newsfirstkannada.com

ಸಚಿನ್​, ಸೀಮಾ ಲವ್​ ಸ್ಟೋರಿಗೆ ಗದರ್ ಸಿನಿಮಾನೇ ಸ್ಫೂರ್ತಿ.. ಜೈಲಿನಿಂದ ಬಿಡುಗಡೆಯಾದ ಪಾಕ್ ಮಹಿಳೆ ಹೇಳಿದ್ದೇನು?

Share :

Published July 9, 2023 at 1:38pm

Update July 9, 2023 at 2:02pm

  ಭಾರತದ ಯುವಕನ ಜತೆ ಪ್ರೀತಿ ಚಿಗುರಿದ್ದು ಹೇಗೆ ಎಂದ ಸೀಮಾ

  ಸೌದಿ ಅರೇಬಿಯಾದಿಂದ ಮೊದಲ ಗಂಡ ಕರೆದರೂ ಹೋಗುತ್ತಿಲ್ಲ

  ಪಾಕ್​ನಿಂದ ಭಾರತಕ್ಕೆ ಬರಲು ಕಡಿಮೆ ಬೆಲೆಗೆ ಫ್ಲ್ಯಾಟ್‌​ ಮಾರಿಬಿಟ್ಟೆ

ಲಕ್ನೋ: ಪಾಕಿಸ್ತಾನ​ ಮೂಲದ ಮಹಿಳೆ ತನ್ನ ಪ್ರಿಯಕರನಿಗಾಗಿ ನೇಪಾಳದ ಮೂಲಕ ಅಕ್ರಮವಾಗಿ ಭಾರತಕ್ಕೆ ನುಸುಳಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​ ಸಿಕ್ಕಿದೆ. ಜೈಲಿನಲ್ಲಿದ್ದ ಆಕೆಯನ್ನು ಜಾಮೀನು ಮೂಲಕ ಬಿಡುಗಡೆ ಮಾಡಲಾಗಿದೆ. ಪಬ್​ಜೀ ಆಡುವಾಗ ತಮ್ಮ ಪ್ರೀತಿ ಹೇಗೆ ಪ್ರಾರಂಭವಾಯಿತು.. ಪಾಕ್​ನಿಂದ ಭಾರತದ ಕಡೆಗಿನ ಪ್ರೀತಿಯ ಪಯಾಣದ ಕುರಿತು ಇಂಚಿಂಚೂ ಮಾಹಿತಿ ನೀಡಿದ್ದಾರೆ.

ಉತ್ತರಪ್ರದೇಶದ ಗ್ರೇಟರ್​ ನೋಯ್ಡಾದ ನಿವಾಸಿಯಾದ ಸಚಿನ್​ (24) ಎನ್ನುವ ಯುವಕನನ್ನು ಹುಡುಕಿಕೊಂಡು ಪಾಕ್​ ಮೂಲದ ಸೀಮಾ ಗುಲಾಮ್ ಹೈದರ್ (30)ಭಾರತಕ್ಕೆ ಬಂದಿದ್ದಾರೆ. ನೋಯ್ಡಾದ ರಬೂಪುರ ಪ್ರದೇಶದ ಅಪಾರ್ಟ್​ಮೆಂಟ್​ನಲ್ಲಿ ಇಬ್ಬರು ತಮ್ಮ ನಾಲ್ವರು ಮಕ್ಕಳೊಂದಿಗೆ ವಾಸವಿದ್ದರು. ವೀಸಾ ಇಲ್ಲದೇ ಅಕ್ರಮವಾಗಿ ಭಾರತಕ್ಕೆ ಬಂದಿದ್ದರಿಂದ ಜುಲೈ 4ರಂದು ಪೊಲೀಸರು ಸೀಮಾಳನ್ನು ಬಂಧಿಸಿ, ಆಕೆಗೆ ಆಶ್ರಯ ನೀಡಿದ್ದಕ್ಕೆ ಸಚಿನ್​ ಅನ್ನು ಕೂಡ ಅರೆಸ್ಟ್ ಮಾಡಿದ್ದರು.

ಜಾಮೀನು ಮೇಲೆ ಹೊರ ಬಂದು ಹೇಳಿದ್ದೇನು..?

ಈ ಹಿನ್ನೆಲೆಯಲ್ಲಿ ಜೈಲಿನಿಂದ ಸೀಮಾ ನಿನ್ನೆ ಜಾಮೀನು ಮೇಲೆ ಹೊರ ಬಂರುತ್ತಿದ್ದಂತೆ ಮಳೆಯಲ್ಲೇ ಭಾರತದ ಪ್ರಯಾಣದ ಬಗ್ಗೆ ಹೇಳಿಕೊಂಡಿದ್ದಾರೆ. ನಾಲ್ಕೈದು ತಿಂಗಳು ಜೈಲಲ್ಲಿ ಹಾಕುತ್ತಾರೆಂದು ಭಯವಾಗಿತ್ತು. ಆದ್ರೆ ಇಷ್ಟು ಬೇಗ ಹೊರ ಬಂದಿದ್ದಕ್ಕೆ ಖುಷಿಯಾಗಿದೆ. ನನ್ನ ಪತಿ ಹಿಂದು ಆಗಿದ್ದು ನಾನು ಕೂಡ ಹಿಂದು ಮಹಿಳೆ. ಹೀಗಾಗಿ ನಾನು ಇಂಡಿಯಾನ್ ಮಹಿಳೆಯಂತೆ ಫೀಲ್ ಆಗುತ್ತಿದ್ದೇನೆ. ನಾನು ಬಾಲಿವುಡ್​ನ ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್ ಅಭಿನಯದ ಗದರ್ ಸಿನಿಮಾದಲ್ಲಿನ ಭಾರತ-ಪಾಕಿಸ್ತಾನ ಪ್ರೇಮಕಥೆಯಿಂದ ಸ್ಫೂರ್ತಿ ಪಡೆದಿದ್ದೇನೆ. ಹೀಗಾಗಿ ಪ್ರಿಯಕರನಿಗಾಗಿ ಎಲ್ಲವನ್ನು ಬಿಟ್ಟು ಬಂದೆ ಎಂದು ಹೇಳಿದ್ದಾರೆ.

PUBG ಗೇಮ್ ನಮ್ಮ ಪ್ರೀತಿಗೆ ಮೂಲಕ ಕಾರಣ

ಕೊರೊನಾ ವೇಳೆ PUBG ಗೇಮ್​ ಆಡುವಾಗ ಇಬ್ಬರ ನಡುವೆ ಪ್ರೇಮಾಂಕುರವಾಗಿ ಕಳೆದ ಮಾರ್ಚ್​ನಲ್ಲಿ ನಾವಿಬ್ಬರು ನೇಪಾಳದಲ್ಲಿ ಮದುವೆಯಾದೆವು. ಇದಕ್ಕೂ ಮೊದಲು ನಾನು ಮಕ್ಕಳೊಂದಿಗೆ ಮೊದಲ ಬಾರಿಗೆ ಪಾಕ್​ನ ಕರಾಚಿಯಿಂದ ದುಬೈಗೆ ವಿಮಾನದಲ್ಲಿ ಸುದೀರ್ಘ ಪ್ರಯಾಣ ಭಯದಲ್ಲೇ ಬಂದಿದ್ದೆ. 11 ಗಂಟೆಗಳವರೆಗೆ ನಿದ್ದೆ ಮಾಡಲಿಲ್ಲ. ನಂತರ ದುಬೈನಿಂದ ನೇಪಾಳಕ್ಕೆ ಬಂದಿಳಿದೇನು. ಪೋಖರಾಗೆ ಹೋಗುವ ಮೊದಲೇ ನಾವಿಬ್ಬರು ಭೇಟಿಯಾಗಿ ಬಳಿಕ ನಾನು ಪಾಕ್​ಗೆ ವಾಪಸ್ ಆದ್ರೆ, ಸಚಿನ್ ಭಾರತಕ್ಕೆ ತೆರಳಿದರು ಎಂದಿದ್ದಾರೆ.

12 ಲಕ್ಷ ರೂಪಾಯಿಗೆ ಫ್ಲ್ಯಾಟ್ ಮಾರಾಟ ಮಾಡಿದೆ

ಪಾಕ್​ಗೆ ಹೋಗಿ ಅಲ್ಲಿ ಫ್ಲ್ಯಾಟ್ ಅನ್ನು 12 ಲಕ್ಷ ರೂಪಾಯಿಗೆ ಮಾರಾಟ ಮಾಡಿ, ಅದೇ ಹಣದಲ್ಲಿ ನೇಪಾಳದ ವೀಸಾ ಹಾಗೂ ವಿಮಾನ ಟಿಕೆಟ್​ಗಳನ್ನು ಪಡೆದು ನಾಲ್ವರು ಮಕ್ಕಳೊಂದಿಗೆ ಬಂದೆ. ಮೇನಲ್ಲಿ ನೇಪಾಳ ತಲುಪಿದ ಬಳಿಕ ಪೋಖರಾದ ಪ್ರವಾಸಿ ತಾಣಗಳಲ್ಲಿ ಕೆಲ ಸಮಯ ಕಳೆದು ಕಠ್ಮಂಡುವಿನಿಂದ ಬಸ್​ ಮೂಲಕ ನೇರ ದೆಹಲಿಗೆ ಆಗಮಿಸಿದೆ. ಮೇ 13 ರಂದು ನೋಯ್ಡಾಕ್ಕೆ ಬಂದೆ. ಬರುವುದಕ್ಕೂ ಮೊದಲೇ ಸಚಿನ್ ವಾಸಿಸಲು ಮನೆ ನಿಗದಿ ಮಾಡಿದ್ದನು ಎಂದರು.

ಇದನ್ನು ಓದಿ: ಪಬ್​ಜೀ ಆಡುವಾಗ ಅರಳಿದ ಪ್ರೀತಿ.. ಸಚಿನ್​ಗಾಗಿ ಪಾಕ್​ನಿಂದ 4 ಮಕ್ಕಳ ಜೊತೆ ಓಡಿ ಬಂದ ಮಹಿಳೆ.. ಮುಂದೇನಾಯಿತು ಗೊತ್ತಾ?

ಸೀಮಾ ಬಗ್ಗೆ ಮಾಹಿತಿ ತಿಳಿದ ಸೌದಿ ಅರೇಬಿಯಾದಲ್ಲಿನ ಮೊದಲ ಗಂಡ ಗುಲಾಮ್ ಹೈದರ್ ವಿಡಿಯೋ ಕಾಲ್ ಮಾಡಿ ಪತ್ನಿ ಸೀಮಾಳನ್ನು ವಾಪಸ್​ ಕಳುಹಿಸಿ ಕೊಡುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾನೆ. ಆದ್ರೆ ಸೀಮಾ ಮೊದಲ ಪತಿ ಗುಲಾಮ್​ನ ಬಳಿ ಹೋಗಲ್ಲ. ಪಾಕ್​ಗೆ ಹೋದರು ನನಗೆ ಜೀವ ಬೆದರಿಕೆ ಇದೆ. ಇಲ್ಲೇ ಇರುತ್ತೇನೆ ಎಂಬುದಾಗಿ ಹೇಳಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಚಿನ್​, ಸೀಮಾ ಲವ್​ ಸ್ಟೋರಿಗೆ ಗದರ್ ಸಿನಿಮಾನೇ ಸ್ಫೂರ್ತಿ.. ಜೈಲಿನಿಂದ ಬಿಡುಗಡೆಯಾದ ಪಾಕ್ ಮಹಿಳೆ ಹೇಳಿದ್ದೇನು?

https://newsfirstlive.com/wp-content/uploads/2023/07/PAK_INDIA_LOVE_STORY_.jpg

Load More