ಚೀನಾ ನಡುವಿನ ಗಡಿ ವಿವಾದ ಸುಖಾಂತ್ಯ
ಭಾರತ-ಚೀನಾ ಎಲ್ಎಸಿ ಗಡಿ ವಿವಾದ ಸುಖಾಂತ್ಯವಾಗಿದೆ. ಕೆಲ ದಿನಗಳ ಹಿಂದೆ ಎಲ್ಎಸಿಯಿಂದ ಸೇನೆ ವಾಪಸ್ ತೆಗೆದುಕೊಳ್ಳುವ ಬಗ್ಗೆ ಎರಡೂ ದೇಶಗಳು ಒಪ್ಪಂದ ಮಾಡಿಕೊಂಡಿದ್ದವು. ಬ್ರಿಕ್ಸ್ ಸಮ್ಮೇಳನದಲ್ಲೂ ಪ್ರಧಾನಿ ಮೋದಿ ಗಡಿಯಲ್ಲಿ ಶಾಂತಿ ನೆಲೆಸಬೇಕು ಅಂತ ಮನವಿ ಮಾಡಿದ್ದರು. ಸದ್ಯ ಎಲ್ಎಸಿಯಿಂದ ಸೇನಾ ವಾಪಸಾತಿ ಪ್ರಕ್ರಿಯೆಯನ್ನು ಎರಡೂ ದೇಶಗಳು ಯಶಸ್ವಿಯಾಗಿ ಪೂರ್ಣಗೊಳಿಸಿವೆ.
ಗಡಿ ಸಂಘರ್ಷಕ್ಕೆ ಇತಿಶ್ರೀ!?
- 2020 ರ ಜೂನ್ನಲ್ಲಿ ಗಾಲ್ವಾನ್ ಕಣಿವೆಯಲ್ಲಿ ಘರ್ಷಣೆ
- ಭಾರತ ಮತ್ತು ಚೀನಾದ ಸಂಬಂಧಗಳು ಹದಗೆಟ್ಟಿದ್ದವು
- ಇದು ದಶಕಗಳಲ್ಲಿ ಅತ್ಯಂತ ಗಂಭೀರ ಮಿಲಿಟರಿ ಸಂಘರ್ಷ
- ಹಲವು ಮಾತುಕತೆಗಳ ನಂತರ ಸೇನೆ ಹಿಂತೆಗೆಯುವ ಒಪ್ಪಂದ
- ಅ.21ರಂದು ಭಾರತ-ಚೀನಾ ನಡುವೆ ಗಡಿ ಒಪ್ಪಂದ ಆಗಿತ್ತು
- ಗಸ್ತು ತಿರುಗುವಿಕೆ, ಸೇನೆ ನಿರ್ಗಮನ ಒಪ್ಪಂದ ಅನುಮೋದನೆ
- ಲಡಾಖ್‌ನ ಡೆಪ್ಸಾಂಗ್, ಡೆಮ್ಚೋಕ್ನಿಂದ ಸೇನೆ ವಾಪಸ್
ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಸಚಿವಾಲಯದಿಂದ ನೇಮಕಾತಿ.. 4, 7ನೇ ತರಗತಿ, ಪದವೀಧರರು ಅರ್ಜಿ ಸಲ್ಲಿಕೆ ಮಾಡಬಹುದು
ಇಂದು ಭಾರತ-ಚೀನಾ ಮಧ್ಯೆ ಸಿಹಿ ಹಂಚಿಕೆ, ಶೀಘ್ರದಲ್ಲೇ ಗಸ್ತು
ದೀಪಾವಳಿಯ ಸಂದರ್ಭದಲ್ಲೇ ಮಹತ್ವದ ಬೆಳವಣಿಗೆ ನಡೆದಿರುವುದು ಸಂತಸದ ವಿಷ್ಯ. ಸ್ಥಳೀಯ ಕಮಾಂಡರ್‌ಗಳ ನಡುವೆ ಮಾತುಕತೆ ಮುಂದುವರಿಯಲಿದ್ದು, ಶೀಘ್ರದಲ್ಲೇ ಗಸ್ತು ತಿರುಗಲಿದೆ ಎಂದು ಮೂಲಗಳು ತಿಳಿಸಿವೆ. ಸದ್ಭಾವನೆಯ ಸಾಂಕೇತಿಕ ಸೂಚಕವಾಗಿ ಎರಡೂ ದೇಶಗಳು ಇಂದು ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳಲು ಯೋಜಿಸಿವೆ. ಇನ್ನು ಉಭಯದೇಶಗಳ ಈ ಮಹತ್ವದ ನಿರ್ಧಾರವನ್ನು ಅಮೆರಿಕ ಸ್ವಾಗತಿಸಿದೆ.
ಗಲ್ವಾನ್ ಕಣಿವೆಯಲ್ಲಿ ಸಂಘರ್ಷದಿಂದ ಭಾರತ-ಚೀನಾ ನಡುವೆ ಗಡಿಯಲ್ಲಿ ಪರಿಸ್ಥಿತಿ ಹದಗೆಟ್ಟಿತ್ತು. ನರಿಬುದ್ಧಿಯ ಚೀನಾ ಇನ್ನಾದ್ರೂ ಕುತಂತ್ರವನ್ನು ಬಿಟ್ಟು, ಗಡಿಯಲ್ಲಿ ಶಾಂತಿ ನೆಲೆಸಲು ಸದಾ ಕೈ ಜೋಡಿಸಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ