/newsfirstlive-kannada/media/post_attachments/wp-content/uploads/2025/01/HMPV_1.jpg)
ದೂರದ ಚೀನಾದಲ್ಲಿ ಪತ್ತೆಯಾಗಿ ಹಾವಳಿ ಎಬ್ಬಿಸಿದ ಉಸಿರಾಟದ ಮಾರಿ ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ (HMPV) ಭಾರತದಲ್ಲೂ ಪತ್ತೆಯಾಗಿದೆ. ಕೊರೊನಾ ಸಮಯದಲ್ಲಿ ಲಾಕ್ಡೌನ್ ಹಾಕಿದ್ದಾಗ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದರು. ಅದರಂತೆ ಈಗ ಹೊಸ ವೈರಸ್ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು ಆತಂಕ ಸೃಷ್ಟಿಸಿದೆ. ಆದರೆ ತಜ್ಞರು, ಡಾಕ್ಟರ್ಗಳು ಮಾತ್ರ ಡೋಂಟ್ ವರೀ ಎಂದು ಹೇಳುತ್ತಿದ್ದಾರೆ.
ಮಹಾರಾಷ್ಟ್ರದ ನಾಗ್ಪುರದ ಇಬ್ಬರಲ್ಲಿ ಎಚ್ಎಂಪಿವಿ
ಹೆಚ್‌ಎಂಪಿ ವೈರಸ್ ಕೊರೊನಾ ಮಾರಿಯ ಮರಿ ಎನ್ನಬಹುದು. ಇದು 2001ರ ವೈರಸ್ ಆದ್ರೂ ಈಗ ಚೀನಾದಲ್ಲಿ ಹಾವಳಿ ಎಬ್ಬಿಸಿದ್ದು ಈಗ ನಮ್ಮ ದೇಶಕ್ಕೂ ಕಾಲಿಟ್ಟಿದ್ದು ಮಾತ್ರ ಕೊಂಚ ಆತಂಕ ಅಷ್ಟೇ. ಬೆಂಗಳೂರಿನ ಎರಡು ಹಸುಗೂಸುಗಳಿಗೆ ವಕ್ಕರಿಸಿದ್ರೆ ಗುಜರಾತ್ನಲ್ಲಿ ಒಂದು ಕೇಸ್ ಪತ್ತೆಯಾಗಿದೆ. ಪಕ್ಕದ ತಮಿಳುನಾಡಿನಲ್ಲೂ 2 ಕೇಸ್ಗಳು ದಾಖಲಾಗಿವೆ. ನಿನ್ನೆ ಹೊಸದಾಗಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಇಬ್ಬರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. 7 ವರ್ಷ, 14 ವರ್ಷದ ಮಕ್ಕಳಲ್ಲಿ ಚೀನಾ ವೈರಸ್ ಪತ್ತೆಯಾಗಿದೆ. ಈ ಮೂಲಕ ಭಾರತದಲ್ಲಿ ಸಂಖ್ಯೆ 7ಕ್ಕೆ ಏರಿಕೆ ಆಗಿದೆ.
ಭಯ, ಆತಂಕ ಬೇಡ ಎಂದ ಕೇಂದ್ರ ಆರೋಗ್ಯ ಇಲಾಖೆ
ಇನ್ನು ಭಾರತದಲ್ಲಿ ಕೇಸ್ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಆತಂಕ, ಭಯ ಕೂಡ ಹೆಚ್ಚಾಗುತ್ತಿದೆ. ಅದರಲ್ಲೂ ಹೆಚ್ಎಂಪಿ ವೈರಸ್ ಪಾಸಿಟಿವ್ ಬಂದವರೆಲ್ಲಾ ಮಕ್ಕಳಾಗಿರೋದ್ರಿಂದ ಇದು ಇಮ್ಮಡಿಯಾಗಿದೆ. ಆದ್ರೆ ಭಯ, ಆತಂಕ ಬೇಡ ಅಂತ ಕೇಂದ್ರ ಆರೋಗ್ಯ ಇಲಾಖೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಮಾತ್ರವಲ್ಲದೇ ದೇಶದ ಆರೋಗ್ಯ ತಜ್ಞರು ಅಭಯ ನೀಡಿದ್ದಾರೆ.
‘HMPV’ ಸಾಂಕ್ರಾಮಿಕವಲ್ಲ!
- ಹೆಚ್‌ಎಂಪಿವಿ ಸಾಂಕ್ರಾಮಿಕ ರೋಗವಾಗುವ ಸಾಧ್ಯತೆ ಇಲ್ಲ
- ಎಚ್‌ಎಂಪಿ ವೈರಸ್ನಿಂದ ಶೀತ, ಫ್ಲೂ ಮಾತ್ರ ಕಂಡುಬರುತ್ತೆ
- ಸಂಪೂರ್ಣ ಹೊಸ ವೈರಸ್ ಆಗಿದ್ದ ಕೊರೊನಾ ವೈರಸ್
- ಹೀಗಾಗಿ ಅದರ ವಿರುದ್ಧ ರೋಗ ನಿರೋಧಕ ಶಕ್ತಿ ಇರಲಿಲ್ಲ
- ಆರೇಳು ದಶಕದಿಂದ ಭಾರತದಲ್ಲಿರುವ ಹೆಚ್ಎಂಪಿ ವೈರಸ್
- ಆದ್ರಿಂದ ವೈರಸ್ ವಿರುದ್ಧ ರೋಗನಿರೋಧಕ ಶಕ್ತಿ ಜನರಲ್ಲಿದೆ
- ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಬೆಳವಣಿಗೆ ಆಗದ ಕಾರಣ
- HMPVಯಿಂದ 5 ವರ್ಷದೊಳಗಿನ ಮಕ್ಕಳಿಗೆ ಮಾತ್ರ ತೊಂದರೆ
- CSIR ಮಾಜಿ ಡೈರೆಕ್ಟರ್ ಜನರಲ್ ಡಾ.ಶೇಖರ್ ಮಂಡೆ ಮಾಹಿತಿ
- ICMR ಮಾಜಿ ಮುಖ್ಯಸ್ಥ ಡಾ.ರಮಣ್ ಗಂಗಾಖೇಡ್ಕರ್ ಅಭಯ
ಇದನ್ನೂ ಓದಿ: 6 ನಕ್ಸಲರ ಶರಣಾಗತಿ.. ಕರ್ನಾಟಕದಲ್ಲಿ ಇಂದು ಐತಿಹಾಸಿಕ ಬೆಳವಣಿಗೆ; ಹೇಗಿದೆ ಅಂತಿಮ ತಯಾರಿ?
ಎಚ್‌ಎಂಪಿವಿ ಬಗ್ಗೆ ಭಯ ಬೇಡ ಅಂತ ಕೇಂದ್ರ ಆರೋಗ್ಯ ಇಲಾಖೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ, ರಾಜ್ಯ ಸರ್ಕಾರಗಳ ಜೊತೆ ಉನ್ನತ ಮಟ್ಟದ ಸಭೆ ಮಾಡಿ ಸಲಹೆ ಸೂಚನೆ ನೀಡಿದ್ದಾರೆ. ಅಲ್ಲದೇ ಹೆಚ್‌ಎಂಪಿ ವೈರಸ್ ಅಪಾಯಕಾರಿಯಲ್ಲ ಅಂತ ತಜ್ಞರೂ ಹೇಳ್ತಿದ್ದಾರೆ. ಆದ್ರೆ ಮಕ್ಕಳ ಪಾಲಿಗೆ ಇದು ವೈರಿ ಅನ್ನೋದನ್ನ ಮರೆಯಬಾರದು. ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ