ಭಾರತ ಮತ್ತೊಂದು ದಿಟ್ಟ ಹೆಜ್ಜೆ; ವಿಶ್ವದ ಅತ್ಯಂತ ಶಕ್ತಿಶಾಲಿ ಹೈಡ್ರೋಜನ್ ರೈಲು ಎಂಜಿನ್ ಅಭಿವೃದ್ಧಿ

author-image
Ganesh
Updated On
ಭಾರತ ಮತ್ತೊಂದು ದಿಟ್ಟ ಹೆಜ್ಜೆ; ವಿಶ್ವದ ಅತ್ಯಂತ ಶಕ್ತಿಶಾಲಿ ಹೈಡ್ರೋಜನ್ ರೈಲು ಎಂಜಿನ್ ಅಭಿವೃದ್ಧಿ
Advertisment
  • ಭಾರತೀಯ ರೈಲ್ವೆ ಅಗ್ಗದ ಪ್ರಯಾಣಕ್ಕೆ ಹೆಸರುವಾಸಿ
  • ನಿರ್ಭರ್​ ಭಾರತ್ ಅಡಿಯಲ್ಲಿ ಎಂಜಿನ್ ನಿರ್ಮಾಣ
  • ಸಚಿವ ಅಶ್ವಿನಿ ವೈಷ್ಣವ್​ರಿಂದ ಮಹತ್ವದ ಘೋಷಣೆ

ಭಾರತೀಯ ರೈಲ್ವೆ ದೇಶೀಯ ಹೈಡ್ರೋಜನ್ ಚಾಲಿತ ಎಂಜಿನ್ (Hydrogen Train Engine) ಅಭಿವೃದ್ಧಿಪಡಿಸಿದೆ. ಆ ಮೂಲಕ ಹೈಡ್ರೋಜನ್ ಚಾಲಿತ ರೈಲ್ವೇ ಇಂಜಿನ್‌ಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದ ನಾಲ್ಕನೇ ದೇಶ ಭಾರತವಾಗಿದೆ.

ಆತ್ಮ ನಿರ್ಭಾರ್​ ಭಾರತ್ ಅಡಿಯಲ್ಲಿ ವಿಶ್ವದ ಅತ್ಯಂತ ಶಕ್ತಿಶಾಲಿ ಹೈಡ್ರೋಜನ್ ರೈಲ್ವೆ ಎಂಜಿನ್​​ ಅನ್ನು ಅಭಿವೃದ್ಧಿಪಡಿಸಿದೆ. ಹೈಡ್ರೋಜನ್ ಚಾಲಿತ ರೈಲು ಎಂಜಿನ್ 500 ರಿಂದ 600 ಅಶ್ವಶಕ್ತಿಯ ( horsepower) ಸಾಮರ್ಥ್ಯವನ್ನು ಹೊಂದಿರುತ್ತವೆ. ಭಾರತ ನಿರ್ಮಾಣ ಮಾಡಿರುವ ಎಂಜಿನ್ ಸಾಮರ್ಥ್ಯವು 1200 ಅಶ್ವಶಕ್ತಿಯಾಗಿದೆ. ವಿಶೇಷ ಅಂದ್ರೆ ದೇಶಿಯ ಸಂಪನ್ಮೂಲವನ್ನೇ ಬಳಸಿಕೊಂಡು ಇದರ ನಿರ್ಮಾಣ ಆಗಿದೆ.

ಫಸ್ಟ್ ಟ್ರಯಲ್ ಎಲ್ಲಿ..?

1,200 ಅಶ್ವಶಕ್ತಿ ಹೊಂದಿರುವ ಎಂಜಿನ್‌ ಚಾಲಿತ ಹೈಡ್ರೋಜನ್ ರೈಲು ಶೀಘ್ರದಲ್ಲೇ ಟ್ರಯಲ್ ನಡೆಸಲಿದೆ. ಹರಿಯಾಣದ ಜಿಂದ್-ಸೋನಿಪತ್ ಮಾರ್ಗದಲ್ಲಿ ಪ್ರಯೋಗ ನಡೆಯಲಿದೆ. ಈ ಬಗ್ಗೆ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ. ಎಂಜಿನ್ ಸಿದ್ಧತೆ ಪೂರ್ಣಗೊಂಡಿದೆ, ಕಾರ್ಯಗಳು ಪ್ರಗತಿಯಲ್ಲಿವೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಜಿಯೋ ಬಳಕೆದಾರರೇ ಎಚ್ಚರ! ಈ ನಂಬರ್​​ನಿಂದ ಮಿಸ್ಡ್​ ಕಾಲ್ ಬಂದ್ರೆ ವಾಪಸ್ ಮಾಡಲೇಬೇಡಿ..!

ತಂತ್ರಜ್ಞಾನದ ಬೆಳವಣಿಗೆ ದೇಶದ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ವಿಶೇಷವಾಗಿ ದೇಶಿಯವಾಗಿ ಅಭಿವೃದ್ಧಿ ಹೊಂದಿದ ತಂತ್ರಜ್ಞಾನವು ಅನೇಕ ಪ್ರಯೋಜನಗಳನ್ನು ಹೊಂದಿದೆ. ಹೈಡ್ರೋಜನ್ ಚಾಲಿತ ಎಂಜಿನ್ ಈ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಿದರೆ, ಇದೇ ತಂತ್ರಜ್ಞಾನವನ್ನು ಟ್ರಕ್‌ಗಳು, ಟಗ್‌ಬೋಟ್‌ಗಳಿಗೂ ಅಳವಡಿಸಿಕೊಳ್ಳಬಹುದು ಎಂದಿದ್ದಾರೆ.

ಭಾರತೀಯ ರೈಲ್ವೆ ಅಗ್ಗದ ಪ್ರಯಾಣಕ್ಕೆ ಹೆಸರುವಾಸಿ. ವಂದೇ ಭಾರತ್ ರೈಲುಗಳು ಸ್ವಲ್ಪ ದುಬಾರಿ ಎನಿಸುತ್ತವೆ. ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಈಗ ನವೀಕರಿಸಲಾಗುತ್ತಿದೆ. ಅದು ಅಗ್ಗದ ದರದಲ್ಲಿ ಉತ್ತಮ ಪ್ರಯಾಣದ ಅನುಭವ ನೀಡುತ್ತಿದೆ.

ಇದನ್ನೂ ಓದಿ: ದೇಶದ ಭದ್ರತೆಗೆ ಹೊಸ ಕ್ರಾಂತಿ.. ಬ್ಯಾಟಲ್ ರೋಬೋ​​ ಎಂಟ್ರಿ.. ಇವುಗಳ ವಿಶೇಷತೆ ಏನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment