newsfirstkannada.com

ಇನ್ನೂ ಎರಡು ದಿನ ಗುಜರಾತ್‌ಗೆ ಗಂಡಾಂತರ; ಮಳೆರಾಯನ ಆರ್ಭಟಕ್ಕೆ ಮತ್ತಷ್ಟು ನಗರ, ಗ್ರಾಮಗಳು ಮುಳುಗಡೆ

Share :

Published July 2, 2023 at 7:03am

Update July 2, 2023 at 7:36am

    ಮಳೆಯ ಆರ್ಭಟಕ್ಕೆ ಹಲವು ನಗರ, ಗ್ರಾಮಗಳು ಜಲಾವೃತ

    ಕಳೆದ 24 ಗಂಟೆಗಳಲ್ಲಿ 398 ಮಿ.ಮೀ ಧಾರಾಕಾರ ಮಳೆ

    ಇನ್ನೂ ಎರಡು ದಿನಗಳ ಕಾಲ ಮಹಾಮಳೆ ಮುನ್ಸೂಚನೆ

ಉತ್ತರ ಭಾರತವನ್ನ ಬಿಟ್ಟು ಬಿಡದೇ ಕಾಡುತ್ತಿರೋ ಮಳೆರಾಯ ಹಲವು ಅವಾಂತರಗಳಿಗೆ ಮುನ್ನುಡಿ ಬರೆಯುತ್ತಿದ್ದಾನೆ. ವರುಣನ ಅಬ್ಬರಕ್ಕೆ ಇಲ್ಲಿವರೆಗೂ 11 ಮಂದಿ ಪ್ರಾಣ ಕಳೆದುಕೊಂಡು ಸಾವಿರಾರು ಜನರ ಬದುಕು ಬೀದಿಗೆ ಬಂದಿದೆ. ಮುಂದಿನ 24 ಗಂಟೆಯೂ ಮಳೆರಾಯ ಮತ್ತಷ್ಟು ರೌದ್ರನರ್ತನ ಮೆರೆಯಲ್ಲಿದ್ದಾನೆ ಅನ್ನೋ ಹವಾಮಾನ ಇಲಾಖೆಯ ಎಚ್ಚರಿಕೆ ಗಂಟೆ ಜನರ ನಿದ್ದೆಗೆಡಿಸಿದೆ. ಕರ್ನಾಟಕದಲ್ಲಿ ಮರೀಚಿಕೆಯಾಗಿರೋ ಈ ಮಳೆ ಹನಿಗಳು. ಉತ್ತರ ಭಾರತದಲ್ಲಿ ಉಗ್ರ ಸ್ವರೂಪನ್ನ ತಾಳಿದೆ. ಆಗಸದ ಅಂಚಿನಿಂದ, ಮೋಡಗಳ ಮರೆಯಿಂದ ಬ್ರೇಕ್​ ಇಲ್ಲದೇ ಧೋ ಅಂತ ಸುರಿಯುತ್ತಿರೋ ವರ್ಷಧಾರೆಗೆ ಉತ್ತರ ತತ್ತರವಾಗ್ತಿದೆ. 24\7 ಆನ್​ ಡ್ಯೂಟಿ ಅಂತಾ ಅಬ್ಬರಿಸಿ ಬೊಬ್ಬಿರಿಯುತ್ತಿರೋ ವರುಣಾ ರೌದ್ರಾವತಾರ ತೋರುತ್ತಿದ್ದಾನೆ. ವರುಣಾರ್ಭಟಕ್ಕೆ ಉತ್ತರದ ರಾಜ್ಯಗಳಿಗೆ ಆಳೆತ್ತರದ ಪ್ರವಾಹದ ನೀರು ಲಗ್ಗೆ ಇಟ್ಟು ಬಡವರ ಬದುಕನ್ನ ಮುರಾಬಟ್ಟೆ ಮಾಡಿದೆ.

24 ಗಂಟೆಗಳಲ್ಲಿ ಗುಜರಾತ್​ನಲ್ಲಿ ದಾಖಲೆಯ ಮಳೆ!

ಗುಜರಾತ್​ನಾದ್ಯಂತ ಕಳೆದ 24 ಗಂಟೆಗಳಲ್ಲಿ 398 ಮಿ.ಮೀ ಧಾರಾಕಾರ ಮಳೆಯಾಗಿದೆ. ಮಳೆ ಅಬ್ಬರಕ್ಕೆ ಕಚ್​, ಜಾಮ್​ನಗರ್​, ಜುನಾಗಢ್​ ಮತ್ತು ನವಸಾರಿ ಸೇರಿ 37 ತಾಲೂಕುಗಳು ನಲುಗಿಹೋಗಿವೆ. ತಗ್ಗು ಪ್ರದೇಶಗಳಿಗೆ ಪ್ರವಾಹದ ನೀರು ನುಗ್ಗಿ, ನದಿಯಂತಾಗಿರುವ ನಗರಗಳಲ್ಲಿ ಜನ-ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿವೆ. ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನ ಕಂಗಾಲಾಗಿ ಹೋಗಿದ್ದಾರೆ. ಜನರನ್ನ ಅಪಾಯದಿಂದ ಪಾರು ಮಾಡಲು ಎನ್​ಡಿಆರ್​ಎಫ್​ ಪಡೆ ಸ್ಥಳದಲ್ಲೇ ಬೀಡು ಬಿಟ್ಟಿವೆ. ಬಿಟ್ಟು ಬಿಡದೇ ಸುರಿಯುತ್ತಿರೋ ಮಳೆ ಕಳೆದ 48 ಗಂಟೆಗಳಲ್ಲಿ ಗುಜರಾತ್​ನಾದ್ಯಂತ 9 ಜನರನ್ನ ಬಲಿಪಡೆದಿದೆ. ಭೂಕುಸಿತ, ಮನೆಗಳ ಕುಸಿತ, ಪ್ರವಾಹದಲ್ಲಿ ಸಿಲುಕಿ ರಾಜ್ಯದ ವಿವಿಧೆಡೆ 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ವರುಣಾರ್ಭಟಕ್ಕೆ ಗುಜರಾತ್​ನಲ್ಲಿ 9 ಮಂದಿ ಸಾವು
ಭಾರೀ ಮಳೆಗೆ ಗಾಂಧಿಧಾಮ್​ ರೈಲ್ವೇ ನಿಲ್ದಾಣ ಜಲಾವೃತ

ಎಡೆಬಿಡದೆ ಸುರಿದ ಮಳೆರಾಯ ಗುಜರಾತ್​ ಗಾಂಧಿಧಾಮ್​ನಲ್ಲಿರುವ ರೈಲ್ವೇ ನಿಲ್ದಾಣವನ್ನ ಗುಳುಂ ಮಾಡಿದ್ದಾನೆ. ರೈಲ್ವೇ ಟ್ರಾಕ್​ ಹಾಗೂ ಪಾರ್ಕಿಂಗ್​ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದ್ದು, ವಾಹನಗಳು ಪ್ರವಾಹದ ನೀರಿನಲ್ಲಿ ಮುಳುಗಿ ಹೋಗಿವೆ.. ಇನ್ನೂ ಮಳೆಯ ಅಬ್ಬರಕ್ಕೆ ಗುಜರಾತ್​ನ ಕಲ್ವಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.. ಅಪಾಯದ ಮಟ್ಟವನ್ನು ಮೀರಿ ನದಿ ಉಕ್ಕಿಹರಿಯುತ್ತಿರೋ ಕಾರಣ ನದಿ ತೀರದ ಜನರನ್ನ ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡುವ ಕೆಲಸವನ್ನ ಜಿಲ್ಲಾಡಳಿತ ಮಾಡ್ತಿದೆ.. ಇನ್ನೂ ಮುಂದಿನ 24 ಗಂಟೆಗಳ ಕಾಲ ಮಳೆ ಮುದುವರೆಯುವ ಸಾಧ್ಯತೆ ಇದ್ದು ಜನರು ಎಚ್ಚರಿಕೆಯಿಂದ ಇರುವಂತೆ ಸರ್ಕಾರ ಸೂಚಿಸಿದೆ.

ಗುಜರಾತ್‌ನಲ್ಲಿ ಇನ್ನೂ ಎರಡು ದಿನ ಮಹಾಮಳೆ 

ಮಳೆಯ ಆರ್ಭಟಕ್ಕೆ ಗುಜರಾತ್‌ನ ಹಲವು ನಗರ ಮತ್ತು ಗ್ರಾಮಗಳು ಜಲಾವೃತವಾಗಿವೆ. ಕಚ್, ಜಾಮ್‌ನಗರ, ಜುನಾಗಢ್ ಮತ್ತು ನವಸಾರಿ ಸೇರಿದಂತೆ ಹಲವು ಕಡೆ ಭಾರೀ ಮಳೆಯಾಗಿದೆ. ಜುನಾಗಢ್, ಜಾಮ್‌ನಗರ, ಕಚ್, ವಲ್ಸಾದ್, ನವಸಾರಿ, ಮೆಹ್ಸಾನಾ ಮತ್ತು ಸೂರತ್‌ನ ಹಲವಾರು ಗ್ರಾಮಗಳು ಮತ್ತು ಪಟ್ಟಣಗಳು ​​ಜಲಾವೃತಗೊಂಡಿವೆ. ಅಧಿಕಾರಿಗಳ ಪ್ರಕಾರ, ಸೌರಾಷ್ಟ್ರ-ಕಚ್ ಮತ್ತು ದಕ್ಷಿಣ ಗುಜರಾತ್ ಪ್ರದೇಶದ ಜಿಲ್ಲೆಗಳ ಹಲವು ಪ್ರದೇಶಗಳು ಅತಿ ಹೆಚ್ಚು ಮಳೆಯಿಂದ ತಗ್ಗು ಪ್ರದೇಶ ಮತ್ತು ಗ್ರಾಮಗಳು ಮುಳುಗಡೆಯಾಗಿವೆ. ಈಗಾಗಲೇ ಈ ಗ್ರಾಮಗಳಲ್ಲಿ NDRF ಮತ್ತು SDRF ತಂಡ ನಿಯೋಜಿಸಲಾಗಿದೆ. ಮುಂದಿನ ಎರಡು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎನ್ನಲಾಗಿದೆ.

ಮುಂಬೈನಲ್ಲೂ ಮಳೆ ಅಬ್ಬರಕ್ಕೆ ಇಬ್ಬರು ಬಲಿ

ಮಹಾರಾಷ್ಟ್ರದಲ್ಲೂ ವರ್ಷಧಾರೆಯ ಅಬ್ಬರ ಮುಂದುವರೆದಿದ್ದು ಬಿಟ್ಟು ಬಿಡದೇ ಮಳೆ ಸುರಿಯುತ್ತಿದೆ. ವರುಣಾರ್ಭಟಕ್ಕೆ ರಾಜ್ಯದಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಮುಂಬೈನಲ್ಲಿ ನಿರಂತರ ಮಳೆಯಿಂದಾಗಿ ಅಂಧೇರಿಯ ಸುರಂಗಮಾರ್ಗಗಳು ಜಲಾವೃತವಾಗಿವೆ. ಮುಂಜಾಗ್ರತ ಕ್ರಮವಾಗಿ ಅಂಡರ್​ಪಾಸ್ ಬಳಿ ಬ್ಯಾರಿಕೇಡ್ ಹಾಕಿ ವಾಹನ ಸವಾರರು ತೆರಳದಂತೆ ಕಟ್ಟೆಚರ ವಹಿಸಲಾಗಿದೆ. ಉತ್ತರ ಭಾರತದ ಹಲವೆಡೆ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ಮಾಹಿತಿ ನೀಡಿದೆ.. ಅಲ್ಲದೇ ಯಲ್ಲೋ ಅಲರ್ಟ್ ಸಹ ಘೋಷಣೆ ಮಾಡಿದೆ.

ನೇಪಾಳದಲ್ಲಿ ಭೂಕುಸಿತ.. ಸಾವಿರಾರು ಜನರ ಪರದಾಟ

ಉತ್ತರ ಭಾರದಲ್ಲಿ ಮಳೆ ಅಬ್ಬರವಾದ್ರೆ ಅತ್ತ ನೇಪಾಳದಲ್ಲಿ ವಿಪರೀತ ಭೂಕುಸಿತ ಜನರ ನಿದ್ದೆಗೆಡಿಸಿದೆ. ನೇಪಾಳದ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿದ್ದು ರಸ್ತೆ ಮಾರ್ಗ ಬಂದ್ ಆಗಿದೆ. ತೆರವು ಕಾರ್ಯಾಚರಣೆ ವಿಳಂಬವಾದ ಕಾರಣ ಸಾವಿರಾರು ಜನರು ರಸ್ತೆಯಲ್ಲೇ ಸಿಲುಕಿ ಪರದಾಡುತ್ತಿದ್ದಾರೆ. ಭೂ ಕುಸಿತ ಉಂಟಾಗಿ ನಾರಾಯಣಘಾಟ್-ಮಗ್ಲಿಂಗ್ ರಸ್ತೆ ಸಂಪರ್ಕ ಕಡಿತವಾಗಿದ್ದು, ಕಳೆದ 24 ಗಂಟೆಗಳಿಂದ ಸಾವಿರಾರು ಪ್ರಯಾಣಿಕರು ರಸ್ತೆಯಲ್ಲೇ ತಂಗಿದ್ದಾರೆ. ದಕ್ಷಿಣದಲ್ಲಿ ಮಳೆಗಾಗಿ ಭೂರಮೆ ಬಾಯ್ತರೆದು ನಿಂತಿದ್ರೆ ಉತ್ತರದಲ್ಲಿ ಜಡಿ ಮಳೆ ಜನರ ಜಂಜಾಟಕ್ಕೆ ಕಾರಣವಾಗಿದೆ.. ಇನ್ನೂ ಮೂರ್ನಾಲ್ಕು ದಿನ ಉತ್ತರದಲ್ಲಿ ವುರುಣನ ಅಬ್ಬರ ಹೀಗೆ ಮುಂದುವರೆದ್ರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯೂ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇನ್ನೂ ಎರಡು ದಿನ ಗುಜರಾತ್‌ಗೆ ಗಂಡಾಂತರ; ಮಳೆರಾಯನ ಆರ್ಭಟಕ್ಕೆ ಮತ್ತಷ್ಟು ನಗರ, ಗ್ರಾಮಗಳು ಮುಳುಗಡೆ

https://newsfirstlive.com/wp-content/uploads/2023/07/rain-2.jpg

Load More