ಒಂದೇ ದಿನ 4 ಬಾರಿ ಲಾಹೋರ್​ನಲ್ಲಿ ಭಯಾನಕ ಡ್ರೋಣ್​​ ದಾಳಿ.. ಹೊತ್ತಿ ಉರಿಯುತ್ತಿರುವ ಇಡೀ ನಗರ

author-image
Bheemappa
Updated On
ಒಂದೇ ದಿನ 4 ಬಾರಿ ಲಾಹೋರ್​ನಲ್ಲಿ ಭಯಾನಕ ಡ್ರೋಣ್​​ ದಾಳಿ.. ಹೊತ್ತಿ ಉರಿಯುತ್ತಿರುವ ಇಡೀ ನಗರ
Advertisment
  • ಪಾಕ್​​ನಲ್ಲಿನ ಚೀನಾದ ಹೆಚ್​ಕ್ಯೂ-9 ಏರ್ ಡಿಫೆನ್ಸ್ ಸಿಸ್ಟಮ್ ನಾಶ
  • ಏರ್ ಡಿಫೆನ್ಸ್ ರಡಾರ್​ ನಾಶ ಮಾಡಿರುವುದಾಗಿ ಹೇಳಿರುವ ಭಾರತ
  • ಭಾರತದ ಕೆಲ ಪ್ರದೇಶಗಳನ್ನ ಟಾರ್ಗೆಟ್ ಮಾಡಿದ್ದ ಪಾಕ್​ಗೆ ಶಾಕ್​

ಪಾಕಿಸ್ತಾನದ ಲಾಹೋರ್​ನಲ್ಲಿರುವ ಏರ್ ಡಿಫೆನ್ಸ್ ಸಿಸ್ಟಮ್ ಮೇಲೆ ಭಾರತೀಯ ವಾಯು ಪಡೆ (ಐಎಎಫ್) ದಾಳಿ ಮಾಡಿ ಸರ್ವನಾಶ ಮಾಡಿದೆ. ಇದರಿಂದ ಪಾಪಿ ದೇಶಕ್ಕೆ ಮತ್ತೊಂದು ದೊಡ್ಡ ಏಟು ಬಿದ್ದಂತೆ ಅಗಿದೆ.

ಭಾರತದ ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್​ಕೋಟ್ ಹಾಗೂ ಅಮೃತ್​ಸರ ಸೇರಿದಂತೆ 15 ಪ್ರದೇಶಗಳ ಮೇಲೆ ಡ್ರೋನ್, ಮಿಸೈಲ್ ಅಟ್ಯಾಕ್ ಮಾಡುವಲ್ಲಿ ಪಾಕಿಸ್ತಾನ ವಿಫಲ ಯತ್ನ ಮಾಡಿದೆ. ಇದಕ್ಕೂ ಮೊದಲೇ ಭಾರತ ಅಟ್ಯಾಕ್ ಮಾಡಿ ಸರಿಯಾದ ಉತ್ತರ ಕೊಟ್ಟಿದೆ. ಲಾಹೋರ್​ನಲ್ಲಿರುವ ಪಾಕಿಸ್ತಾನದ ಪ್ರಮುಖ ರಕ್ಷಣಾ ಪ್ರದೇಶದ ಮೇಲೆ ಭಾರತ ದಾಳಿ ಮಾಡಿ ನಾಶ ಮಾಡಿದೆ. ಲಾಹೋರ್ ಮಾತ್ರವಲ್ಲ, ರಾವಲ್ಪಿಂಡಿ ಪ್ರದೇಶದಲ್ಲೂ ದಾಳಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಪಾಕಿಸ್ತಾನದ ಏರ್ ಡಿಫೆನ್ಸ್ ಸಿಸ್ಟಮ್​ ಮೇಲೆ ಭಾರತ ಸೇನೆ ದಾಳಿ ಮಾಡಿದ ಪರಿಣಾಮ ಎಲ್ಲವೂ ಸರ್ವ ನಾಶವಾಗಿದೆ. ಇದರಿಂದ ವಿರೋಧಿ ರಾಷ್ಟ್ರಕ್ಕೆ ದೊಡ್ಡ ನಷ್ಟ ಆದಂತೆ ಆಗಿದೆ. ಇನ್ನು ಪಾಕಿಸ್ತಾನದಲ್ಲಿ ವಾಸ್ತವವಾಗಿ ಸರಿಯಾದ ಏರ್ ಡಿಫೆನ್ಸ್ ಸಿಸ್ಟಮ್ ಇಲ್ಲ. ಚೀನಾದ ಹೆಚ್​ಕ್ಯೂ-9 ಏರ್ ಡಿಫೆನ್ಸ್ ಸಿಸ್ಟಮ್ ಅನ್ನು ಇಷ್ಟು ದಿನ ಬಳಸುತ್ತಿತ್ತು. ಆದರೆ ಈಗ ಏರ್ ಡಿಫೆನ್ಸ್ ರಡಾರ್​ಗಳನ್ನ ನಾಶ ಮಾಡಿರೋದಾಗಿ ಭಾರತ ಹೇಳಿದೆ.

ಭಾರತ ಹಾಗೂ ಪಾಕಿಸ್ತಾನ ನಡುವೆ ಘರ್ಷಣೆ ತೀವ್ರವಾಗುತ್ತಿದೆ. ಇದರ ಬೆನ್ನಲ್ಲೇ ಲಾಹೋರ್​ನಲ್ಲಿ ಏರ್​ ಡಿಫೆನ್ಸ್​ ಡಿಸ್ಟಮ್​ ಮೇಲೆ ಭಾರತ ದಾಳಿ ಮಾಡಿದೆ. ಇದರಿಂದ ಮತ್ತಷ್ಟು ಉದ್ವಿಗ್ನತೆ ಹೆಚ್ಚಾಗುವ ಆತಂಕ ಇರುವ ಹಿನ್ನೆಲೆಯಲ್ಲಿ ಲಾಹೋರ್​ನಲ್ಲಿರುವ ತನ್ನ ಪ್ರಜೆಗಳಿಗೆ ಬೇರೆ ಪ್ರದೇಶಕ್ಕೆ ಹೋಗುವಂತೆ ಅಮೆರಿಕ ಸೂಚನೆ ನೀಡಿದೆ. ಎರಡು ದೇಶಗಳ ನಡುವೆ ಯುದ್ಧ ಇನ್ನಷ್ಟು ಮುಂದುವರೆಯಬಹದು. ಹೀಗಾಗಿ ಲಾಹೋರ್ ಬಿಟ್ಟು ಹೋಗುವಂತೆ ತನ್ನ ನಾಗರಿಕರಿಗೆ ಅಮೆರಿಕ ಹೇಳಿದೆ.

ಇದನ್ನೂ ಓದಿ:ಪಾಕ್​ಗೆ ಚೀನಾ ನೀಡಿದ್ದ 2 ಕ್ಷಿಪಣಿ ಛಿದ್ರಛಿದ್ರ.. ಗೋಲ್ಡನ್ ಟೆಂಪಲ್ ಟಾರ್ಗೆಟ್​ ಮಾಡಿದ್ದ ಪಾಪಿಸ್ತಾನ್..?

publive-image

ಭಾರತೀಯ ಸೇನೆ ಹೇಳಿದ್ದೇನು?

  • ಮೇ 7, 8 ರಂದು ಪಾಕಿಸ್ತಾನದಿಂದ ಭಾರತದ ಪ್ರದೇಶಗಳ ಮೇಲೆ ದಾಳಿ
  • ಉತ್ತರ ಮತ್ತು ಪಶ್ಚಿಮ ಭಾರತದ ಮಿಲಿಟರಿ ನೆಲೆ ಟಾರ್ಗೆಟ್ ಮಾಡಿತ್ತು
  • ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್​ಕೋಟ್, ಅಮೃತ್​ಸರ
  • ಕಪುರ್​ತಲಾ, ಜಲಂಧರ್, ಲುಧಿಯಾನಾ, ಅದಮ್​ಪುರ, ಭಟಿಂಡಾ
  • ಚಂಡೀಗಢ, ನಾಲ್, ಫಲೋಡಿ, ಉತ್ತರಾಲೈ, ಭುಜ್ ಮೇಲೆ ಪಾಕ್ ದಾಳಿ
  • ಡ್ರೋಣ್ ಮತ್ತು ಮಿಸೈಲ್​ಗಳನ್ನ ಬಳಸಿ ದಾಳಿಗೆ ಯತ್ನಿಸಿದ ಪಾಕಿಸ್ತಾನ
  • ಇವುಗಳನ್ನ ಯುಎಎಸ್ ಮತ್ತು ಏರ್ ಡಿಫೆನ್ಸ್ ಸಿಸ್ಟಮ್​ನಿಂದ ತಡೆದ ಭಾರತ
  • ಈ ದಾಳಿಯ ಅವಶೇಷಗಳೇ ಈಗ ಪಾಕಿಸ್ತಾನದಲ್ಲಿ ಕಾಣಿಸುತ್ತಿರುವುದು
  • ಇವತ್ತು ಬೆಳಗ್ಗೆ ಪಾಕಿಸ್ತಾನದ ಏರ್ ಡಿಫೆನ್ಸ್ ರಡಾರ್, ಸಿಸ್ಟಮ್​ನ ಟಾರ್ಗೆಟ್
  • ಪಾಕಿಸ್ತಾನದ ಪ್ರದೇಶಗಳಲ್ಲಿ ಏರ್ ಡಿಫೆನ್ಸ್ ಸಿಸ್ಟಮ್ ಮೇಲೆ ಭಾರತದ ದಾಳಿ
  • ಲಾಹೋರ್​ನ ಏರ್ ಡಿಫೆನ್ಸ್ ಸಿಸ್ಟಮ್​ನೇ ಸರ್ವನಾಶ ಮಾಡಿದ ಭಾರತ

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment