/newsfirstlive-kannada/media/post_attachments/wp-content/uploads/2025/06/TEAM-INDIA-4.jpg)
- ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಸೋಲು
- 2ನೇ ಟೆಸ್ಟ್ ಸಂದರ್ಭದಲ್ಲಿ ತಂಡದಲ್ಲಿ ಇರಲ್ಲ ಈ ಆಟಗಾರ
- ಟೀಂ ಇಂಡಿಯಾ A ತಂಡದ ಮೂಲಕ ಲಂಡನ್ ಪ್ರವಾಸ
ಟೀಮ್​ ಇಂಡಿಯಾ ಟೆಸ್ಟ್​ ತಂಡದಿಂದ ವೇಗಿ ಹರ್ಷಿತ್​ ರಾಣಾರನ್ನ ರಿಲೀಸ್​ ಮಾಡಲಾಗಿದೆ. ಇಂಡಿಯಾ-ಎ ತಂಡದೊಂದಿಗೆ ಇಂಗ್ಲೆಂಡ್​ ಪ್ರವಾಸಕ್ಕೆ ತೆರಳಿದ್ದ ಹರ್ಷಿತ್​ ರಾಣಾರನ್ನ ಮೊದಲ ಟೆಸ್ಟ್​ಗೂ ಮುನ್ನ ಟೀಮ್​ ಇಂಡಿಯಾ ಜೊತೆ ಇರುವಂತೆ ಕೊರಿಕೊಳ್ಳಲಾಗಿತ್ತು.
ಇದೀಗ ಮೊದಲ ಟೆಸ್ಟ್​ ಪಂದ್ಯದ ಅಂತ್ಯದ ಬೆನ್ನಲ್ಲೇ ಹರ್ಷಿತ್​ ರಾಣಾನ ರಿಲೀಸ್​ ಮಾಡಲಾಗಿದೆ. ತಂಡದೊಂದಿಗೆ ಮುಂದಿನ ಪಂದ್ಯವನ್ನಾಡಲು ಬರ್ಮಿಂಗ್​ಹ್ಯಾಮ್​ಗೆ ತೆರಳಲ್ಲ ಎಂದು ವರದಿಯಾಗಿದೆ.
ಮೊದಲ ಟೆಸ್ಟ್​ನಲ್ಲಿ ಟೀಂ ಇಂಡಿಯಾ ಹೀನಾಯ ಸೋಲನ್ನು ಕಂಡಿದೆ. ಲೀಡ್ಸ್​ನಲ್ಲಿ ನಡೆದ ಟೆಸ್ಟ್​ನಲ್ಲಿ ಭಾರತೀಯ ಬ್ಯಾಟ್ಸಮನ್​ಗಳು ಅದ್ಭುತ ಆಟವನ್ನಾಡಿದ್ದರೂ ಕೂಡ, ಫೀಲ್ಡಿಂಗ್ ವೇಳೆ ನಡೆದ ಮಿಸ್ಟೇಕ್ಸ್​​ಗಳಿಂದಾಗಿ ಎದುರಾಳಿ ಇಂಗ್ಲೆಂಡ್​ ಐದು ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಇನ್ನು ಎರಡನೇ ಟೆಸ್ಟ್​ ಪಂದ್ಯವು ಜುಲೈ 2 ರಿಂದ ಆರಂಭವಾಗಲಿದೆ.
ಇದನ್ನೂ ಓದಿ: 4 ಕ್ಯಾಚ್ ಡ್ರಾಪ್ ಮಾಡಿದ್ದರೂ ಕಾಡಲಿಲ್ಲ ಪಶ್ಚಾತಾಪ.. ಡ್ಯಾನ್ಸ್ ಮಾಡಿ ಕೆಂಗಣ್ಣಿಗೆ ಗುರಿಯಾದ ಸ್ಟಾರ್..! VIDEO
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ