/newsfirstlive-kannada/media/post_attachments/wp-content/uploads/2024/11/VITAMIN-D-3.jpg)
ಭಾರತದ ಬಹುತೇಕ ಕಡೆ ಜನರು ವಿಟಮಿನ್ ಡಿ ಕೊರೆತೆಯಿಂದ ಬಳಲುತ್ತಿದ್ದಾರೆ. ದೇಶದಲ್ಲಿ ಹೇರಳವಾಗಿ ಸೂರ್ಯನ ಕಿರಣಗಳನ್ನು ಪಡೆಯುವ ಅವಕಾಶವಿದ್ದರೂ ಕೂಡ ಈ ಒಂದು ಸಮಸ್ಯೆ ಎಲ್ಲೆಡೆ ಕಾಣ ಸಿಗುತ್ತಿದೆ. ಇದು ಎಲುಬುಗಳ ಆರೋಗ್ಯದ ಮೇಲೆ, ರೋಗ ನಿರೋಧಕ ಶಕ್ತಿಯ ಮೇಲೆ, ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಲಾಗಿದೆ. ಇತ್ತೀಚಿನ ಅಧ್ಯಯನವೊಂದು ತುಂಬಾ ದೊಡ್ಡ ಪ್ರಮಾಣದಲ್ಲಿ ಭಾರತೀಯರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ಪಟ್ಟಣಗಳಲ್ಲಿ ವಾಸಿಸುತ್ತಿರುವ ಜನರು ಹೆಚ್ಚು. ಅವರ ಇನ್​ಡೋರ್ ಲೈಫ್​ಸ್ಟೈಲ್ ಡಾರ್ಕ್​ ಸ್ಕಿನ್, ಆಹಾರ ಕ್ರಮಗಳು ಇವೆಲ್ಲವುಗಳಿಂದ ವಿಟಮಿನ್ ಡಿ ಕೊರತೆಯಿಂದ ಹೆಚ್ಚು ಜನರು ಬಳಲುತ್ತಿದ್ದಾರೆ ಎಂದು ಹೇಳಿದೆ.
ನಾವು ಸೂರ್ಯನ ಕಿರಣಗಳಿಗೆ ನಮ್ಮ ಮೈಯನ್ನು ಒಡ್ಡಿಕೊಳ್ಳುವುದರಿಂದ ವಿಟಮಿನ್ ಡಿ ದೇಹದಲ್ಲಿ ಸೃಷ್ಟಿಯಾಗುತ್ತದೆ. ಇದು ಬಲಿಷ್ಠ ಎಲುಬುಗಳಿಗೆ ಸರಿಯಾದ ಪೋಷಕಾಂಶವಾಗಿ ಕಾರ್ಯ ನಿರ್ವಹಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಬಲಿಷ್ಠಗೊಳಿಸುತ್ತದೆ. ಯುವಿಬಿ ಕಿರಣಗಳು ಚರ್ಮದ ಮೇಲೆ ಬೀಳುವುದರಿಂದ ವಿಟಮಿನ್​ ಪೂರೈಕೆ ನಮ್ಮ ದೇಹಕ್ಕೆ ಆಗುತ್ತದೆ. ಇದು ನೈಸರ್ಗಿಕವಾದ ಹಾಗೂ ಅತ್ಯಂತ ಪರಿಣಾಮಕಾರಿಯಾದ ವಿಟಮಿನ್​ ಆಗಿ ನಮ್ಮ ದೇಹದ ಸರ್ವ ರೀತಿಯ ಆರೋಗ್ಯದ ಮೇಲೆ ಧನಾತ್ಮಕ ಪರಿಹಾರ ನೀಡುತ್ತದೆ.
ಸೂರ್ಯನ ಕಿರಣಗಳು ವಿಟಮಿನ್ ಡಿ ಉತ್ಪತ್ತಿ ಮಾಡುವದರ ಆಚೆಗೂ ಹಲವು ಉಪಯೋಗಗಳನ್ನು ನೀಡಿತ್ತವೆ. ಮಾನಸಿಕ ಆರೋಗ್ಯದ ಮೇಲೆಯೂ ಕೂಡ ಸೂರ್ಯನ ಕಿರಣಗಳು ಧನಾತ್ಮಕ ಪರಿಣಾಮವನ್ನು ಬೀರುತ್ತವೆ. ಸೂರ್ಯನ ಕಿರಣಗಳಿಂದ ಮೆದುಳಿನಲ್ಲಿ ಸೆರೊಟೊನಿನ್ ಅಂಶವನ್ನು ಉತ್ಪತ್ತಿ ಮಾಡುತ್ತದೆ ಇದರಿಂದಾಗಿ ಖಿನ್ನತೆ, ಆತಂಕದಂತಹ ಮಾನಸಿಕ ಸಮಸ್ಯೆಗಳು ದೂರವಾಗುತ್ತವೆ. ಇದರಿಂದ ನಮ್ಮ ನಿದ್ರೆಯ ಗುಣಮಟ್ಟವು ಕೂಡ ಉತ್ತಮಗೊಳ್ಳುತ್ತದೆ.
/newsfirstlive-kannada/media/post_attachments/wp-content/uploads/2024/11/VITAMIN-D-4.jpg)
ನಿತ್ಯ ನಾವು ಕೆಲವು ನಿಮಿಷಗಳ ಕಾಲ ಸೂರ್ಯ ಕಿರಣಕ್ಕೆ ನಮ್ಮ ಮೈವೊಡ್ಡುವುದರಿಂದ ಅದು ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ದೊಡ್ಡ ಧನಾತ್ಮಕ ಪರಿಣಾಮವನ್ನು ಬೀರಲಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಕೊಹೊರ್ಟ್ ಎಂಬ ಅಧ್ಯಯನದಲ್ಲಿ ಈ ಬಗ್ಗೆ ಹಲವು ವಿಷಯಗಳು ಬಹಿರಂಗಗೊಂಡಿವೆ. ಭಾರತದಲ್ಲಿ ಅದರಲ್ಲೂ ಉತ್ತರ ಭಾರತದಲ್ಲಿ ವಿಟಮಿನ್ ಡಿ ಕೊರತೆಯಿಂದ 50 ವರ್ಷ ಮೇಲ್ಪಟ್ಟವರಲ್ಲಿ ಶೇಕಡಾ 92 ರಷ್ಟು ಕೊರತೆಯಿಂದು ಹೇಳಲಾಗಿದೆ. ಇನ್ನು 50 ವರ್ಷದ ಒಳಗಿನವರಲ್ಲಿ ಶೇಕಡಾ 94 ರಷ್ಟು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಈ ಹತ್ತು ಆಹಾರಗಳ ಪದಾರ್ಥಗಳನ್ನು ಅಪ್ಪಿತಪ್ಪಿಯೂ ಹಸಿಯಾಗಿ ತಿನ್ನಬೇಡಿ? ಆರೋಗ್ಯಕ್ಕೆ ತುಂಬಾ ಅಪಾಯ!
ಕೇಸ್ ಕಂಟ್ರೋಲ್ ಎಂಬ ಅಧ್ಯಯನದಲ್ಲಿ 50 ಮಹಿಳೆಯರನ್ನು ಪರೀಕ್ಷಿಸಿದಾಗ 30 ರಿಂದ 34 ವಯಸ್ಸಿನ ಹೆಣ್ಣು ಮಕ್ಕಳಲ್ಲಿ ವಿಟಮಿನ್ ಡಿ ಕೊರತೆಯಿಂದ ಬೆನ್ನು ನೋವಿನಂತಹ ಸಮಸ್ಯೆಗಳು ಕಂಡು ಬಂದಿವೆ. ಸತತ ಮೂರು ತಿಂಗಳಿನಿಂದ ಇವರು ಎಲ್​ಬಿಪಿ ಅಂದ್ರೆ ಲೋವ್ ಬ್ಯಾಕ್​ನಂತಹ ಸಮಸ್ಯೆಯನ್ನು ವಿಟಮಿನ್ ಡಿ ಕೊರತೆಯಿಂದ ಅನುಭವಿಸುತ್ತಿದ್ದಾರೆ ಎಂಬ ಅಂಶ ಬಹಿರಂಗವಾಗಿದೆ. ಹಾಗಿದ್ದರೆ ಇದಕ್ಕೆ ಕಾರಣವೇನು ಎಂದು ನೋಡುವುದಾದ್ರೆ.
/newsfirstlive-kannada/media/post_attachments/wp-content/uploads/2024/11/VITAMIN-D-1.jpg)
ಹೊರಗಡೆ ಹೆಚ್ಚು ಸಮಯವನ್ನು ಕಳೆಯದೇ ಇರುವುದು.
ಭಾರತೀಯರು ಇಂದಿನ ಕಾಲಮಾನದಲ್ಲಿ ಮನೆಯ ಹೊರಗಡೆ ಹೆಚ್ಚು ಸಮಯ ಕಳೆಯುತ್ತಿಲ್ಲ. ಅದರಲ್ಲೂ ಪಟ್ಟಣದ ಜೀವನ ಮನೆ ಆಫೀಸ್​, ಆಫೀಸ್ ಮನೆ ಬಿಟ್ಟರೆ ಬೇರೆಲ್ಲೂ ಸುತ್ತಾಡುವುದಿಲ್ಲ ಹೀಗಾಗಿ ದೇಹದ ಮೇಲೆ ಬೀಳಬೇಕಾದ ಸೂರ್ಯನ ಕಿರಣಗಳಿಂದ ಇವರು ವಂಚಿತರಾಗುತ್ತಿದ್ದಾರೆ ಇದರಿಂದ ಹೆಚ್ಚು ವಿಟಮಿನ್ ಡಿ ಕೊರತೆಯನ್ನು ಅನುಭವಿಸುತ್ತಿದ್ದಾರೆ.
ಚರ್ಮದ ಬಣ್ಣ
ಭಾರತೀಯರು ಸಾಮಾನ್ಯವಾಗಿ ಗೋಧಿ ಬಣ್ಣದವರೇ ಆಗಿದ್ದಾರೆ. ಈ ಡಾರ್ಕ್​ ಸ್ಕಿನ್​ಗೆ ಸೂರ್ಯ ಕಿರಣಗಳು ತಾಗಿ ಅದು ದೇಹದಲ್ಲಿ ವಿಟಮಿನ್ ಡಿ ಪೂರೈಕೆ ಮಾಡಬೇಕು ಅಂದ್ರೆ ಹೆಚ್ಚು ಗಂಟೆಗಳ ಕಾಲ ನಾವು ಬಿಸಿಲಿನಲ್ಲಿ ನಿಲ್ಲಬೇಕಾಗುತ್ತದೆ. ನಮ್ಮ ಚರ್ಮದ ಬಣ್ಣ ವಿಟಮಿನ್ ಡಿಯನ್ನು ಬೇಗನೇ ಪೂರೈಕೆ ಮಾಡುವ ಶಕ್ತಿ ಇರುವುದಿಲ್ಲ. ಡಾರ್ಕ್​ ಸ್ಕಿನ್ ಕಾರಣದಿಂದಾಗಿ ಹೀಗಾಗುತ್ತದೆ. ಈ ಕಾರಣದಿಂದಾಗಿಯೇ ನಾವು ಹೆಚ್ಚು ಗಂಟೆಗಳ ಕಾಲ ಬಿಸಿಲಿನಲ್ಲಿ ಕಾಲ ಕಳೆಯಬೇಕಾಗುತ್ತದೆ. ಆದ್ರೆ ಇಂದಿನ ದಿನಮಾನದಲ್ಲಿ ಜನರು ತಮ್ಮ ಬದುಕಿನ ಹೆಚ್ಚು ಸಮಯವನ್ನು ಇಂಡೋರ್​ನಲ್ಲಿಯೇ ಕಳೆಯುತ್ತಿರುವುದರಿಂದ ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/11/VITAMIN-D-2.jpg)
ಆಹಾರ ಕ್ರಮ ಮತ್ತು ವಾಯು ಮಾಲಿನ್ಯ
ಆಹಾರ ಕ್ರಮ ಹಾಗೂ ವಾಯು ಮಾಲಿನ್ಯದಿಂದಲೂ ಕೂಡ ಈ ಒಂದು ಸಮಸ್ಯೆ ಸೃಷ್ಟಿಯಾಗುತ್ತದೆ. ಇಟಮಿನ್ ಡಿ ಸಿಗಬೇಕು ಅಂತಾದರೆ ನಾವು ಹೆಚ್ಚು ಮೀನು ಮೊಟ್ಟೆ ತಿನ್ನಬೇಕು ಆದ್ರೆ ಭಾರತೀಯರಲ್ಲಿ ಹೆಚ್ಚು ಜನರು ಸಸ್ಯಾಹಾರಿಗಳಾಗಿರುವುದರಿಂದ ಈ ಸಮಸ್ಯೆ ಸೃಷ್ಟಿಯಾಗಿದೆ. ಅದರ ಜೊತೆಗೆ ವಾಯು ಮಾಲಿನ್ಯದಿಂದಾಗಿಯೂ ಕೂಡ ಸೂರ್ಯನ ಬೆಳಕಿನ ಯುವಿಡಿ ರೇಡಿಯೇಷನ್​ಗಳು ಭೂಮಿಗೆ ತಾಗದಂತೆ ಮಾಡುತ್ತಿವೆ ಹೀಗಾಗಿ ವಿಟಮಿನ್ ಡಿ ಕೊರತೆಯು ಹೆಚ್ಚಾಗಿದೆ.
ಇದನ್ನೂ ಓದಿ:ಕಪ್ಪು ಒಣದ್ರಾಕ್ಷಿ ತಿನ್ನಬೇಕೋ, ತಿನ್ನಬಾರದೋ..? ಇವು ಆರೋಗ್ಯಕ್ಕೆ ಹೇಗೆ ಉಪಯೋಗ?
ಹಾಗಿದ್ದರೆ ಈ ಸಮಸ್ಯೆಯಿಂದ ಆಚೆ ಬರಲು ಏನು ಮಾಡಬೇಕು ಎಂಬುದಕ್ಕೂ ಕೂಡ ಅಧ್ಯಯನದಲ್ಲಿ ವಿವರಣೆ ನೀಡಲಾಗಿದೆ. ನಿತ್ಯ 10 ರಿಂದ 30 ನಿಮಿಷಗಳ ಕಾಲ ನಿಮ್ಮ ದೇಹಕ್ಕೆ ಯಾವುದೇ ಸನ್​ಸ್ಕ್ರೀನ್ ಲೇಪನ ಮಾಡದೆ ಸೂರ್ಯನ ಕಿರಣಗಳಿಗೆ ಒಡ್ಡಿಕೊಂಡು ನಿಲ್ಲಬೇಕು. ಎಳೆ ಬಿಸಿಲಿನಲ್ಲಿ ಹೆಚ್ಚು ಕಾಲ ಕಳೆಯಬೇಕು. ಮನೆಯಿಂದ ಆಚೆ ಬರುವಾಗ ದಪ್ಪದಾದ ಬಟ್ಟೆಗಳನ್ನು ಧರಿಸದೇ ತೆಳುವಾದ ಬಿಸಿಲು ಸ್ನೇಹಿ ಬಟ್ಟೆಯನ್ನು ಧರಿಸುವುದು ತುಂಬಾ ಉತ್ತಮ. ಹೆಚ್ಚು ಹೆಚ್ಚು ಹಾಲು, ಮಶ್ರೂಮ್, ಮೊಟ್ಟೆ, ಫ್ಯಾಟಿ ಫಿಶ್ ಸೇವಿಸಬೇಕು. ಸಸ್ಯಾಹಾರಿಗಳು ವೈದ್ಯರನ್ನು ಸಂಪರ್ಕಿಸಿ ವಿಟಮಿನ್ ಡಿ ಇರುವ ಸಸ್ಯಾಹಾರ ಯಾವುದು ಎಂದು ತಿಳಿದುಕೊಂಡು ಅದನ್ನು ಪಾಲಿಸಬೇಕು. ಸೂರ್ಯನ ಬೆಳಕು ಹಾಗೂ ಆರೋಗ್ಯ ಕ್ರಮ ನಮಗೆ ವಿಟಮಿನ್ ಡಿ ಪೂರೈಕೆಗೆ ಸಾಕು. ಆದ್ರೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ವೈದ್ಯರನ್ನು ಸಂಪರ್ಕಿಸಿ ಅವರು ನೀಡುವ ಸಲಹೆಗಳನ್ನು ತಪ್ಪದೇ ಪಾಲಿಸಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us