newsfirstkannada.com

ಜೈಶಂಕರ್-ಮಾಲ್ಡೀವ್ಸ್​ ವಿದೇಶಾಂಗ ಸಚಿವ ಭೇಟಿ; ಬಿಕ್ಕಟ್ಟಿನ ಮಧ್ಯೆಯೂ ಮಹತ್ವದ ಚರ್ಚೆ..!

Share :

Published January 19, 2024 at 10:01am

    ಸೇನೆ ಹಿಂತೆಗೆದುಕೊಳ್ಳುವ ಬಗ್ಗೆ ಮಹತ್ವದ ಚರ್ಚೆ

    NAM ಶೃಂಗಸಭೆಗಾಗಿ ಜೈಶಂಕರ್ ವಿದೇಶ ಪ್ರವಾಸ

    ಟ್ವೀಟ್ ಮಾಡಿ ಮಾಲ್ಡೀವ್ಸ್ ಏನ್ ಹೇಳಿದೆ ಗೊತ್ತಾ..?

ವಿದೇಶಾಂಗ ವ್ಯವಹಾರಗಳ ಸಚಿವ ಎಸ್​ ಜೈಶಂಕರ್ ಅವರು ಮಾಲ್ಡೀವ್ಸ್​ ಫಾರಿನ್ ಮಿನಿಸ್ಟರ್ ಮೂಸಾ ಜಮೀರ್​​ನನ್ನು ಭೇಟಿ ಆಗಿದ್ದಾರೆ. ಉಭಯ ದೇಶಗಳ ನಡುವಿನ ಸಣ್ಣ ಬಿಕ್ಕಟ್ಟಿನ ಮಧ್ಯೆಯೂ ಪ್ರಾಮಾಣಿಕ ಮಾತುಕತೆ ನಡೆದಿದೆ. ಇಬ್ಬರ ಮಾತುಕತೆಯನ್ನು ಜೈಶಂಕರ್ ‘Frank conversation’ ಎಂದು ಬಣ್ಣಿಸಿದ್ದಾರೆ.

ಎರಡು ದೇಶಗಳ ಅಸಮಾಧಾನಗಳ ಮಧ್ಯೆಯೂ ಉಗಾಂಡದ ರಾಜಧಾನಿ ಕಂಪಲ್​​ನಲ್ಲಿ ಇಬ್ಬರ ಮಧ್ಯೆ ಮಾತುಕತೆ ನಡೆದಿದೆ. ಕಂಪಲದಲ್ಲಿ ಎರಡು ದಿನಗಳ NAM (Non-Aligned Movement) ಶೃಂಗಸಭೆ ನಡೆಯುತ್ತಿದ್ದು, ಹೀಗಾಗಿ ಜೈಶಂಕರ್ ವಿದೇಶ ಪ್ರವಾಸದಲ್ಲಿದ್ದಾರೆ.

ಜೈಶಂಕರ್ ಭೇಟಿಯನ್ನು ಅಲ್ಲಿನ ಸಚಿವ ಜಮೀರ್ ಸಂತೋಷ ವ್ಯಕ್ತಪಡಿಸಿದ್ದಾರೆ. ಮಾಲ್ಡೀವ್ಸ್​ನಲ್ಲಿರುವ ಭಾರತೀಯ ಸೇನೆಯನ್ನು ಹಿಂತೆಗೆದುಕೊಳ್ಳುವ ಬಗ್ಗೆ ಚರ್ಚೆಯಾಗಿದೆ. ಜೊತೆಗೆ ಮಾಲ್ಡೀವ್ಸ್​ನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳನ್ನು ತ್ವರಿತವಾಗಿ ಮುಗಿಸಲು ಸ್ಟಾರ್ಕ್​ ಮತ್ತು ನ್ಯಾಮ್​ನ ಸಹಕಾರದ ಬಗ್ಗೆ ಉನ್ನತ ಮಟ್ಟದ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ ಎಂದು ಮಾಲ್ಡೀವ್ಸ್ ಸಚಿವರು ತಿಳಿಸಿದ್ದಾರೆ.

ನಮ್ಮ ಸಹಕಾರವನ್ನು ಮತ್ತಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ ಎಂದು ಮಾಲ್ಡೀವ್ಸ್ ಹೇಳಿದೆ. ಮಾಲ್ಡೀವ್ಸ್‌ನಲ್ಲಿ ನೆಲೆಸಿರುವ ಸೇನಾ ಸಿಬ್ಬಂದಿ ವಿಚಾರದಲ್ಲಿ ಉಂಟಾಗಿರುವ ಗೊಂದಲ ಪರಿಹರಿಸಲು ಭಾರತ ಪ್ರಯತ್ನಿಸುತ್ತಿದೆ ಎಂದು ಭಾರತದ ವಿದೇಶಾಂಗ ಇಲಾಖೆ ತಿಳಿಸಿದೆ. ಮಾಲ್ಡೀವ್ಸ್ ಸರ್ಕಾರವು ಭಾರತೀಯ ಸೈನಿಕರನ್ನು ಹಿಂಪಡೆಯಲು ಮಾರ್ಚ್ 15ರ ಗಡುವು ನೀಡಿದೆ. ಎರಡು ಸುಧಾರಿತ ಲಘು ಹೆಲಿಕಾಪ್ಟರ್‌ಗಳು (ALH) ಮತ್ತು ಡಾರ್ನಿಯರ್ ವಿಮಾನಗಳ ನೆರವನ್ನು ಭಾರತ ಮಾಲ್ಡೀವ್ಸ್​ಗೆ ನೀಡುತ್ತಿದೆ. ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆಗಳಿಗಾಗಿ ಬಳಸಲಾಗುತ್ತಿದೆ.

ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ನವೆಂಬರ್‌ನಲ್ಲಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಅಧಿಕಾರಕ್ಕೆ ಬರುವ ಮೊದಲು ಭಾರತೀಯ ಮಿಲಿಟರಿ ಸಿಬ್ಬಂದಿಯನ್ನು ತಮ್ಮ ದೇಶದಿಂದ ಹೊರಹಾಕೋದಾಗಿ ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿದ್ದರು. ಇದರಿಂದ ಭಾರತ-ಮಾಲ್ಡೀವ್ಸ್ ಸಂಬಂಧಗಳು ಹದಗೆಡಲು ಶುರುವಾಗಿದೆ. ನೂತನ ಅಧ್ಯಕ್ಷ ಮುಯಿಝು ಚೀನಾ ಪರವಾಗಿರೋದು ಸಾಬೀತಾಗಿದೆ.

ಇತ್ತೀಚೆಗೆ ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು. ಅದನ್ನು ಮೋದಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಬೆನ್ನಲ್ಲೇ ಲಕ್ಷದ್ವೀಪದ ಬಗ್ಗೆ ಆನ್​ಲೈನ್​​ನಲ್ಲಿ ಭಾರೀ ಹುಡುಕಾಟ ನಡೆದಿತ್ತು. ಇದರಿಂದ ಉರಿದುಕೊಂಡಿದ್ದ ಮಾಲ್ಡೀವ್ಸ್​ನ ಕೆಲವು ಸಚಿವರು ಭಾರತದ ವಿರುದ್ಧ ಕೆಂಡ ಕಾರಿದ್ದರು. ಆ ಬೆನ್ನಲ್ಲೇ ಮಾಲ್ಡೀವ್ಸ್ ಮತ್ತು ಭಾರತ ಮಧ್ಯೆ ವಿವಾದ ಭುಗಿಲೆದ್ದಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈಶಂಕರ್-ಮಾಲ್ಡೀವ್ಸ್​ ವಿದೇಶಾಂಗ ಸಚಿವ ಭೇಟಿ; ಬಿಕ್ಕಟ್ಟಿನ ಮಧ್ಯೆಯೂ ಮಹತ್ವದ ಚರ್ಚೆ..!

https://newsfirstlive.com/wp-content/uploads/2024/01/IND-MALDIVES.jpg

Load More