newsfirstkannada.com

Olympics; ಗ್ರೇಟ್​ ಬ್ರಿಟನ್​ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು.. ಸೆಮಿಸ್​​ಗೆ ಎಂಟ್ರಿ ಕೊಟ್ಟ ಟೀಮ್ ಇಂಡಿಯಾ

Share :

Published August 4, 2024 at 5:17pm

    ಪಂದ್ಯದ ವೇಳೆ ಅಮಿತ್ ರೋಹಿದಾಸ್‌ಗೆ ರೆಡ್ ಕಾರ್ಡ್

    ಪೆನಾಲ್ಟಿ ಶೂಟೌಟ್‌ಗಳ ಹೀರೋ ಪಿ.ಆರ್ ಶ್ರೀಜೇಶ್

    ಯಾರ ಜತೆ ಭಾರತದ ಹಾಕಿ ತಂಡ ಸೆಮಿಫೈನಲ್​ ಆಡಲಿದೆ?

ಪ್ಯಾರಿಸ್​ನಲ್ಲಿ ನಡೆಯುತ್ತಿರುವ 2024ರ ಒಲಿಂಪಿಕ್ಸ್​ನಲ್ಲಿ ಭಾರತದ ಪುರುಷರ ಹಾಕಿ ಟೀಮ್ ಸೆಮಿಫೈನಲ್​​ಗೆ ಎಂಟ್ರಿಕೊಟ್ಟಿದೆ. ಪಿ.ಆರ್ ಶ್ರೀಜೇಶ್ ಅವರ ಅಮೋಘ ಆಟದಿಂದ ಭಾರತದ ಹಾಕಿ ತಂಡ ಸೆಮಿಸ್​ಗೆ ತಲುಪಿದೆ.

ಇದನ್ನೂ ಓದಿ: ಕಾವೇರಿ ದಡದ ಮೇಲೆ ಕುಡುಕರ ಅಟ್ಟಹಾಸ.. ಕಾಲೇಜು ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿ, ಕೊಂದ ಗ್ಯಾಂಗ್

ಸ್ಟೇಡ್ ಯವೆಸ್-ಡು-ಮನೋಯರ್‌ನಲ್ಲಿ ಭಾರತ ಮತ್ತು ಗ್ರೇಟ್​ ಬ್ರಿಟನ್​ ನಡುವೆ ನಡೆದ ಪಂದ್ಯವು ರೋಚಕ ಹಂತ ತಲುಪಿತ್ತು. ಯಾರು ಗೆಲ್ಲುತ್ತಾರೆ ಎಂಬುದು ಕುತೂಹಲ ಮೂಡಿತ್ತು. ಅಮಿತ್ ರೋಹಿದಾಸ್‌ಗೆ ರೆಡ್ ಕಾರ್ಡ್ ತೋರಿಸಿದ್ದರಿಂದ ಭಾರತಕ್ಕೆ ಹಿನ್ನಡೆಯಾಗಿತ್ತು. ಆದರೆ ಪೆನಾಲ್ಟಿ ಶೂಟ್​ಔಟ್​ನಲ್ಲಿ ಭಾರತ ಅಮೋಘ ಪ್ರದರ್ಶನ ನೀಡುವ ಮೂಲಕ ಗ್ರೇಟ್​ ಬ್ರಿಟನ್ ತಂಡವನ್ನು 4-2 ರಿಂದ ಮಣಿಸಿ ಸೆಮಿಫೈನಲ್​ಗೆ ಎಂಟ್ರಿಕೊಟ್ಟಿದೆ. ಪಿ.ಆರ್ ಶ್ರೀಜೇಶ್ ಅವರು ಪೆನಾಲ್ಟಿ ಶೂಟೌಟ್‌ಗಳ ಹೀರೋ ಎಂಬುದು ಮತ್ತೊಮ್ಮೆ ಸಾಬೀತು ಮಾಡಿದರು. ಈ ಮೂಲಕ ಹಾಕಿ ತಂಡಕ್ಕೆ ಭಾರತೀಯರೆಲ್ಲ ಶುಭಾಶಯ ತಿಳಿಸುತ್ತಿದ್ದಾರೆ.

ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ದುರಂತ.. ರೈಲಿನ ಅಡಿಯಲ್ಲೇ ಸಿಲುಕಿದ ಯುವಕನ ಮೃತದೇಹ; ಪ್ರಯಾಣಿಕರ ಪರದಾಟ

ಸೆಮಿಫೈನಲ್​ಗೆ ಹೋಗಿರುವ ಭಾರತದ ಹಾಕಿ ಟೀಮ್ ಮುಂದಿನ ಮ್ಯಾಚ್​ ಅನ್ನು ಬಲಿಷ್ಠ ತಂಡಗಳೆನಿಸಿರುವ ಅರ್ಜೆಂಟೀನಾ ಅಥವಾ ಜರ್ಮನಿ ಜೊತೆ ಆಡಲಿದೆ. ಇಲ್ಲಿ ಗೆದ್ದರೇ ಭಾರತ ಫೈನಲ್​ಗೆ ಹೋಗಲಿದೆ. ಹೀಗಾಗಿ ಒಲಿಂಪಿಕ್ಸ್​​ನಲ್ಲಿ ಭಾರತದ ಹಾಕಿ ತಂಡ ಚಿನ್ನದ ಪದಕ ಗೆದ್ದು ಬರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Olympics; ಗ್ರೇಟ್​ ಬ್ರಿಟನ್​ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು.. ಸೆಮಿಸ್​​ಗೆ ಎಂಟ್ರಿ ಕೊಟ್ಟ ಟೀಮ್ ಇಂಡಿಯಾ

https://newsfirstlive.com/wp-content/uploads/2024/08/Team_India_HOCKEY_1.jpg

Load More