newsfirstkannada.com

ಕ್ಯಾನ್ಸರ್ ರೋಗಿಗಳಿಗೆ ಗುಡ್‌ನ್ಯೂಸ್.. ಭಾರತದಲ್ಲಿ CAR-T cell ಥೆರಪಿ ಸಕ್ಸಸ್‌; ತಪ್ಪದೇ ಸ್ಟೋರಿ ಓದಿ!

Share :

Published February 9, 2024 at 2:26pm

Update February 9, 2024 at 2:57pm

    ಕಾರ್‌-ಟಿ ಸೆಲ್ ಥೆರಪಿಗೆ ವಿದೇಶದಲ್ಲಿ 4 ಕೋಟಿ ಖರ್ಚಾಗುತ್ತೆ

    ಸದ್ಯ ಭಾರತದ ಮೂವರಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ

    ಕಾರ್‌-ಟಿ ಸೆಲ್ ಥೆರಪಿಗೆ ಒಳಗಾಗಿದ್ದ 15 ಜನರ ವರದಿ ಬರಬೇಕು

ನವದೆಹಲಿ: ಭಾರತೀಯ ಸೇನೆಯ ವೈದ್ಯರಾಗಿದ್ದ ಕರ್ನಲ್ ವಿ.ಕೆ ಗುಪ್ತಾ ಸೇರಿ ಮೂವರು ಕ್ಯಾನ್ಸರ್ ರೋಗಿಗಳಿಗೆ ಕಾರ್‌-ಟಿ ಸೆಲ್ ಥೆರಪಿ ಚಿಕಿತ್ಸೆ ನೀಡಲಾಗಿದ್ದು ಯಶಸ್ವಿಯಾಗಿದೆ.

ಅಹಮದಾಬಾದ್‌ನ ಟಾಟಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಗ್ಯಾಸ್ಟ್ರೋ ಎಂಟಾರಾಲಾಜಿಸ್ಟ್ ಡಾಕ್ಟರ್​ ವಿ.ಕೆ ಗುಪ್ತಾ ಸೇರಿ ಮೂವರಿಗೆ ಕಾರ್‌-ಟಿ ಸೆಲ್ ಥೆರಪಿ ಚಿಕಿತ್ಸೆ ಮಾಡಲಾಗಿತ್ತು. ಈ ಚಿಕಿತ್ಸೆಯಿಂದ ಸದ್ಯ ಮೂವರು ಗುಣಮುಖರಾಗಿದ ಹಿನ್ನೆಲೆಯಲ್ಲಿ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ವೈದ್ಯರು, ಆಸ್ಪತ್ರೆ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ. ಕ್ಯಾನ್ಸರ್ ಜೀವಕೋಶಗಳ ವಿರುದ್ಧ ಹೋರಾಡುವ ಥೆರಪಿ ಚಿಕಿತ್ಸೆಯು ಯಶಸ್ವಿಯಾಗಿರುವುದು ಇನ್ನು ಮುಂದೆ ಕ್ಯಾನ್ಸರ್​ನಿಂದ ಜನ ಗುಣಮುಖರಾಗಲಿದ್ದಾರೆ. ಹೀಗಾಗಿ ಕಾರ್‌-ಟಿ ಸೆಲ್ ಥೆರಪಿಯನ್ನು ವಾಣಿಜ್ಯ ಬಳಕೆ ಮಾಡಬಹುದು ಎಂದು CDSCO ಒಪ್ಪಿಗೆ ಸೂಚಿಸಿದೆ.

ಡಾಕ್ಟರ್​ ವಿ.ಕೆ ಗುಪ್ತಾ

ವಿದೇಶಗಳಲ್ಲಿ ಕ್ಯಾನ್ಸರ್​ ಚಿಕಿತ್ಸೆ ಪಡೆಯಲು ಸುಮಾರು 4 ಕೋಟಿ ರೂಪಾಯಿಗಳವರೆಗೆ ಖರ್ಚು ಬರುತ್ತದೆ. ಆದರೆ ಇದೀಗ ಭಾರತದಲ್ಲೇ ಈ ಚಿಕಿತ್ಸೆ ನೀಡುತ್ತಿರುವುದರಿಂದ ಕೇವಲ 42 ಲಕ್ಷ ರೂಪಾಯಿಗಳು ವೆಚ್ಚವಾಗುತ್ತದೆ. ಈ ಮೂವರನ್ನು ಬಿಟ್ಟು ಕಾರ್‌-ಟಿ ಸೆಲ್ ಥೆರಪಿಯನ್ನು ಇನ್ನೂ 15 ರೋಗಿಗಳಿಗೆ ನೀಡಲಾಗಿದ್ದು ವರದಿ ಬರುವುದು ಬಾಕಿ ಉಳಿದಿದೆ.

ಇದನ್ನೂ ಓದಿ: VIDEO: ರೀಲ್ ಅಲ್ಲ ರಿಯಲ್.. ರಾಜಮೌಳಿ RRR ದೃಶ್ಯದಂತೆ ಎದೆಯೊಡ್ಡಿ ನಿಂತ ಸೂಪರ್ ಕಾಪ್‌!

ಈ ಕಾರ್​​-ಟಿ ಸೆಲ್​ ಥೆರಪಿ ಚಿಕಿತ್ಸೆಯಿಂದ ಜೀವನಪೂರ್ತಿ ದೇಹದಿಂದ ಕ್ಯಾನ್ಸರ್ ಕೋಶಗಳಿಂದ ಮುಕ್ತರಾಗುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ. ಸದ್ಯ ವಿ.ಕೆ.ಗುಪ್ತಾರಲ್ಲಿ ಯಾವುದೇ ಕ್ಯಾನ್ಸರ್ ಕೋಶಗಳಿಲ್ಲ ಎಂದು ವೈದ್ಯ ಡಾ.ಹಸಮುಖ್ ಜೈನ್ ಸ್ಪಷ್ಟನೆ ನೀಡಿದ್ದಾರೆ. ಕಳೆದ ವರ್ಷದ ಆಕ್ಟೋಬರ್​ನಲ್ಲಿ ಸಿಡಿಎಸ್‌ಸಿಓನಿಂದ ಈ ಕ್ಯಾನ್ಸರ್​ ಚಿಕಿತ್ಸೆಗಾಗಿ ಒಪ್ಪಿಗೆ ಪಡೆದುಕೊಳ್ಳಲಾಗಿತ್ತು. ಇದು ದೇಶದ 10 ನಗರಗಳ 30 ಆಸ್ಪತ್ರೆಗಳಲ್ಲಿ ಕಾರ್-ಟಿ ಸೆಲ್ ಥೆರಪಿ ಚಿಕಿತ್ಸೆ ಲಭ್ಯವಿದೆ. 15 ವರ್ಷ ಮೇಲ್ಪಟ್ಟ ಬಿ- ಸೆಲ್ ಕ್ಯಾನ್ಸರ್​ನಿಂದ ಬಳಲುತ್ತಿರುವವರಿಗೆ ಈ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕ್ಯಾನ್ಸರ್ ರೋಗಿಗಳಿಗೆ ಗುಡ್‌ನ್ಯೂಸ್.. ಭಾರತದಲ್ಲಿ CAR-T cell ಥೆರಪಿ ಸಕ್ಸಸ್‌; ತಪ್ಪದೇ ಸ್ಟೋರಿ ಓದಿ!

https://newsfirstlive.com/wp-content/uploads/2024/02/CANSER.jpg

Load More