/newsfirstlive-kannada/media/post_attachments/wp-content/uploads/2024/04/TULSI.jpg)
ಭಾರತದಲ್ಲಿ ತುಳಸಿ ಹಾಗೂ ಅದರ ಎಲೆಗಳಿಗೆ ಒಂದು ಧಾರ್ಮಿಕ ಮಹತ್ವವೇ ಇದೆ. ಕೇವಲ ಧಾರ್ಮಿಕವಾಗಿ ಮಾತ್ರವಲ್ಲ. ತುಳಸಿ ಎಲೆಗಳಲ್ಲಿ ಅನೇಕ ಔಷಧೀಯ ಗುಣಗಳು ಇರುವುದರಿಂದ ಇದನ್ನು ವಿಶೇಷವಾಗಿ ಕಾಣುತ್ತಾರೆ ಮತ್ತು ಇದು ಪೂಜಾರ್ಹಕ್ಕೆ ಮುಡಿಪಾದ ಸಸ್ಯವೆಂದು ಕಾಣುತ್ತಾರೆ. ಇದರ ಎಲೆಗಳನ್ನು ದೇವರ ಅಲಂಕಾರದಿಂದ ಹಿಡಿದು ದೇವರ ನೈವೇದ್ಯದವರೆಗೂ ಬಳಸಲಾಗುತ್ತದೆ. ಭಾರತದಲ್ಲಿ ಹೀಗೆ ವಿಶೇಷ ಸ್ಥಾನವನ್ನಲಂಕರಿಸಿದ ತುಳಸಿ ಹಾಗೂ ಅದರ ಎಲೆಗಳಿಗೀಗ ವಿದೇಶಗಳಲ್ಲಿ ಭಾರೀ ಡಿಮ್ಯಾಂಡ್ ಸೃಷ್ಟಿಯಾಗುತ್ತಿದೆ.
80 ದೇಶಗಳಿಂದ ತುಳಸಿ ಎಲೆಗಳಿಗಾಗಿ ಬೇಡಿಕೆ
ವಿಶ್ವದ ಸುಮಾರು 80 ರಾಷ್ಟ್ರಗಳು ಭಾರತದಿಂದ ತುಳಸಿ ಎಲೆಗಳನ್ನು ಆಮದು ಮಾಡಿಕೊಳ್ಳುತ್ತಿವೆ. ಆಶ್ಚರ್ಯವೆಂದರೆ ಇದರಲ್ಲಿ ಇಸ್ಲಾಂ ರಾಷ್ಟ್ರಗಳು ಕೂಡ ಸೇರಿವೆ. ಅದರಲ್ಲಿ ಪ್ರಮುಖವಾದ ದೇಶಗಳು ಅಂದ್ರೆ ಅಮೆರಿಕಾ, ಜರ್ಮನ್, ಸ್ಪೇನ್, ಬಾಂಗ್ಲಾದೇಶ, ಇರಾಕ್, ಆಸ್ಟ್ರೇಲಿಯಾ, ರೋಮಾನಿಯಾ, ರಷ್ಯಾ, ನೆದರ್ಲ್ಯಾಂಡ್ ಮತ್ತು ಸಿಂಗಾಪುರ್.
ಇದನ್ನೂ ಓದಿ:ವಿಶ್ವದ ರೊಮ್ಯಾಂಟಿಕ್ ಫ್ರೂಟ್.. ಪ್ರಣಯಕ್ಕೆ ಸೂಕ್ತವಾದ ಹಣ್ಣು ಎಂದು ಗುರುತಿಸುವುದು ಯಾವುದನ್ನ ಗೊತ್ತಾ?
ಇಷ್ಟು ದೇಶಗಳಲ್ಲಿ ಅತಿಹೆಚ್ಚು ತುಳಸಿ ಎಲೆಗಳನ್ನು ಖರೀದಿ ಮಾಡುತ್ತಿರುವ ರಾಷ್ಟ್ರ ಅಂದ್ರೆ ಅದು ಅಮೆರಿಕಾ. 80 ರಾಷ್ಟ್ರಗಳಲ್ಲಿಯೇ ಅಮೆರಿಕಾ ಅತಿಹೆಚ್ಚು ತುಳಸಿ ದಳಗಳನ್ನು ಖರೀದಿ ಮಾಡುತ್ತಿದೆ. ಏಕಾಏಕಿ ತುಳಸಿ ಎಲೆಗಳಿಗೆ ಇಷ್ಟೊಂದು ಬೇಡಿಕೆ ಸೃಷ್ಟಿಯಾಗಿದ್ದು ಏಕೆ. ಅದರ ಹಿಂದಿರುವ ಕಾರಣವೇನು ಎಂಬುದನ್ನು ಇಲ್ಲಿ ನಾವು ನಿಮಗೆ ತಿಳಿಸುತ್ತೇವೆ.
ಭಾರತದಿಂದ ವಿದೇಶಗಳು ಈ ಪ್ರಮಾಣದಲ್ಲಿ ತುಳಸಿ ಎಲೆಗಳನ್ನು ಆಮದು ಮಾಡಿಕೊಳ್ಳುತ್ತಿರುವುದರ ಹಿಂದೆ ಅನೇಕ ಕಾರಣಗಳು ಇವೆ. ಅದರಲ್ಲಿ ಪ್ರಮುಖವಾಗಿ ಔಷಧಿ ತಯಾರಿಕೆಯಲ್ಲಿ ತುಳಸಿ ಉಪಯೋಗಿಸಲು ಮತ್ತು ಚಹಾದಲ್ಲಿ ತುಳಸಿ ಬಳಕೆ ಮಾಡಿಕೊಳ್ಳಲು ಇಷ್ಟೊಂದು ಪ್ರಮಾಣದ ತುಳಸಿ ಎಲೆಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.
ಕೇವಲ ಔಷಧ ಮತ್ತು ಚಹಾ ತಯಾರಿಕೆಗೆ ಮಾತ್ರವಲ್ಲ ಕಾಸ್ಮೆಟಿಕ್ ಉತ್ಪಾದನೆಯಲ್ಲೂ ಈಗ ತುಳಸಿಯನ್ನು ಬಳಸಲಾಗುತ್ತಿದೆ. ಅನೇಕ ಕಂಪನಿಗಳು ತುಳಸಿಯನ್ನು ಬಳಸಿಕೊಂಡು ಸೌಂದರ್ಯವರ್ಧಕ ಉತ್ಪನ್ನಗಳನ್ನು ಉತ್ಪಾದಿಸುತ್ತಿವೆ. ಹೀಗಾಗಿ ವಿದೇಶಗಳಲ್ಲಿ ತುಳಸಿ ಎಲೆಗಳ ಬೇಡಿಕೆ ವಿಪರೀತವಾಗಿದೆ.
ಭಾರತೀಯ ಆಯುರ್ವೇದಿಕ ಪದ್ಧತಿಯಲ್ಲಿ ಅರಿಷಿಣ ಬಿಟ್ಟರೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡುವುದು ತುಳಸಿಗೆ. ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಯನ್ನು ಗುಣಗೊಳಿಸುವ ಸಾಮರ್ಥ್ಯದಿಂದ ಹಿಡಿದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ತುಳಸಿಗಿದೆ. ಸದ್ಯ ವಿಶ್ವದಲ್ಲಿ ಆಯುರ್ವೇದಿಕ ಔಷಧ ಪದ್ಧತಿಯ ಅಳವಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತಿದೆ. ಹೀಗಾಗಿ ತುಳಸಿ ದಳಕ್ಕೆ ಈಗ ಎಲ್ಲಿಲ್ಲದ ಡಿಮ್ಯಾಂಡ್ ಸೃಷ್ಟಿಯಾಗಿದೆ.
ಇದನ್ನೂ ಓದಿ:ಸಮುದ್ರಸೌತೆ ಬೆಲೆ ಕೋಟಿ ಕೋಟಿ, ಆರೋಗ್ಯಕ್ಕೆ ಅತ್ಯುತ್ತಮ ಆಹಾರ.. ಆದ್ರೆ ದೇಶದಲ್ಲಿ ತಿನ್ನುವಂತಿಲ್ಲ, ಯಾಕೆ?
ಇದಿಷ್ಟು ಮಾತ್ರವಲ್ಲ ಕೆಲವು ವಿದೇಶಿ ಕಂಪನಿಗಳು ತಾವು ತಯಾರು ಮಾಡುತ್ತಿರುವ ಸುಗಂಧದ್ರವ್ಯ ಅಂದ್ರೆ ಪರ್ಫ್ಯೂಮ್ನಲ್ಲಿಯೂ ಕೂಡ ತುಳಸಿಯ ಎಣ್ಣೆಯನ್ನು ಉಪಯೋಗಿಸಲು ಆರಂಭಿಸುತ್ತಿದ್ದಾರೆ.ಇನ್ನು ಅನೇಕ ವಿದೇಶಿ ಕಂಪನಿಳು ನೈಸರ್ಗಿಕ ಕೀಟ ನಾಶಕಗಳನ್ನು ಉತ್ಪಾದನೆ ಮಾಡುತ್ತಿದ್ದು. ಅವುಗಳ ತಯಾರಿಕೆಗೂ ಕೂಡ ಈ ತುಳಸಿಯನ್ನು ಉಪಯೋಗಿಸಲು ಆರಂಭಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ