/newsfirstlive-kannada/media/post_attachments/wp-content/uploads/2023/11/Supreme-Court.jpg)
ನವದೆಹಲಿ: ಭಾರತ ಎಲ್ಲರಿಗೂ ಆಶ್ರಯ ನೀಡಲು ಧರ್ಮಶಾಲೆಯಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ. ನಿರಾಶ್ರಿತರು ಆಶ್ರಯ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಮಹತ್ವದ ತೀರ್ಪು ನೀಡಿದೆ.
ಶ್ರೀಲಂಕಾದ ತಮಿಳರು ತಮಗೆ ಭಾರತದಲ್ಲಿ ಆಶ್ರಯ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಜಾಗೊಳಿಸಿದ ಸರ್ವೋಚ್ಛ ನ್ಯಾಯಾಲಯ, ನಿಮಗೆ ಭಾರತದಲ್ಲಿ ನೆಲೆಸಲು ಯಾವ ಹಕ್ಕಿದೆ ಎಂದು ಪ್ರಶ್ನಿಸಿದೆ.
/newsfirstlive-kannada/media/post_attachments/wp-content/uploads/2023/10/Supreme-Court-File-1.jpg)
ವಿಶ್ವದ ಎಲ್ಲಾ ಕಡೆ ಇರುವ ನಿರಾಶ್ರಿತರಿಗೆ ಆಶ್ರಯ ಕೊಡಲು ಭಾರತ ಧರ್ಮಶಾಲೆಯಲ್ಲ. ಬೇರೆ ಯಾವುದಾದರೂ ದೇಶಕ್ಕೆ ಹೋಗಿ ಆಶ್ರಯ ಕೇಳಿ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ರಾಮನಿಗಾಗಿ ಸೀತಾ, ಶಿವುಗಾಗಿ ಗೀತಾ.. ನೆನಪುಗಳನ್ನು ಮೆಲುಕು ಹಾಕಿದ ಶಿವಣ್ಣ; ಏನಿದರ ವಿಶೇಷ?
LTTE ಮಾಜಿ ಕೇಡರ್, ಶ್ರೀಲಂಕಾದ ತಮಿಳರು ತಮಗೆ ಆಶ್ರಯ ನೀಡಲು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ನಿಮಗೆ ಭಾರತದಲ್ಲಿ ನೆಲೆಸಲು ಯಾವ ಹಕ್ಕು ಇಲ್ಲ ಎಂದಿರುವ ಸುಪ್ರೀಂಕೋರ್ಟ್, ಭಾರತ ಎಲ್ಲರಿಗೂ ಆಶ್ರಯ ನೀಡಲು ಸಾಧ್ಯವಿಲ್ಲ ಎಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us