ಭಾರತ ಅಟ್ಟಾರಿ ಗಡಿ ಬಂದ್ ಮಾಡಿದರೆ.. ಪಾಕ್​​ಗೆ ಎಷ್ಟು ಕೋಟಿ ನಷ್ಟ ಆಗಲಿದೆ, ಹೇಗೆಲ್ಲ ಪೆಟ್ಟು ಬೀಳುತ್ತೆ?

author-image
Ganesh
Updated On
ಭಾರತ ಅಟ್ಟಾರಿ ಗಡಿ ಬಂದ್ ಮಾಡಿದರೆ.. ಪಾಕ್​​ಗೆ ಎಷ್ಟು ಕೋಟಿ ನಷ್ಟ ಆಗಲಿದೆ, ಹೇಗೆಲ್ಲ ಪೆಟ್ಟು ಬೀಳುತ್ತೆ?
Advertisment
  • ಪಹಲ್ಗಾಮ್ ದಾಳಿ ಬೆನ್ನಲ್ಲೇ ಭಾರತದಿಂದ ಕಠಿಣ ನಿರ್ಧಾರ
  • ಭಾರತ-ಪಾಕ್ ಸಂಪರ್ಕ ಕೊಂಡಿ ಅಟ್ಟಾರಿ ಗಡಿ ಬಂದ್
  • ಈ ಗಡಿ ಮೂಲಕ ಭಾರತ-ಪಾಕ್ ವ್ಯವಹಾರ ಹೇಗಿದೆ..?

ಪಹಲ್ಗಾಮ್‌ ದಾಳಿ ಬೆನ್ನಲ್ಲೇ ಭಾರತ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಅಟ್ಟಾರಿ ಚೆಕ್ ಪೋಸ್ಟ್ (ICP) ತಕ್ಷಣವೇ ಮುಚ್ಚಲು ಭಾರತ ಸರ್ಕಾರ ನಿರ್ಧರಿಸಿದೆ. ದೇಶದ ಭದ್ರತಾ ದೃಷ್ಟಿಯಿಂದ ಸಂಪುಟ ಸಮಿತಿ ಈ ನಿರ್ಧಾರ ತೆಗೆದುಕೊಂಡಿದೆ.

ಪಹಲ್ಗಾಮ್​ ದಾಳಿಯಲ್ಲಿ 26 ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ. ಸರ್ಕಾರ ನೀಡಿರುವ ಮಾಹಿತಿ ಪ್ರಕಾರ, ಗಡಿ ದಾಟಿ ಪಾಕಿಸ್ತಾನಕ್ಕೆ ಹೋದವರು ಮೇ 1, 2025ರ ಒಳಗಾಗಿ ಭಾರತಕ್ಕೆ ಹಿಂತಿರುಗಬೇಕು. ಈ ಮಾರ್ಗವು ನಿಗದಿತ ಅವಧಿಗೆ ಮಾತ್ರ ತೆರೆದಿರುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಅಲ್ಲದೇ ಭಾರತಕ್ಕೆ ಬಂದಿರುವ ಪಾಕಿಸ್ತಾನಿಯರು ಕೂಡ ಈ ಕೂಡಲೇ ದೇಶ ಬಿಟ್ಟು ತೊಲಗಬೇಕು ಎಂದು ಸೂಚಿಸಲಾಗಿದೆ.

ಇದನ್ನೂ ಓದಿ: ಉಗ್ರರ ಪೈಶಾಚಿಕ ಕೃತ್ಯ ಬೆನ್ನಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ.. ಗಾಬರಿಯಿಂದ ಠಾಣೆಗೆ ಬಂದ ಗಂಭೀರ್​..!

publive-image

ಪ್ರಶ್ನೆ ಏನೆಂದ್ರೆ ಸರ್ಕಾರದ ನಿರ್ಧಾರದಿಂದ ಭಾರತ ಮತ್ತು ಪಾಕ್ ನಡುವಿನ ವ್ಯಾಪಾರದ ಮೇಲೆ ಯಾವ ಪರಿಣಾಮ ಬೀರಲಿದೆ ಅನ್ನೋದು. ಅಟ್ಟಾರಿ ಗಡಿಯು ಎರಡೂ ದೇಶಗಳ ನಡುವೆ ವ್ಯಾಪಾರ ನಡೆಯುವ ಏಕೈಕ ಭೂಮಾರ್ಗ. ಭಾರತವು ಈ ಮಾರ್ಗದ ಮೂಲಕ ಪಾಕಿಸ್ತಾನಕ್ಕೆ ಸೋಯಾಬೀನ್, ಕೋಳಿ, ಅದಕ್ಕೆ ಬೇಕಾದ ಆಹಾರ, ತರಕಾರಿಗಳು, ಪ್ಲಾಸ್ಟಿಕ್ ವಸ್ತುಗಳು, ಪ್ಲಾಸ್ಟಿಕ್ ದಾರ ಮತ್ತು ಕೆಂಪು ಮೆಣಸಿನಕಾಯಿಗಳನ್ನು ಕಳುಹಿಸುತ್ತದೆ..

ಇದನ್ನೂ ಓದಿ: Pahalgam attack: ಕೇಂದ್ರದಲ್ಲಿ ಇವತ್ತು ಸರ್ವ ಪಕ್ಷ ಸಭೆ; ಪಾಕಿಸ್ತಾನಕ್ಕೆ ಮತ್ತಷ್ಟು ಮರ್ಮಾಘಾತ..!

publive-image

ವರದಿಗಳ ಪ್ರಕಾರ, ಅಟ್ಟಾರಿ-ವಾಘಾ ಗಡಿಯ ಮೂಲಕ ವಾರ್ಷಿಕವಾಗಿ 3,886.53 ಕೋಟಿ ರೂಪಾಯಿಗಳ ವ್ಯಾಪಾರ ನಡೆಯುತ್ತದೆ. ಅಮೃತಸರದಿಂದ ಕೇವಲ 28 ಕಿ.ಮೀ ದೂರದಲ್ಲಿರುವ ಅಟ್ಟಾರಿ, ಭಾರತದ ಮೊದಲ ಭೂ ಬಂದರು. ಪಾಕಿಸ್ತಾನದೊಂದಿಗಿನ ವ್ಯಾಪಾರಕ್ಕಾಗಿ ಬಳಸುವ ಏಕೈಕ ಭೂ ಮಾರ್ಗ. 120 ಎಕರೆಗಳಷ್ಟು ವಿಸ್ತೀರ್ಣ ಹೊಂದಿರುವ ಈ ಪ್ರದೇಶ ರಾಷ್ಟ್ರೀಯ ಹೆದ್ದಾರಿ-1ಕ್ಕೆ ನೇರವಾಗಿ ಸಂಪರ್ಕ ಹೊಂದಿದೆ.

ಅಟ್ಟಾರಿ ಚೆಕ್ ಪೋಸ್ಟ್ ಭಾರತ-ಪಾಕಿಸ್ತಾನ ವ್ಯಾಪಾರದಲ್ಲಿ ಮಾತ್ರವಲ್ಲದೇ, ಅಫ್ಘಾನಿಸ್ತಾನದಿಂದ ಬರುವ ಸರಕುಗಳ ಆಮದಿನಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಅಟ್ಟಾರಿ-ವಾಘಾ ಕಾರಿಡಾರ್ ಪ್ರತಿ ವರ್ಷ ವ್ಯಾಪಾರ ಮತ್ತು ಪ್ರಯಾಣಿಕರ ಸಂಚಾರದಲ್ಲಿ ಏರಿಳಿತ ಕಂಡಿದೆ. 2023-24ನೇ ವರ್ಷದಲ್ಲಿ, 6,871 ಸರಕು ಸಾಗಣೆ ವಾಹನಗಳು ಸಂಚಾರ ಮಾಡಿವೆ. 71,563 ಜನರು ಪ್ರಯಾಣಿಸಿದ್ದಾರೆ. ಈ ಅವಧಿಯಲ್ಲಿ ಒಟ್ಟು 3,886.53 ಕೋಟಿ ರೂಪಾಯಿ ಮೌಲ್ಯದ ವ್ಯಾಪಾರ ನಡೆದಿದೆ.

ಇದನ್ನೂ ಓದಿ: Pahalgam attack: ಕೇಂದ್ರದಲ್ಲಿ ಇವತ್ತು ಸರ್ವ ಪಕ್ಷ ಸಭೆ; ಪಾಕಿಸ್ತಾನಕ್ಕೆ ಮತ್ತಷ್ಟು ಮರ್ಮಾಘಾತ..!

publive-image

ಭಾರತದಿಂದ, ಸೋಯಾಬೀನ್, ಕೋಳಿ ಆಹಾರ, ತರಕಾರಿಗಳು, ಕೆಂಪು ಮೆಣಸಿನಕಾಯಿಗಳು, ಪ್ಲಾಸ್ಟಿಕ್ ಕಣಗಳು ಮತ್ತು ಪ್ಲಾಸ್ಟಿಕ್ ದಾರದಂತಹ ಸರಕುಗಳನ್ನು ಇಲ್ಲಿಂದ ಕಳುಹಿಸಲಾಗುತ್ತದೆ. ಅದೇ ಸಮಯದಲ್ಲಿ, ಒಣ ಹಣ್ಣುಗಳು, ಒಣ ಖರ್ಜೂರ, ಜಿಪ್ಸಮ್, ಸಿಮೆಂಟ್, ಗಾಜು, ಕಲ್ಲು ಉಪ್ಪು ಮತ್ತು ವಿವಿಧ ರೀತಿಯ ಗಿಡಮೂಲಿಕೆಗಳು ಪಾಕಿಸ್ತಾನ ಮತ್ತು ಇತರೆ ದೇಶಗಳಿಂದ ಭಾರತಕ್ಕೆ ಬರುತ್ತವೆ. ಈ ಬಂದರಿನ ಮುಚ್ಚುವಿಕೆಯು ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಬೀರಲಿದೆ. ವಿಶೇಷವಾಗಿ ಗಡಿಯಾಚೆಗಿನ ವ್ಯಾಪಾರವನ್ನು ಅವಲಂಬಿಸಿರುವ ಸಣ್ಣ ವ್ಯಾಪಾರಿಗಳು ಮತ್ತು ಕಂಪನಿಗಳ ಮೇಲೆ ಹೊಡೆತ ಬೀಳಲಿದೆ.

ಏನಾಗುತ್ತದೆ ಗೊತ್ತಾ?

ಈಗಾಗಲೇ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಈ ಉದ್ವಿಗ್ನತೆಯಿಂದ ವ್ಯಾಪಾರ ಸಂಬಂಧಗಳು ದುರ್ಬಲಗೊಂಡಿವೆ. ಅಟ್ಟಾರಿ ಚೆಕ್ ಪೋಸ್ಟ್ ಮುಚ್ಚುವ ನಿರ್ಧಾರವು ವಿಶೇಷವಾಗಿ ದಿನನಿತ್ಯದ ವಸ್ತುಗಳ ವ್ಯಾಪಾರ ಅವಲಂಬಿಸಿರುವ ಸಣ್ಣ ವ್ಯಾಪಾರಿಗಳು ಮತ್ತು ಕೈಗಾರಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಭಾರತ ಮತ್ತು ಅಫ್ಘಾನಿಸ್ತಾನದ ನಡುವಿನ ಆಮದು-ರಫ್ತಿನ ಮೇಲೂ ಪರಿಣಾಮ ಬೀರಬಹುದು ಅಂತಾ ತಜ್ಞರು ವಿಶ್ಲೇಸಿದ್ದಾರೆ.

ಇದನ್ನೂ ಓದಿ: ಉಗ್ರರ ಪೈಶಾಚಿಕ ಕೃತ್ಯ ಬೆನ್ನಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ.. ಗಾಬರಿಯಿಂದ ಠಾಣೆಗೆ ಬಂದ ಗಂಭೀರ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment