/newsfirstlive-kannada/media/post_attachments/wp-content/uploads/2025/03/INDIA-MASTERS.jpg)
ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್‌ನ (Masters League T20 ) ಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ಮಾಸ್ಟರ್ಸ್ ತಂಡವನ್ನು ಸೋಲಿಸುವ ಮೂಲಕ ಇಂಡಿಯಾ ಮಾಸ್ಟರ್ಸ್, ಪ್ರಶಸ್ತಿಯ ಗೆದ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 148 ರನ್ ಗಳಿಸಿತ್ತು. ಇದಕ್ಕೆ ಪ್ರತಿಯಾಗಿ ಇಂಡಿಯಾ ಮಾಸ್ಟರ್ಸ್ 18ನೇ ಓವರ್‌ನಲ್ಲಿ ಗೆಲುವಿನ ಗುರಿ ಮುಟ್ಟಿ ಟ್ರೋಫಿಯನ್ನು ಎತ್ತಿ ಹಿಡಿಯಿತು.
ಇಂಡಿಯಾ ಮಾಸ್ಟರ್ಸ್ ತಂಡಕ್ಕೆ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ನಾಯಕರಾಗಿದ್ದರೆ, ವೆಸ್ಟ್ ವಿಂಡೀಸ್ ತಂಡಕ್ಕೆ ದಂತಕತೆ ಬ್ರಿಯನ್ ಲಾರಾ ನಾಯಕತ್ವ ವಹಿಸಿದ್ದರು. ಫೈನಲ್ ಪಂದ್ಯದಲ್ಲಿ ಲಾರಾ ತಂಡದ ವಿರುದ್ಧ ಸಚಿನ್ 6 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು. ಪಂದ್ಯವು ರಾಯ್ಪುರದ ಶಾಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರಿಯ ಕ್ರೀಡಾಂಗಣದಲ್ಲಿ ಪಂದ್ಯ ನಡೆದಿತ್ತು.
ಇದನ್ನೂ ಓದಿ: ತನ್ನದೇ ಸ್ವಂತ ರೈಲು ಹೊಂದಿದ ಭಾರತದ ಏಕೈಕ ವ್ಯಕ್ತಿ ಈತ! ರೈಲ್ವೆ ಇಲಾಖೆಯ ಒಂದು ತಪ್ಪಿನಿಂದಾದ ಯಡವಟ್ಟು ಏನು?
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ವೆಸ್ಟ್ ವಿಂಡೀಸ್, 7 ವಿಕೆಟ್ ಕಳೆದುಕೊಂಡು 148 ರನ್ಗಳಿಸಿತ್ತು. ಭಾರತ ವಿನಯ್ ಕುಮಾರ್, ಶಹಬಾಜ್ ನದೀಮ್ ದಾಳಿಗೆ ವಿಂಡೀಸ್ ವಿಕೆಟ್ ಪತನಗೊಂಡಿತ್ತು. ಅಂಬಟಿ ರಾಯುಡು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. 74 ರನ್ಗಳ ಅದ್ಭುತ ಆಟದೊಂದಿಗೆ ತಂಡಕ್ಕೆ ಗೆಲುವು ತಂದುಕೊಟ್ಟರು.
ರಾಯುಡು 50 ಎಸೆತಗಳಲ್ಲಿ 74 ರನ್ ಗಳಿಸಿದರು. 3 ಸಿಕ್ಸರ್‌ಗಳು ಮತ್ತು 9 ಬೌಂಡರಿಗಳನ್ನು ಬಾರಿಸಿದರು. ನಾಯಕ ಸಚಿನ್ ತೆಂಡೂಲ್ಕರ್ 18 ಎಸೆತಗಳಲ್ಲಿ 25 ರನ್ ಗಳಿಸಿದರು. ಯುವರಾಜ್ ಸಿಂಗ್ 13 ರನ್ ಗಳಿಸಿ ಅಜೇಯರಾಗಿ ಉಳಿದರು. ಸ್ಟುವರ್ಟ್ ಬಿನ್ನಿ 16 ರನ್ ಗಳಿಸಿ ಅಜೇಯರಾಗಿ ಉಳಿದರು.
ಪಂದ್ಯದ ಪ್ರಶಸ್ತಿ
- ಮಾಸ್ಟರ್ ಸ್ಟ್ರೋಕ್ ಆಫ್ ದಿ ಮ್ಯಾಚ್ ಪ್ರಶಸ್ತಿ - ಅಂಬಟಿ ರಾಯುಡು (9 ಬೌಂಡರಿ) - 50,000 ರೂಪಾಯಿ
- ಫೈನಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು - ಅಂಬಟಿ ರಾಯುಡು (3) 50,000 ರೂಪಾಯಿ
- ಪಂದ್ಯದ ದಿಗ್ಗಜ - ಶಹಬಾಜ್ ನದೀಮ್ (2/12)
- ಪಂದ್ಯಶ್ರೇಷ್ಠ ಪ್ರಶಸ್ತಿ - ಅಂಬಟಿ ರಾಯುಡು (74 ರನ್) 50,000 ರೂಪಾಯಿ
- ಐಎಂಎಲ್ 2025 ವಿಜೇತ ಇಂಡಿಯಾ ಮಾಸ್ಟರ್ಸ್ ತಂಡಕ್ಕೆ 1 ಕೋಟಿ ರೂಪಾಯಿ
- ರನ್ನರ್ ಅಪ್ ವೆಸ್ಟ್ ಇಂಡೀಸ್ ಮಾಸ್ಟರ್ಸ್ 50 ಲಕ್ಷ ರೂಪಾಯಿ ಬಹುಮಾನ
ಅತಿ ಹೆಚ್ಚು ಬೌಂಡರಿಗಳನ್ನು ಬಾರಿಸಿದ ಪ್ರಶಸ್ತಿ ಶ್ರೀಲಂಕಾದ ಕುಮಾರ್ ಸಂಗಕ್ಕಾರ 5 ಲಕ್ಷ ರೂಪಾಯಿ ಬಹುಮಾನ ಪಡೆದರು. ಇನ್ನು 25 ಸಿಕ್ಸರ್ಗಳನ್ನು ಬಾರಿಸಿದ ಶೇನ್ ವ್ಯಾಟ್ಸನ್ ಕೂಡ 5 ಲಕ್ಷ ರೂಪಾಯಿ ಬಹುಮಾನ ಪಡೆದುಕೊಂಡರು.
ಇದನ್ನೂ ಓದಿ: ಸುನಿತಾ ವಿಲಿಯಮ್ಸ್ ಭೂಮಿಗೆ ಬರುವ ದಿನ ಅಧಿಕೃತ.. ಅಮೆರಿಕದ ಸಮುದ್ರದಲ್ಲಿ ಲ್ಯಾಂಡ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ