/newsfirstlive-kannada/media/post_attachments/wp-content/uploads/2024/10/Dolphin-Census.jpg)
ಗಂಗಾ, ಬ್ರಹ್ಮಪುತ್ರಾ ಹಾಗೂ ಇಂಡಸ್ ನದಿಯಲ್ಲಿರುವ ಡಾಲ್ಫಿನ್​ಗಳ ಗಣತಿಯನ್ನು ಭಾರತದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಮಾಡಲಾಗಿದೆ. ಈಗಾಗಲೇ ಈ ಒಂದು ನಿಟ್ಟಿನಲ್ಲಿ ಕಾರ್ಯವು ಶುರು ಆಗಿದ್ದು, ಸದ್ಯದಲ್ಲಿಯೇ ಅಂಕಿಅಂಶಗಳ ಬಿಡಗಡೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಜಗದ್ವಿಖ್ಯಾತ ಗಂಗಾ ನದಿಯಲ್ಲಿ ಹಾಗೂ ಬ್ರಹ್ಮಪುತ್ರಾ ಮತ್ತು ಮೇಘ್ನಾ ನದಿಯಲ್ಲಿರುವ ಡಾಲ್ಫಿನ್​ಗಳ ಗಣತಿಯನ್ನು ಈಗಾಗಲೇ ಕೈಗೊಳ್ಳಲಾಗಿದ್ದು. ಈ ಮೂರು ನದಿಗಳು ಭಾರತ ಸೇರಿದಂತೆ ಬಾಂಗ್ಲಾದೇಶ, ನೇಪಾಳ ಹಾಗೂ ಭೂತಾನ್​ನಲ್ಲಿ ಹರಿಯುತ್ತವೆ. ಈ ನದಿಗಳಲ್ಲಿ ಅಸಂಖ್ಯಾತ ಡಾಲ್ಫಿನ್​ಗಳು ಇದ್ದು ಅವುಗಳ ಗಣತಿಯನ್ನು ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ
ಇದನ್ನೂ ಓದಿ: ಪ್ರಾಮಾಣಿಕ ಕಳ್ಳರಿದ್ದಾರೆ ಎಚ್ಚರಿಕೆ! ಕಾರು ಕದ್ದು I am Sorry ಎಂದಿದ್ದೇಕೆ ಕಿಲಾಡಿ?
ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಈ ರೀತಿಯ ಒಂದು ಗಣತಿಯನ್ನು ನಾವು ಮಾಡಿದ್ದೇವೆ. ಈ ಒಂದು ಸರ್ವೇಯನ್ನು ಸುಮಾರು ಎರಡು ವರ್ಷಗಳಿಂದ ಮಾಡಲಾಗಿದ್ದು, ಗಂಗಾ ಬ್ರಹ್ಮಪುತ್ರಾ ಮತ್ತು ಇಂಡಸ್ ನದಿಗಳ ಒಟ್ಟು 8 ಸಾವಿರ ಕಿಲೋ ಮೀಟರ್​ ವ್ಯಾಪ್ತಿಯಲ್ಲಿ ಈ ಸರ್ವೆ ನಡೆದಿದೆ. ಸದ್ಯದಲ್ಲಿಯೇ ಡಾಲ್ಫಿನ್​ಗಳ ಗಣತಿಯ ಅಂಕಿ ಅಂಶಗಳನ್ನು ಬಹಿರಂಗಗೊಳಿಸಲಾಗುವುದು ಎಂದು ಭಾರತೀಯ ವನ್ಯಜೀವಿ ಸಂಸ್ಥೆ ತಿಳಿಸಿದೆ.
ಈ ಒಂದು ಗಣತಿಯನ್ನು ಭಾರತೀಯ ವನ್ಯಜೀವಿ ಸಂಸ್ಥೆಯು ಶುರು ಮಾಡಿದ್ದು. ಎರಡು ಹಂತಗಳಲ್ಲಿ ಗಣತಿಯನ್ನು ಮಾಡಲಾಗಿದೆ. ಒಂದು ಗಂಗಾ ನದಿಯಲ್ಲಿರುವ ಡಾಲ್ಫಿನ್​​​ಗಳ ಸಂತತಿ ಹಾಗೂ ಇಂಡಸ್ ನದಿಯಲ್ಲಿರುವ ಡಾಲ್ಫಿನ್​ಗಳ ಸಂತತಿಯ ಗಣತಿಯನ್ನು ಮಾಡಲಾಗಿದ್ದು. ಇದು ನದಿಯಲ್ಲಿರುವ ಡಾಲ್ಫಿನ್​ಗಳ ಅಸಲಿ ಸಂಖ್ಯೆಯನ್ನು ನಮ್ಮ ಮುಂದೆ ತೆರದಿಡಲಿದೆ. ಭವಿಷ್ಯದಲ್ಲಿ ಇದರಿಂದ ಅನೇಕ ಪ್ರಯೋಜನಗಳಿವೆ ಎಂದು ಹೇಳಲಾಗಿದೆ. ಸದ್ಯ ಡಾಲ್ಫಿನ್​ಗಳ ಗಣತಿಯನ್ನು ಒಂದು ಹಂತಕ್ಕೆ ಸಂಪೂರ್ಣಗೊಳಿಸಿರುವ ಇಲಾಖೆ, ಮುಂದೆ ಮರೀನ್ ಡಾಲ್ಫಿನ್​ ಅಂದ್ರೆ ಸಮುದ್ರದಲ್ಲಿರುವ ಡಾಲ್ಫಿನ್​ಗಳ ಗಣತಿಯನ್ನು ಕೂಡ ಕೈಗೆತ್ತಿಕೊಳ್ಳಲು ಸಿದ್ಧತೆ ನಡೆಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us