/newsfirstlive-kannada/media/post_attachments/wp-content/uploads/2025/04/INDIAS-TWO-switzerland.jpg)
ಪ್ರವಾಸಿ ತಾಣಗಳಲ್ಲಿ ವಿಶ್ವದಲ್ಲಿ ಅತಿಹೆಚ್ಚು ಪ್ರಸಿದ್ಧಿ ಪಡೆದಿರುವ ಪ್ರದೇಶ ಅಂದ್ರೆ ಅದು ಸ್ವಿಟ್ಜರ್ಲೆಂಡ್. ಇಲ್ಲಿನ ತಂಪಾದ ವಾತಾವವರಣ ಸುತ್ತಲೂ ಹಿಮದಿಂದ ಕೂಡಿದ ಪರ್ವತಗಳು. ಹಸಿರು ತುಂಬಿರುವ ಪ್ರದೇಶ ಇವೆಲ್ಲವೂ ಕೂಡ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತವೆ. ಆದರೆ ಭಾರತದಲ್ಲಿಯೂ ಸ್ವಿಟ್ಜರ್ಲೆಂಡ್ಗೆ ಏನೂ ಕಡಿಮೆಯಿಲ್ಲದಂತಹ ಪ್ರವಾಸಿ ತಾಣಗಳಿವೆ. ಇಲ್ಲಿ ಹೋದರೆ ಸ್ವಿಟ್ಜರ್ಲೆಂಡ್ಗೆ ಹೋದ ಅನುಭವವೇ ಆಗುತ್ತದೆ. ಭಾರತದಲ್ಲಿ ಸ್ವಿಟ್ಜರ್ಲೆಂಡ್ಗೆ ಹೋಲುವಂತಹ ಪ್ರವಾಸಿ ತಾಣಗಳು ಒಂದಲ್ಲ. ಎರಡು ಇವೆ. ಅದಕ್ಕೆ ಕೆಲವರು ವಿಶ್ವದಲ್ಲಿ ಒಂದೇ ಒಂದು ಸ್ವಿಟ್ಜರ್ಲೆಂಡ್ ಇದ್ದರೆ, ಭಾರತದಲ್ಲಿ ಎರಡು ಸ್ವಿಟ್ಜರ್ಲೆಂಡ್ಗಳಿವೆ ಎಂದು ಹೇಳುತ್ತಾರೆ.
ಭಾರತದಲ್ಲಿ ಸ್ವಿಸ್ ಹೋಲುವಂತಹ, ಅಲ್ಲಿಯೇ ಅಲೆದಾಡಿದಂತಹ ಅನುಭವ ಕೊಡುವ ಪ್ರದೇಶ ಅಂದ್ರೆ ಮೊದಲನೆಯದು ಉತ್ತರಾಖಂಡ್ನಲ್ಲಿದೆ.ಇದನ್ನು ಉತ್ತರಾಖಂಡ್ನ ಮಿನಿ ಸ್ವಿಟ್ಜರ್ಲೆಂಡ್ ಎಂದೇ ಕರೆಯಲಾಗುತ್ತದೆ. ಅದರ ಹೆಸರು ಔಲಿ ಹಿಲ್ ಸ್ಟೇಷನ್. ನೀವು ಇಲ್ಲಿ ಹೋದರೆ ಸಂಪೂರ್ಣವಾಗಿ ಸ್ವಿಸ್ಗೆ ಹೋದ ಅನುಭವವನ್ನೇ ನೀಡುತ್ತದೆ. ಈ ಹಿಲ್ ಸ್ಟೇಷನ್ನಲ್ಲಿ ನಾಲ್ಕು ದಿಕ್ಕುಗಳೂ ಹಿಮವನ್ನೇ ಹೊದ್ದುಕೊಂಡು ನಿಂತಿರುತ್ತವೆ. ಸ್ವಿಟ್ಜರ್ಲೆಂಡ್ನಲ್ಲಿ ಹೋದಾಗ ಸಿಗುವ ವಾತವಾರಣ ಅನುಭವ ಇವೆಲ್ಲವನ್ನೂ ನೀವು ಉತ್ತರಾಖಂಡ್ನ ಔಲಿ ಹಿಲ್ ಸ್ಟೇಷನ್ನಲ್ಲಿ ಪಡೆಯಬಹುದು. ಇಲ್ಲಿಗೆ ಬಂದ ಜನರು ಇದು ನಿಜಕ್ಕೂ ಭಾರತದ ಸ್ವಿಟ್ಜರ್ಲೆಂಡ್ ಎಂದು ಮನಸಾರೆ ಒಪ್ಪಿಕೊಂಡು. ಇಲ್ಲಿಯ ಪ್ರವಾಸದ ಅನುಭವದ ಕಥನವನ್ನು ಹೇಳುತ್ತಾರೆ.
ಇನ್ನು ಭಾರತದಲ್ಲಿರುವ ಮತ್ತೊಂದು ಸ್ವಿಟ್ಜರ್ಲೆಂಡ್ ಅಂದ್ರೆ ಅದು ಹಿಮಾಚಲಪ್ರದೇಶದಲ್ಲಿದೆ. ಹಿಮಾಚಲ ಪ್ರದೇಶದ ಖಜ್ಜಿಯಾರ್ ಹಿಲ್ ಸ್ಟೇಷನ್ನ್ನು ಭಾರತದ ಮತ್ತೊಂದು ಸ್ವಿಟ್ಜರ್ಲೆಂಡ್ ಎಂದೇ ಗುರುತಿಸಲಾಗುತ್ತದೆ. ಇದು ಸಂಪೂರ್ಣವಾಗಿ ಸ್ವಿಸ್ನಲ್ಲಿ ನಮಗೆ ಕಾಣ ಸಿಗುವ ಸೌಂದರ್ಯವನ್ನೇ ನಮ್ಮ ಅನುಭವಕ್ಕೆ ತರುತ್ತದೆ. ಖಜ್ಜರಿಯಾ ಹಿಲ್ ಸ್ಟೇಷನ್ನಲ್ಲಿ ನೀವು ಖಜ್ಜರಿಯಾ ತಾಲ್ ಜೊತೆಗೆ ಸುತ್ತಮುತ್ತಲಿನ ಇನ್ನೂ ಸುಂದರೆತೆಯನ್ನು ಹೊದ್ದುಕೊಂಡಿರುವ ಪ್ರದೇಶಗಳನ್ನು ಕೂಡ ನೋಡಬಹುದು.
ಇದನ್ನೂ ಓದಿ:ಸ್ಥಳೀಯರೇ ಹೋಗಲು ಭಯಪಡುವ ಈ ಜಾಗಕ್ಕೆ ಹೊರಟಿದ್ದ ಅಮೆರಿಕದ ಧೈರ್ಯವಂತ; ಪೊಲೀಸರಿಂದ ಬಂಧನ!
ಈ ಎರಡು ಪ್ರದೇಶಗಳನ್ನು ಭಾರತದ ಮಿನಿ ಇಲ್ಲವೇ ಭಾರತದ ಸ್ವಿಟ್ಜರ್ಲೆಂಡ್ ಎಂದೇ ಕರೆಯಲಾಗುತ್ತದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು ಸ್ವಿಸ್ಗೆ ಹೋಗುವ ಬದಲು ಕೇವಲ ಸಾವಿರಾರು ರೂಪಾಯಿ ಖರ್ಚು ಮಾಡಿ ಅದೇ ಅನುಭವನ್ನು ಈ ಎರಡು ಪ್ರದೇಶಗಳಲ್ಲಿ ಪಡೆಯಬಹುದು ಎಂಬುದು ಪ್ರವಾಸಿ ಪ್ರಿಯರ ವಾದ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ