ಗಿಲ್​ ದ್ವಿಶತಕ ಬೆನ್ನಲ್ಲೇ ಇಂಗ್ಲೆಂಡ್​ ಮೇಲೆ ಆಕಾಶ್ ದೀಪ್ ಸ್ಟ್ರೈಕ್.. ಫುಲ್ ಶಾಕ್ ಟ್ರೀಟ್​ಮೆಂಟ್..!

author-image
Ganesh
Updated On
ಗಿಲ್​ ದ್ವಿಶತಕ ಬೆನ್ನಲ್ಲೇ ಇಂಗ್ಲೆಂಡ್​ ಮೇಲೆ ಆಕಾಶ್ ದೀಪ್ ಸ್ಟ್ರೈಕ್.. ಫುಲ್ ಶಾಕ್ ಟ್ರೀಟ್​ಮೆಂಟ್..!
Advertisment
  • ಟೀಮ್​ ಇಂಡಿಯಾದ ಬಿಗಿ ಹಿಡಿತದಲ್ಲಿ ಟೆಸ್ಟ್​ ಪಂದ್ಯ
  • 2ನೇ ದಿನದಾಟದಲ್ಲೂ ಟೀಮ್​ ಇಂಡಿಯಾ ಮೆರೆದಾಟ
  • ರವೀಂದ್ರ ಜಡೇಜಾ, ಸುಂದರ್​​ ಸಾಲಿಡ್​ ಬ್ಯಾಟಿಂಗ್​

ಎಡ್ಜ್​ಬಾಸ್ಟನ್​ ಟೆಸ್ಟ್​ನ 2ನೇ ದಿನದಾಟದಲ್ಲೂ ಟೀಮ್​ ಇಂಡಿಯಾ ಮೆರೆದಾಡಿತು. ಶುಭ್​ಮನ್​ ಗಿಲ್​, ರವಿಂದ್ರ ಜಡೇಜಾ, ವಾಷಿಂಗ್ಟನ್​ ಸುಂದರ್​ ಬ್ಯಾಟಿಂಗ್​ನಲ್ಲಿ ಆಂಗ್ಲರಿಗೆ ಸಖತ್​ ಕಾಟ ಕೊಟ್ರು. ಕೊನೆ ಸೆಷನ್​ನಲ್ಲಿ​​ ಆಕಾಶ್​​ದೀಪ್​, ಮೊಹ್ಮದ್​ ಸಿರಾಜ್​ ಕೊಟ್ಟ ಬೌಲಿಂಗ್​ನಲ್ಲಿ ಶಾಕ್​ ಟ್ರೀಟ್​ಮೆಂಟ್​ ನೀಡಿದ್ರು. ಇಂಡಿಯನ್​ ಟೈಗರ್ಸ್​ ಘರ್ಜನೆ ಆಂಗ್ಲ ಪಡೆ ಕಂಗಾಲ್​ ಆಯ್ತು.

ಸೆಷನ್​​ -1: ಗಿಲ್​-ಜಡೇಜಾ ಜಬರ್ದಸ್ತ್​ ಆಟಕ್ಕೆ ಆಂಗ್ಲರು ಸುಸ್ತು

5 ವಿಕೆಟ್​ ನಷ್ಟಕ್ಕೆ 310 ರನ್​ಗಳೊಂದಿಗೆ 2ನೇ ದಿನದಾಟವನ್ನ ಆರಂಭಿಸಿದ ಟೀಮ್​ ಇಂಡಿಯಾ ಸಾಲಿಡ್​​ ಓಪನಿಂಗ್​ ಪಡೆದುಕೊಳ್ತು. ಆಲ್​​ರೌಂಡರ್​​ ರವೀಂದ್ರ ಜಡೇಜಾ 80 ಎಸೆತಗಳಲ್ಲಿ ಅರ್ಧತಕ ಪೂರೈಸಿದ್ರೆ, ಶುಭ್​ಮನ್​ ಗಿಲ್ 150 ರನ್​ಗಳ ಗಡಿದಾಟಿದ್ರು. 6 ವಿಕೆಟ್​ಗೆ ಜಡೇಜಾ-ಗಿಲ್​ ದ್ವಿಶತಕದ ಜೊತೆಯಾಟವಾಡಿದ್ರು.

ಇದನ್ನೂ ಓದಿ: ಚೊಚ್ಚಲ ದ್ವಿಶತಕ ಬಾರಿಸಿದ ಶುಭ್​ಮನ್​ ಗಿಲ್​​.. ಆಂಗ್ಲರ ನೆಲದಲ್ಲಿ ಭಾರತದ ನಾಯಕನಿಂದ ಮಹತ್ವದ ಸಾಧನೆ!

publive-image

ಸಾಲಿಡ್​ ಇನ್ನಿಂಗ್ಸ್​ ಕಟ್ಟಿದ ರವೀಂದ್ರ ಜಡೇಜಾ ಶತಕ ಸಿಡಿಸೋ ಭರವಸೆಯನ್ನ ಮೂಡಿಸಿದ್ರು. ಶತಕದ ಹಾದಿಯಲ್ಲಿ ರವೀಂದ್ರ ಜಡೇಜಾ ಶಾರ್ಟ್​ಬಾಲ್​ ಟ್ರ್ಯಾಪ್​ಗೆ ಬಿದ್ರು. 137 ಎಸೆತ ಎದುರಿಸಿದ್ದ ರವೀಂದ್ರ ಜಡೇಜಾ 10 ಬೌಂಡರಿ, 1 ಸಿಕ್ಸರ್​ ಸಹಿತ 89 ರನ್​ಗಳಿಸಿ ಔಟಾದ್ರು. ಆ ಬಳಿಕ ಶುಭ್​ಮನ್​ಗಿಲ್​ ಜೊತೆಗೂಡಿದ ವಾಷಿಂಗ್ಟನ್​ ಸುಂದರ್​​ ಡಿಸೆಂಟ್​ ಆಟವಾಡಿದ್ರು. ಮೊದಲ ಸೆಷನ್ ಅಂತ್ಯಕ್ಕೆ 6 ವಿಕೆಟ್​ ನಷ್ಟಕ್ಕೆ 419 ರನ್​ಗಳಿಸಿತು.

ಸೆಷನ್​​ -2: ಗಿಲ್ ಘರ್ಜನೆ,​ ಡಬಲ್​ ಸೆಂಚುರಿ ಧಮಾಕಾ

2ನೇ ಸೆಷನ್​ನಲ್ಲಿ ಗಿಲ್​ ಸೂಪರ್ಬ್​ ಬ್ಯಾಟಿಂಗ್​ ಮುಂದುವರೆಸಿದ್ರು. ಇಂಗ್ಲೆಂಡ್​ ಬೌಲರ್​ಗಳ ಬೆಂಡಿತ್ತಿದ ಇಂಡಿಯನ್​ ಕ್ಯಾಪ್ಟನ್​ ಡಬಲ್​ ಸೆಂಚುರಿ ಸಿಡಿಸಿ ಘರ್ಜಿಸಿದ್ರು. 311 ಎಸೆತಗಳಲ್ಲಿ ಪ್ರಿನ್ಸ್​ ಶುಭ್​ಮನ್​ ಗಿಲ್​ ದ್ವಿಶತಕ ಪೂರೈಸಿದ್ರು.

ಇದನ್ನೂ ಓದಿ: DPL- 2 ಎಂಟ್ರಿಗೆ ‘ಆರ್ಯವೀರರು’ ಸಜ್ಜು.. ಕಿಂಗ್​ ಕೊಹ್ಲಿ, ಸೆಹ್ವಾಗ್​ ಆಸೆ ನೆರವೇರಿಸ್ತಾರಾ..?

ಶುಭ್​ಮನ್​ ಗಿಲ್​ ಜೊತೆಗೆ ವಾಷಿಂಗ್ಟನ್​ ಸುಂದರ್​​ ಜೊತೆಯಾಟವಾಡಿದ್ರು. 7ನೇ ವಿಕೆಟ್​​ಗೆ ಶುಭ್​ಮನ್​ ಗಿಲ್​ - ವಾಷಿಂಗ್ಟನ್​ ಸುಂದರ್​​ ಶತಕದ ಜೊತೆಯಾಟವಾಡಿದ್ರು. 103 ಎಸೆತ ಎದುರಿಸಿ 1 ಸಿಕ್ಸರ್​, 3 ಬೌಂಡರಿ ಬಾರಿಸಿದ ವಾಷಿಂಗ್ಟನ್​ ಸುಂದರ್​​ 42 ರನ್​ಗಳಿಸಿ ಔಟಾದ್ರು. ಅತ್ತ ಶುಭ್​ಮನ್​ ಗಿಲ್​ 250 ರನ್​ಗಳಿಸಿ ಸಂಭ್ರಮಿಸಿದ್ರು. 2ನೇ ಸೆಷನ್​ನಲ್ಲಿ 1 ವಿಕೆಟ್​ ಕಳೆದುಕೊಂಡ ಟೀಮ್​ ಇಂಡಿಯಾ 31 ಓವರ್​​ಗಳಲ್ಲಿ ಬರೋಬ್ಬರಿ 145 ರನ್​ಗಳಿಸಿತು. ಇದ್ರೊಂದಿಗೆ 7 ವಿಕೆಟ್​ ನಷ್ಟಕ್ಕೆ 564 ರನ್​ಗಳಿಸಿತು.

ಸೆಷನ್​​ -3: 587ಕ್ಕೆ ಇಂಡಿಯಾ ಆಲೌಟ್​, ಆಂಗ್ಲರಿಗೆ ಆರಂಭಿಕ ಆಘಾತ

3ನೇ ಸೆಷನ್​ನಲ್ಲಿ ಟೀಮ್​ ಇಂಡಿಯಾ ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಕಳೆದುಕೊಳ್ತು. ತ್ರಿಶತಕದ ಹಾದಿಯಲ್ಲಿ ಎಡವಿದ ಶುಭ್​ಮನ್​ ಗಿಲ್​ 269 ರನ್​ಗಳಿಗೆ ಆಟ ಮುಗಿಸಿದ್ರು. ಆಕಾಶ್​ ದೀಪ್​, ಮೊಹಮ್ಮದ್​ ಸಿರಾಜ್​ ಸಿಂಗಲ್​ ಡಿಜಿಟ್​ ದಾಟಲಿಲ್ಲ. 587 ರನ್​ಗಳಿಗೆ ಟೀಮ್​ ಇಂಡಿಯಾ ಆಲೌಟ್​ ಆಯ್ತು. ಬಳಿಕ ಮೊದಲ ಇನ್ನಿಂಗ್ಸ್​ ಆರಂಭಿಸಿದ ಇಂಗ್ಲೆಂಡ್​ ಆರಂಭಿಕ ಆಘಾತ ಎದುರಿಸಿತು. ಬೆನ್​ ಡಕೆಟ್​, ಒಲಿ ಪೋಪ್​ಗೆ ಅಕೌಂಟ್​​ ಓಪನ್​​ ಮಾಡೋಕೆ ವೇಗಿ ಆಕಾಶ್​ದೀಪ್​ ಬಿಡಲಿಲ್ಲ. 3 ಬೌಂಡರಿ ಬಾರಿಸಿ ಅಬ್ಬರಿಸೋ ಸೂಚನೆ ನೀಡಿದ ಜಾಕ್​​ ಕ್ರಾವ್ಲಿ ಆಟಕ್ಕೆ ಸಿರಾಜ್​ ಅಂತ್ಯ ಹಾಡಿದ್ರು.

ಕ್ರಿಸ್​ನಲ್ಲಿ ಜೊತೆಯಾಗಿರುವ ಜೋ ರೂಟ್​, ಹ್ಯಾರಿ ಬ್ರೂಕ್​ ತಂಡಕ್ಕೆ ಚೇತರಿಕೆ ನೀಡ್ತಿದ್ದಾರೆ. ದಿನದ ಅಂತ್ಯಕ್ಕೆ ಇಂಗ್ಲೆಂಡ್​ 3 ವಿಕೆಟ್​ ನಷ್ಟಕ್ಕೆ 77 ರನ್​ಗಳಿಸಿದ್ದು, 510 ರನ್​​ಗಳ ಹಿನ್ನಡೆಯಲ್ಲಿದೆ. 18 ರನ್​ಗಳೊಂದಿಗೆ ಜೋ ರೂಟ್​, 30 ರನ್​ಗಳೊಂದಿಗೆ ಹ್ಯಾರಿ ಬ್ರೂಕ್​​ ಕ್ರಿಸ್​ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ: ಮಹೇಂದ್ರ ಸಿಂಗ್​ ಧೋನಿಗಾಗಿ ಯುವರಾಜ್​ ಸಿಂಗ್​ಗೆ ವಿಲನ್ ಆದ್ರಾ ಕ್ರಿಕೆಟ್​ ದೇವ್ರು ಸಚಿನ್​..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment