ಗಡಿಯಲ್ಲಿ ಹದ್ದಿನ ಕಣ್ಣಿಡಲು ಬರ್ತಿವೆ MQ9B ಡ್ರೋನ್​ಗಳು; ಪಾಕ್-ಚೀನಾ ಎದೆಯಲ್ಲಿ ನಡುಕ; ಏನಿದರ ಸಾಮರ್ಥ್ಯ?

author-image
Gopal Kulkarni
Updated On
ಗಡಿಯಲ್ಲಿ ಹದ್ದಿನ ಕಣ್ಣಿಡಲು ಬರ್ತಿವೆ MQ9B ಡ್ರೋನ್​ಗಳು; ಪಾಕ್-ಚೀನಾ ಎದೆಯಲ್ಲಿ ನಡುಕ; ಏನಿದರ ಸಾಮರ್ಥ್ಯ?
Advertisment
  • ಗಡಿ ಕಾಯಲು ಬರುತ್ತಿವೆ ಅಮೆರಿಕಾದ ರಣಬೇಟೆಗಾರರಂತ ಡ್ರೋನ್​ಗಳು
  • ಪಾಕ್​-ಚೀನಾ ಉಪಟಳಕ್ಕೆ ಟಕ್ಕರ್ ಕೊಡಲು ಸಜ್ಜಾಗಿವೆ MQ9B ಡ್ರೋನ್
  • 3,600 ಕೋಟಿ ರೂಪಾಯಿಯ ಒಪ್ಪಂದ, ಪಾಕ್-ಚೀನಾ ಎದೆಯಲ್ಲಿ ನಡುಕ

ನವದೆಹಲಿ: ಚೀನಾ ಹಾಗೂ ಪಾಕಿಸ್ತಾನ ತನ್ನ ಗಡಿಯಲ್ಲಿ ಶಸ್ತ್ರಾಸ್ತ್ರಗಳನ್ನೊಳಗೊಂಡ ಡ್ರೋನ್​ನಂತ ಸೌಲಭ್ಯಗಳನ್ನು ಹೆಚ್ಚಿಸುತ್ತಿವೆ. ಈಗ ಭಾರತವೂ ಕೂಡ ನಾವೇನು ಹಿಂದೆ ಬಿದ್ದಿಲ್ಲ ಅನ್ನೋ ಲೆಕ್ಕದಲ್ಲಿ ಗಡಿಯಲ್ಲಿ ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸುವ ರಣಬೇಟೆಗಾರನಂತಹ ಡ್ರೋನ್​ಗಳ ಖರೀದಿಗೆ ಮುಂದಾಗಿದೆ.

ಈಗಾಗಲೇ ಈ ಬಗ್ಗೆ ಅಮೆರಿಕಾದೊಂದಿಗೆ ಮಾತುಕತೆ ನಡೆದಿದ್ದು, ಅತ್ಯಾಧುನಿಕ MQ9B ಡ್ರೋನ್​ಗಳ ಖರೀದಿಗೆ ಭಾರತ ಮುಂದಾಗಿದೆ. ಗಡಿರೇಖೆಯಲ್ಲಿ ಸದಾ ತಂಟೆಯನ್ನು ತೆಗೆಯುವ ಚೀನಾ ಹಾಗೂ ಪಾಕ್​​ಗಳ ಗಡಿಯಲ್ಲಿ ರಣಬೇಟೆಗಾರರನ್ನು ತಂದು ನಿಲ್ಲಿಸುವ ಕಾರ್ಯಕ್ಕೆ ಸದ್ಯ ಕೇಂದ್ರ ಸರ್ಕಾರ ಸಜ್ಜಾಗಿದೆ.

ಇದನ್ನೂ ಓದಿ: Breaking: ಇಸ್ರೋದಿಂದ ಮತ್ತೊಂದು ಐತಿಹಾಸಿಕ ಮೈಲಿಗಲ್ಲು.. ಭೂ ವೀಕ್ಷಣಾ ಕಿರು ಉಪಗ್ರಹ ಯಶಸ್ವಿ ಉಡಾವಣೆ

publive-image

MQ9B ಡ್ರೋನ್ ಸಾಮರ್ಥ್ಯ ಏನು? 
MQ9B ಡ್ರೋನ್ ಅಥವಾ ಪ್ರರೆಡಟರ್ ಬಿ ಡ್ರೋನ್ಸ್​ಗಳು ಶಸ್ತ್ರಾಸ್ತ್ರಗಳೊಂದಿಗೆ ಸುಮಾರು 40 ಸಾವಿರ ಅಡಿ ಎತ್ತರದಲ್ಲಿ 40 ಗಂಟೆಗಳ ಕಾಲ ಹಾರಾಡುವ ಶಕ್ತಿಯನ್ನು ಹೊಂದಿರುವ ಅತ್ಯಾಧುನಿಕ ಡ್ರೋನ್ ಏರ್ ಟು ಗ್ರೌಂಡ್ ಮಿಸೈಲ್, ಸ್ಮಾರ್ಟ್​ ಬಾಂಬ್​ಗಳನ್ನು ಹೊತ್ತೊಯ್ಯುವ ಶಕ್ತಿಯನ್ನು ಹೊಂದಿವೆ. ಆ ಶಸ್ತ್ರಾಸ್ತ್ರಗಳ ಮೂಲಕ ವೈರಿಪಡೆಯನ್ನು ಹೊಡೆದುರುಳಿಸುವ ಬಲವು ಈ ಡ್ರೋನ್​ಗಳಿಗಿದೆ. ಇಂತಹ ಒಟ್ಟು 31 ಡ್ರೋನ್​ಗಳ ಖರೀದಿಗೆ ಈಗಾಗಲೇ ಭಾರತ ಮತ್ತು ಅಮೆರಿಕಾದ ನಡುವೆ ಮಾತುಕತೆ ನಡೆದಿದೆ.

ಇದನ್ನೂ ಓದಿ:R N Agarwal: ಅಗ್ನಿ ಕ್ಷಿಪಣಿಗಳ ಪಿತಾಮಹ ಡಾ. ರಾಮ್ ನರೈನ್ ಅಗರ್ವಾಲ್ ನಿಧನ

3.500 ಕೋಟಿ ರೂಪಾಯಿ ಈ ಡೀಲ್​ಗೆ ಅಮೆರಿಕಾವೂ ಕೂಡ ಒಕೆ ಹೇಳಿದೆ. ಶಸ್ತ್ರಾಸ್ತ್ರಗಳ ಸಮೇತ ಅಂದ್ರೆ 170 ಹೆಲ್​ಫೈಯರ್ ಮಿಸೈಲ್ಸ್, ಸ್ಮಾರ್ಟ್ ಬಾಂಬ್ಸ್, ನೆವಿಗೇಷನ್ ಸಿಸ್ಟಮ್ ಮತ್ತು ಮೊಬೈಲ್ ಗ್ರೌಂಡ್ ಸಿಸ್ಟಮ್​ ಒಳಗೊಂಡ ಒಟ್ಟು 31 ಡ್ರೋನ್​ಗಳನ್ನು ಭಾರತಕ್ಕೆ ನೀಡಲು ಅಮೆರಿಕಾ ಗ್ರೀನ್ ಸಿಗ್ನಲ್ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment