/newsfirstlive-kannada/media/post_attachments/wp-content/uploads/2024/11/IND-vs-SA.jpg)
ಸೌತ್​ ಆಫ್ರಿಕಾ ವಿರುದ್ಧ ಮೊದಲ ಟಿ20ಯಲ್ಲಿ ಆರ್ಭಟಿಸಿದ್ದ ಟೀಮ್​ ಇಂಡಿಯಾದ ಬ್ಯಾಟ್ಸ್​​ಮನ್​ಗಳು 2ನೇ ಟಿ20ಯಲ್ಲಿ ಸೈಲೆಂಟ್​ ಶೂರರಾಗಿಬಿಟ್ರು. ನಿನ್ನೆ ನಡೆದ ಪಂದ್ಯದಲ್ಲಿ ಸೌತ್​ ಆಫ್ರಿಕನ್​ ಬ್ಯಾಟ್ಸ್​ಮನ್​ಗಳು ಮರೆದಾಡಿದ್ರೆ, ಇಂಡಿಯನ್​ ಬ್ಯಾಟರ್ಸ್​ ಪೆವಿಲಿಯನ್​ ಪರೇಡ್​ ನಡೆಸಿದ್ರು. ರನ್​ಗಳಿಕೆ ತಿಣುಕಾಟ ನಡೆಸಿಬಿಟ್ರು.
ಡರ್ಬನ್​ನಲ್ಲಿ ನಡೆದ ಸೌತ್​ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಮೆರೆದಾಡಿದ್ದ ಟೀಮ್​ ಇಂಡಿಯಾ ಬ್ಯಾಟರ್​ಗಳು, 2ನೇ ಟಿ20ಯಲ್ಲಿ ಮಕಾಡೆ ಮಲಗಿದ್ರು. ಟಾಪ್​ ಆರ್ಡರ್​ ಬ್ಯಾಟರ್​ಗಳಂತೂ ಬ್ಯಾಕ್​ ಟು ಬ್ಯಾಕ್​ ಪೆವಿಲಿಯನ್​ ಸೇರಿದರು. ಆರಂಭಿಕನಾಗಿ ಕಣಕ್ಕಿಳಿದ ಕಳೆದ ಪಂದ್ಯದ ಶತಕವೀರ ಸಂಜು ಸ್ಯಾಮ್ಸನ್​, ಗೆಬೆರ್ಹಾದಲ್ಲಿ ಕಕ್ಕಾಬಿಕ್ಕಿಯಾದ್ರು. ಎದುರಿಸಿದ 3ನೇ ಎಸೆತದಲ್ಲೇ ಕ್ಲೀನ್​ಬೋಲ್ಡ್​ ಆದ ಸಂಜು ಡಕೌಟ್​ ಆಗಿ ನಿರ್ಗಮಿಸಿದರು.
ಇದನ್ನೂ ಓದಿ: ಪ್ರಯಾಣಿಕರೇ ಅಲರ್ಟ್, ಏರ್‌ಪೋರ್ಟಲ್ಲಿ ನಕಲಿ ಓಲಾ ಕ್ಯಾಬ್ ! ನಡು ರಾತ್ರಿಯಲ್ಲಿ ಆ ಯುವತಿ ಬಚಾವ್ ಆಗಿದ್ದೇ ರೋಚಕ
ಮತ್ತೊರ್ವ ಬ್ಯಾಟರ್​ ಅಭಿಷೇಕ್​ ಶರ್ಮಾದು ಅದೇ ರಾಗ. ಅದೇ ಹಾಡು. ವೈಫಲ್ಯದ ಸುಳಿಗೆ ಸಿಲುಕಿರೋ ಯುವ ಬ್ಯಾಟರ್​​ ಹಣೆಬರಹ ನಿನ್ನೆಯೂ ಬದಲಾಗಲಿಲ್ಲ. 4 ರನ್​ಗಳಿಸಿ ಪೆವಿಲಿಯನ್​ ಸೇರಿದರು. ಕ್ಯಾಪ್ಟನ್​ ಸೂರ್ಯಕುಮಾರ್ ಯಾದವ್​ ಕೂಡ ತಂಡಕ್ಕೆ ನೆರವಾಗಲಿಲ್ಲ. ಸಿಮಿಲಾನೆ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಸೂರ್ಯ ಬಿದ್ರು. 15 ರನ್​ಗಳಿಸುವಷ್ಟರಲ್ಲೇ ಪ್ರಮುಖ 3 ವಿಕೆಟ್​ ಕಳೆದುಕೊಂಡ ಟೀಮ್​ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತು.
ಮಿಲ್ಲರ್​ ಸ್ಟನ್ನಿಂಗ್​ ಕ್ಯಾಚ್​ಗೆ ತಿಲಕ್​ ವರ್ಮಾ ಬಲಿ
5ನೇ ವಿಕೆಟ್​ಗೆ ಜೊತೆಯಾದ ತಿಲಕ್​ ವರ್ಮಾ-ಅಕ್ಷರ್​ ಪಟೇಲ್​ ತಂಡಕ್ಕೆ ಚೇತರಿಕೆ ನೀಡೋ ಯತ್ನ ಮಾಡಿದ್ರು. ಸೌತ್​ ಆಫ್ರಿಕನ್​ ಕ್ಯಾಪ್ಟನ್​ ಏಡೆನ್​ ಮಾರ್ಕ್ರಮ್ ಇದಕ್ಕೆ ಅವಕಾಶ ನೀಡಲಿಲ್ಲ. 20 ರನ್​ಗಳಿಸಿ ಭರವಸೆ ಹುಟ್ಟುಹಾಕಿದ್ದ ತಿಲಕ್​ ವರ್ಮಾ, ಮಿಲ್ಲರ್​ ಹಿಡಿದ ಸ್ಟನ್ನಿಂಗ್​ ಕ್ಯಾಚ್​ಗೆ ಬಲಿಯಾದ್ರು.
ದುರಾದೃಷ್ಟಕರ ರೀತಿಯಲ್ಲಿ ಅಕ್ಷರ್ ಔ​ಟ್
ತಿಲಕ್​ ವರ್ಮಾ ಬೆನ್ನಲ್ಲೇ 4 ಬೌಂಡರಿ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದ ಅಕ್ಷರ್​ ಪಟೇಲ್ ಕೂಡ ಪೆವಿಲಿಯನ್​ ಸೇರಿದ್ರು. ದುರಾದೃಷ್ಟಕರ ರೀತಿಯಲ್ಲಿ ನಾನ್​​ ಸ್ಟ್ರೈಕರ್​ ಎಂಡ್​ನಲ್ಲಿ ರನೌಟ್​ಗೆ ಬಲಿಯಾದ್ರು. ಬಳಿಕ ಕಣಕ್ಕಿಳಿದ ರಿಂಕು ಸಿಂಗ್​ ಆಟ ಬಂದಷ್ಟೇ ವೇಗವಾಗಿ ಫಿನಿಶ್​ ಆಯ್ತು. 9 ರನ್​ಗಳಿಸಿ ಡಗೌಟ್ ಸೇರಿದ್ರು.
ಇದನ್ನೂ ಓದಿ:ಪೃಥ್ವಿಗೆ ಗ್ರೇಗ್ ಚಾಪೆಲ್ ಭಾವನಾತ್ಮಕ ಓಲೆ.. ಎಂಥವರಿಗೂ ಸ್ಫೂರ್ತಿ ತುಂಬುತ್ತೆ ಪತ್ರದ ಸಾಲುಗಳು..!
ಹಾರ್ದಿಕ್ ತಿಣುಕಾಟ
ಸೌತ್​ ಆಫ್ರಿಕಾ ಬೌಲರ್​ಗಳ ಎದುರು ಆಲ್​​ರೌಂಡರ್​ ಹಾರ್ದಿಕ್​ ಪಾಂಡ್ಯ ಕೂಡ ತಿಣುಕಾಟ ನಡೆಸಿದ್ರು. ಕೇವಲ 86.67ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್​ ಬೀಸಿದ ಪಾಂಡ್ಯ, 45 ಎಸೆತಗಳಲ್ಲಿ 39 ರನ್​ಗಳಿಸಿದ್ರು. ಸಾಲಿಡ್​ ಬೌಲಿಂಗ್​ ದಾಳಿ ನಡೆಸಿದ ಸೌತ್​ ಆಫ್ರಿಕಾ, ಟೀಮ್​ ಇಂಡಿಯಾವನ್ನ ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯ್ತು. 20 ಓವರ್​ಗಳ ಅಂತ್ಯಕ್ಕೆ 6 ವಿಕೆಟ್​ ನಷ್ಟಕ್ಕೆ 124 ರನ್​ಗಳಿಸಿದ ಟೀಮ್​ ಇಂಡಿಯಾ 125 ರನ್​ಗಳ ಸಾಧಾರಣ ಟಾರ್ಗೆಟ್​ ನೀಡ್ತು.
ಇದನ್ನೂ ಓದಿ:ಪೃಥ್ವಿಗೆ ಗ್ರೇಗ್ ಚಾಪೆಲ್ ಭಾವನಾತ್ಮಕ ಓಲೆ.. ಎಂಥವರಿಗೂ ಸ್ಫೂರ್ತಿ ತುಂಬುತ್ತೆ ಪತ್ರದ ಸಾಲುಗಳು..!
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us