INDvsPAK: 7 ವರ್ಷಗಳಿಂದ ಕಾಡ್ತಿದೆ ಆ ನೋವು.. ಲಂಡನ್​ನಲ್ಲಾದ ಅಪಮಾನಕ್ಕೆ ದುಬೈನಲ್ಲಿ ಪ್ರತೀಕಾರ!

author-image
Gopal Kulkarni
Updated On
INDvsPAK: 7 ವರ್ಷಗಳಿಂದ ಕಾಡ್ತಿದೆ ಆ ನೋವು.. ಲಂಡನ್​ನಲ್ಲಾದ ಅಪಮಾನಕ್ಕೆ ದುಬೈನಲ್ಲಿ ಪ್ರತೀಕಾರ!
Advertisment
  • ಒಂದು ಪಂದ್ಯ.. ಎರಡು ಸೋಲಿನ ಸೇಡು.. ಸಮರಕ್ಕೆ ಸಿದ್ಧ.!
  • ದುಬೈನಲ್ಲಿಂದು ಇಂಡೋ-ಪಾಕ್​ ಹೈವೋಲ್ಟೆಜ್​ ಕದನ
  • ಟೀಮ್​ ಇಂಡಿಯಾ ಗೆಲುವಿಗೆ ಅಭಿಮಾನಿಗಳ ಪ್ರಾರ್ಥನೆ

ಒಂದು ಪಂದ್ಯ, ಎರಡೆರಡು ಸೇಡು. ವರ್ಷಗಳೇ ಉರುಳಿದ್ರೂ ಸೋಲಿನ ನೋವು ಮಾಸಿಲ್ಲ. ಅಸಂಖ್ಯ ಭಾರತೀಯ ಅಭಿಮಾನಿಗಳ ಮನದಲ್ಲಿ ಇಂದು ಸೇಡಿನ ಜ್ವಾಲೆ ಹೊತ್ತು ಉರಿಯುತ್ತದೆ. ದುಬೈ ಮೈದಾನದಲ್ಲಿ ಪಾಕ್​ನ ಚಿಂದಿ ಉಡಾಯಿಸಿ ಭಾರತ ಗೆದ್ದು ವಿಜಯ ಪತಾಕೆ ಹಾರಿಸಲಿ ಅನ್ನೋದು ಪ್ರತಿಯೊಬ್ಬ ಭಾರತೀಯನ ಪ್ರಾರ್ಥನೆಯಾಗಿದೆ. ಅಷ್ಟಕ್ಕೂ ಫ್ಯಾನ್ಸ್​ ಮನದ ಆ ಸೇಡು ಏನು?

ಬಹು ನಿರೀಕ್ಷಿತ ಇಂಡೋ-ಪಾಕ್​ ಫೈಟ್​ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ. ಈ ಒಂದು ಪಂದ್ಯವನ್ನ ಕಣ್ತುಂಬಿಕೊಳ್ಳಲು ವಿಶ್ವ ಕ್ರಿಕೆಟ್​ ಲೋಕ ಜಾತಕ ಪಕ್ಷಿಯಂತೆ ಕಾಯ್ತಿದೆ. ಆನ್​ಫೀಲ್ಡ್​ನಲ್ಲಿ ಆಡೋದು ಜಸ್ಟ್ 22 ಮಂದಿ ಆಟಗಾರರು ಮಾತ್ರ. ಆದ್ರೆ, ಈ ಪಂದ್ಯ ಬಿಲಿಯನ್​ಗಟ್ಟಲೇ ಅಭಿಮಾನಿಗಳ ಎಮೋಷನ್​, ಪ್ರೈಡ್​ & ಪ್ಯಾಶನ್​.

publive-image

ಒಂದೊಂದು ಎಸೆತಕ್ಕೂ ಟ್ವಿಸ್ಟ್​ & ಟರ್ನ್​​, ಹಂತ ಹಂತಕ್ಕೂ ರೋಚಕತೆ, ಕ್ಷಣ ಕ್ಷಣಕ್ಕೂ ಜೋರಾಗೋ ಹಾರ್ಟ್​ ಬೀಟ್​. ಇಂಡೋ-ಪಾಕ್​ ಫೈಟ್​ ನೋಡೋ ಮಜಾನೇ ಬೇರೆ. ಇಲ್ಲಿ ಸ್ಟೇಡಿಯಂ ಅಕ್ಷರಶಃ ರಣರಂಗದ ಅವತಾರ ಎತ್ತಿದ್ರೆ, ಆಟಗಾರರ ವೀರ ಸೇನಾನಿಗಳು. ಈ ಬ್ಯಾಟ್​ & ಬಾಲ್​ ಅನ್ನೋದು ವೆಪನ್​ಗಳಾಗಿ ಬದಲಾಗ್ತವೆ.

ಇದನ್ನೂ ಓದಿ: INDvsPAK: ಭಾರತದ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯ; ಪಾಕಿಸ್ತಾನಕ್ಕೆ ಡಬಲ್ ಟೆನ್ಷನ್!

ಬದ್ಧವೈರಿಗಳ ನಡುವಿನ ಕದನದ ಫೀವರ್ ಸದ್ಯ​​ ಕ್ರಿಕೆಟ್​ ಜಗತ್ತನ್ನ ಆವರಿಸಿದೆ. ಟೀಮ್​ ಇಂಡಿಯಾದ ಗೆಲುವಿಗೆ ಪ್ರಾರ್ಥನೆಗಳೂ ಜೋರಾಗಿವೆ. ಚಾಂಪಿಯನ್ಸ್​ ಟ್ರೋಫಿ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಚಾಂಪಿಯನ್​ ಆಗುತ್ತೋ. ಇಲ್ವೋ? ಅನ್ನೋದು ಸೆಕೆಂಡರಿ, ಪಾಕ್​ ವಿರುದ್ಧ ಸೋಲಬಾರದು ಅನ್ನೋದಷ್ಟೇ ಅಭಿಮಾನಿಗಳ ಪ್ರಾರ್ಥನೆಯಾಗಿದೆ. ಯಾಕಂದ್ರೆ ಇದು ಸೇಡಿನ ಸಮರ.!

publive-image

7 ವರ್ಷಗಳಿಂದ ಕಾಡ್ತಿದೆ ಆ ಒಂದು ನೋವು!
ಜೂನ್​​, 18, 2017. ಅಸಂಖ್ಯ ಭಾರತೀಯ ಅಭಿಮಾನಿಗಳ ಹೃದಯ ಛಿದ್ರವಾದ ದಿನವದು. ಚಾಂಪಿಯನ್ಸ್​​ ಟ್ರೋಫಿ ಟೂರ್ನಿಯಲ್ಲಿ ಫೈನಲ್​ ಕದನದಲ್ಲಿ ಬದ್ಧವೈರಿ ಪಾಕ್​ ಎದುರು ವಿರಾಟ್​ ಕೊಹ್ಲಿ ಸಾರಥ್ಯದ ಟೀಮ್​ ಇಂಡಿಯಾ ಕಣಕ್ಕಿಳಿದಿತ್ತು. ಕೆನ್ನಿಂಗ್ಟನ್​ ಓವಲ್​ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಪಾಕ್​ 4 ವಿಕೆಟ್​ ನಷ್ಟಕ್ಕೇ ಬರೋಬ್ಬರಿ 338 ರನ್​ಗಳ ಬಿಗ್​ ಸ್ಕೋರ್​ ಕಲೆ ಹಾಕಿತ್ತು.

publive-image

ಈ ಬಿಗ್​ ಟಾರ್ಗೆಟ್​​ ಚೇಸ್​ ಮಾಡಿದ ಟೀಮ್​ ಇಂಡಿಯಾ ಪಾಕ್​ ಬೌಲರ್​ಗಳ ಮುಂದೆ ಮಂಕಾಗಿ ಹೋಯ್ತು. ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ಗಳೆಲ್ಲಾ ಪೆವಿಲಿಯನ್​ ಪರೇಡ್​ ನಡೆಸಿದ್ರು. ಹಾರ್ದಿಕ್​ ಪಾಂಡ್ಯ ಬಿಟ್ರೆ ಉಳಿದ್ಯಾವ ಆಟಗಾರ ಕೂಡ ಕ್ರಿಸ್​ ಕೆಚ್ಚೆದೆಯ ಹೋರಾಟ ನಡೆಸಲಿಲ್ಲ. ಪರಿಣಾಮ ಟೀಮ್​ ಇಂಡಿಯಾ 180 ರನ್​ಗಳ ಹೀನಾಯ ಸೋಲಿಗೆ ಶರಣಾಯ್ತು.

publive-image

ಇದೇ ದುಬೈ ಅಂಗಳದಲ್ಲಿ ಸೋತಿದ್ದ ಟೀಮ್​ ಇಂಡಿಯಾ.!
ಇದೊಂದೆ ಅಲ್ಲ, 2021ರ ಟಿ20 ವಿಶ್ವಕಪ್​ನಲ್ಲಿ ಇದೇ ದುಬೈ ಸ್ಟೇಡಿಯಂನಲ್ಲೇ ವಿರಾಟ್ ನಾಯಕತ್ವದ ಟೀಮ್ ಇಂಡಿಯಾ, ಪಾಕ್​ ಎದುರು ತೀವ್ರ ಮುಖಭಂಗ ಅನುಭವಿಸಿತ್ತು. ಆ ಒಂದು ಸೋಲು ಟೀಮ್ ಇಂಡಿಯಾವನ್ನು ಲೀಗ್​ ಹಂತದಿಂದಲೇ ಹೊರ ಬೀಳುವಂತೆ ಮಾಡಿತ್ತು. ಇದೀಗ ಈ ಎರಡೂ ಸೋಲುಗಳ ಪ್ರತೀಕಾರಕ್ಕೆ ವೇದಿಕೆ ಸಜ್ಜಾಗಿದೆ.

ಇದನ್ನೂ ಓದಿ:ಇಂದು ಭಾರತಕ್ಕೆ ದೊಡ್ಡ ಅಗ್ನಿ ಪರೀಕ್ಷೆ.. ಪ್ಲಸ್​, ಮೈನಸ್‌ಗಳು ಏನು? ರೋಹಿತ್ ಪಡೆಗೆ ವರದಾನವಾಗುತ್ತಾ ಪಾಕ್​ ಕಳಪೆ ಬೌಲಿಂಗ್​?

ಈ ಎರಡು ಪಂದ್ಯಗಳಲ್ಲಿ ಬದ್ಧವೈರಿಗಳ ಎದುರು ಸೋತಿದ್ದು ಅಭಿಮಾನಿಗಳಿಗೆ ಸಾಕಷ್ಟು ನೋವು ಕೊಟ್ಟಿದೆ. ಇಂದಿಗೂ ಆ ಬೇಸರ, ಹತಾಶೆ ಅಭಿಮಾನಿಗಳನ್ನ ಕಾಡ್ತಿದೆ. ಆ ಸೋಲಿನ ಸೇಡನ್ನ ತೀರಿಸಿಕೊಳ್ಳೋಕೆ ಇಂದಿನ ಪಂದ್ಯಕ್ಕಿಂದ ಬೆಸ್ಟ್​ ಅವಕಾಶ ಬೇರೆ ಇಲ್ಲ ಅನ್ನೋದು ಅಭಿಮಾನಿಗಳ ಮನದ ಮಾತಾಗಿದೆ.
ಟೂರ್ನಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಸೋತಿರುವ ಪಾಕಿಸ್ತಾನ ತಂಡಕ್ಕೆ ಇಂದಿನ ಕದನ ಡು ಆರ್​​ ಡೈ. ಇಂದು ಗೆದ್ದರಷ್ಟೇ ಟೂರ್ನಿಯಲ್ಲಿ ಮುಂದಿನ ಹಾದಿ ಓಪನ್​ ಇರಲಿದೆ. ಸೋತ್ರೆ, ಟೂರ್ನಿಯಿಂದ ಹೊರಬೀಳೋದು ಕನ್​ಫರ್ಮ್​. ಹೋಸ್ಟ್​ ಆಗಿ ಲೀಗ್​ ಹಂತದಿಂದಲೇ ನಿರ್ಗಮಿಸಿದ್ರೆ ಹೇಗಿರುತ್ತೆ ಹೇಳಿ.? ಹೀಗಾಗಿಯೇ ಟೀಮ್​ ಇಂಡಿಯಾ ಇಂದು ಗೆಲ್ಲಬೇಕು. ಪಾಕ್​ ಹೊರಬೀಳಬೇಕು ಅನ್ನೋದು ಅಭಿಮಾನಿಗಳ ಪ್ರಾರ್ಥನೆಯಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment