/newsfirstlive-kannada/media/post_attachments/wp-content/uploads/2025/05/Pakistan-F16-fighter-jet.jpg)
ಜಮ್ಮುಕಾಶ್ಮೀರದ ಮೇಲೆ ಮಿಸೈಲ್ಗಳಿಂದ ದಾಳಿ ಮಾಡಲು ಯತ್ನಿಸಿದ ಪಾಕಿಸ್ತಾನ್ಕ್ಕೆ ಭಾರತ ಸೇನೆ ತಿರುಗೇಟು ಕೊಟ್ಟಿದೆ. ಅಮೆರಿಕದಿಂದ ಖರೀದಿ ಮಾಡಿದ್ದ ಪಾಕಿಸ್ತಾನದ ಫೈಟರ್ ಜೆಟ್ ಎಫ್-16 ಅನ್ನು ಭಾರತದ ಬಲಿಷ್ಠ ವಾಯು ಸೇನೆ ಹೊಡೆದುರಳಿಸಿದೆ.
ಒಟ್ಟು 3 ಫೈಟರ್ ಜೆಟ್‌ಗಳು ಧ್ವಂಸ
F-16- 1
JF -17- 2
ಇದನ್ನೂ ಓದಿ:ಸೋಫಿಯಾ, ರಾಣಿ ಚೆನ್ನಮ್ಮನ ಮಡಿಲ ಹೆಮ್ಮೆಯ ಸೊಸೆ.. ಈ ಸಿಂಧೂರ ಸಿಂಹಿಣಿ ಖುರೇಷಿ ಲೈಫ್ ಜರ್ನಿ ಹೇಗಿದೆ?
ಜಮ್ಮು ವಿಮಾನ ನಿಲ್ದಾಣದ ಬಳಿ ಪಾಕ್ ಮತ್ತೆ ಬಾಲ ಬಿಚ್ಚಿಲು ಯತ್ನಿಸಿ ಡ್ರೋನ್ ದಾಳಿ ಮಾಡಿದೆ. ವಿಮಾನ ನಿಲ್ದಾಣದ ಬಳಿ ಸೇನಾ ನೆಲೆಯನ್ನ ಟಾರ್ಗೆಟ್ ಮಾಡಿದ್ದ ಪಾಕ್ ದಾಳಿಗೆ ಮುಂದಾಗಿತ್ತು. ಆದ್ರೆ ಪಾಕ್ ಡ್ರೋನ್‌ನನ್ನು ಭಾರತದ ಏರ್ ಡಿಫೆನ್ಸ್ ಹೊಡೆದುರುಳಿಸಿದೆ. ಎಫ್- 16 ಯುದ್ಧ ವಿಮಾನವನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. 6 ಕಡೆಗಳಲ್ಲಿ ಡ್ರೋನ್ ದಾಳಿಗೆ ಪಾಕ್ ಯತ್ನಿಸಿದೆ. ಚನಿ ಹಿಮತ್, ಆರ್‌ಎಸ್ ಪುರ, ಜಮ್ಮುವಿನಲ್ಲಿ ಡ್ರೋನ್ ದಾಳಿ ನಡೆಸಲಾಗಿದೆ. ಆದ್ರೆ ಇದನ್ನೆಲ್ಲ ಸೇನೆ ಹೊಡೆದುರುಳಿಸಿದೆ. ಸದ್ಯ ಜಮ್ಮುವಿನಾದ್ಯಂತ ವಾಯು ದಾಳಿ ಸೈರನ್ ಮೊಳಗಿದೆ.
ಎಫ್- 16 ಹೆಸರಿನ ಒಂದು ಫೈಟರ್ ಜೆಟ್ ಹಾಗೂ ಜೆಎಫ್-17 ಹೆಸರಿನ ಎರಡು ಯುದ್ಧ ವಿಮಾನಗಳನ್ನು ಭಾರತದ ವಾಯು ಸೇನೆ ನೆಲಕ್ಕುರುಳಿಸಿದೆ. ಇದರಿಂದ ಪಾಕಿಸ್ತಾನಕ್ಕೆ ಮತ್ತೆ ಭಾರೀ ಪೆಟ್ಟು ಬಿದ್ದಂತೆ ಆಗಿದೆ. ಲಾಹೋರ್ನ ಏರ್ ಡಿಫೆನ್ಸ್ ಸೆಂಟರ್ ಮೇಲೆ ದಾಳಿ ಮಾಡಿದ ಬೆನ್ನಲ್ಲೇ ಈಗ ಫೈಟರ್ ಜೆಟ್ಗೂ ಭಾರತ ಸೇನೆ ಬಿಗ್ ಪಂಚ್ ಮಾಡಿ ಯಶಸ್ಸು ಗಳಿಸಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ