ಪಾಕಿಸ್ತಾನದ ವಿರುದ್ಧ ಭಾರತ ಜಾಮರ್ ಅಸ್ತ್ರ; ಇದರಿಂದ ಪುಕ್ಕಲು ಪಾಕ್ ಸೇನೆಗೆ ಹೇಗೆ ಕಷ್ಟ ಆಗ್ತದೆ..?

author-image
Ganesh
Updated On
ಪಾಕಿಸ್ತಾನದ ವಿರುದ್ಧ ಭಾರತ ಜಾಮರ್ ಅಸ್ತ್ರ; ಇದರಿಂದ ಪುಕ್ಕಲು ಪಾಕ್ ಸೇನೆಗೆ ಹೇಗೆ ಕಷ್ಟ ಆಗ್ತದೆ..?
Advertisment
  • ಗಡಿಯಲ್ಲಿ ಪಾಕಿಸ್ತಾನಕ್ಕೆ ಮತ್ತೊಂದು ಮಾಸ್ಟರ್ ಸ್ಟ್ರೋಕ್​
  • ಯುದ್ಧ ಟ್ಯಾಂಕ್​ಗಳನ್ನು ತಂದು ನಿಲ್ಲಿಸಿದ ಭಾರತೀಯ ಸೇನೆ
  • ಯಾವುದೇ ಕ್ಷಣದಲ್ಲಾದರೂ ದಾಳಿ ಸಾಧ್ಯತೆ ಹೆಚ್ಚಿದೆ

ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಯುದ್ಧ ಭೀತಿಯ ಚಟುವಟಿಕೆಗಳು ಗರಿಗೆದರಿವೆ. ಇಂದು ಬೆಳಗ್ಗೆಯಿಂದ ನಿರಂತರವಾಗಿ ಒಂದೆಲ್ಲ ಒಂದು ಬೆಳವಣಿಗೆಗಳು ನಡೆಯುತ್ತಿದ್ದು, ಯಾವುದೇ ಕ್ಷಣದಲ್ಲಾದರೂ ಯುದ್ಧ ನಡೆಯುವ ಭೀತಿ ಎದುರಾಗಿದೆ.

ಈ ಮಧ್ಯೆ ಭಾರತೀಯ ಸೇನೆ, ಪಾಕಿಸ್ತಾನಕ್ಕೆ ಬಿಗ್ ಶಾಕ್ ನೀಡಿದೆ. ಭಾರತದಿಂದ ಪಶ್ಚಿಮ ಗಡಿಯಲ್ಲಿ ಜಾಮರ್ ಅಳವಡಿಕೆ ಮಾಡಿದೆ. ಇದರಿಂದ ಪಾಕಿಸ್ತಾನ ಯುದ್ಧ ವಿಮಾನಗಳ ಹಾರಾಟಕ್ಕೆ ಅಡಚಣೆ ಆಗಲಿದೆ. ಪಾಕಿಸ್ತಾನದ ಯುದ್ಧ ವಿಮಾನಗಳಿಗೆ ನಾವಿಗೇಷನ್ ಸಿಗದಂತೆ ಜಾಮರ್ ಅಳವಡಿಕೆ ಮಾಡಲಾಗಿದೆ.

ಇದನ್ನೂ ಓದಿ: ಮುಯ್ಯಿಗೆ ಮುಯ್ಯಿ.. ಪಾಕಿಸ್ತಾನಕ್ಕೆ ಈಗ ಏರ್​ಸ್ಟ್ರೈಕ್ ಆಘಾತ; ನಿನ್ನೆ ಭಾರತ ಏನ್ಮಾಡಿದೆ ಗೊತ್ತಾ..?

publive-image

ಪಾಕ್ ಮಿಲಿಟರಿ ಪಡೆಯುವ ಗ್ಲೋಬಲ್ ನಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ ಅನ್ನು ಬಳಸುತ್ತಿದೆ. ರಷ್ಯಾ, ಅಮೆರಿಕಾದ ಸ್ಯಾಟಲೈಟ್ ಮೂಲಕ ನಾವಿಗೇಷನ್ ಸಿಸ್ಟಮ್ ಬಳಕೆ ಮಾಡುತ್ತಿದೆ. ಇದೀಗ ಗಡಿಯಲ್ಲಿ ಭಾರತ ಜಾಮರ್ ಅಳವಡಿಸಿರೋದ್ರಿಂದ ಪಾಕ್​ನಿಂದ ನಿಖರ ದಾಳಿ ಸಾಧ್ಯವಾಗುವುದಿಲ್ಲ.

ಅಷ್ಟೇ ಅಲ್ಲ, ಪಂಜಾಬ್ ಗಡಿಗೆ ಯುದ್ಧ ಟ್ಯಾಂಕ್​ಗಳನ್ನು ಭಾರತದ ಸೇನೆ ರವಾನಿಸಿದೆ. ಗಡಿಯಲ್ಲಿ ಯುದ್ಧ ಟ್ಯಾಂಕ್​ಗಳು, ಬೋಪೋರ್ಸ್ ಫಿರಂಗಿಗಳನ್ನು ನಿಯೋಜಿಸಿದೆ. ಅತ್ತ ಪಾಕಿಸ್ತಾನದ ಕಡೆಯಿಂದಲೂ ಗಡಿಯಲ್ಲಿ ಯುದ್ಧ ಟ್ಯಾಂಕ್, ಶಸ್ತ್ರಾಸ್ತ್ರ ನಿಯೋಜನೆ ಮಾಡಿದೆ. ಹೀಗಾಗಿ ಗಡಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿದೆ. ಆ ಮೂಲಕ ಗಡಿಯಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ದಟ್ಟವಾಗಿದೆ.

ಇದನ್ನೂ ಓದಿ: ‘ಅಯ್ಯಯ್ಯೋ, ನಮ್ಮನ್ನು ಕಾಪಾಡಿ..’ ಅಮೆರಿಕ ಮುಂದೆ ಕಣ್ಣೀರಿಟ್ಟು ಬೇಡಿದ ಪಾಕ್ ಪ್ರಧಾನಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment