/newsfirstlive-kannada/media/post_attachments/wp-content/uploads/2025/03/India-Masters.jpg)
ಇಂದು ರಾಯ್‌ಪುರ ಶಹೀದ್ ವೀರ್ ನಾರಾಯಣ್ ಸಿಂಗ್ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಸೆಮಿಫೈನಲ್​​ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಾಸ್ಟರ್ಸ್ ವಿರುದ್ಧ ಇಂಡಿಯಾ ಮಾಸ್ಟರ್ಸ್ ಗೆದ್ದು ಬೀಗಿದೆ. ಬರೋಬ್ಬರಿ 94 ರನ್​ಗಳಿಂದ ಗೆಲುವು ಸಾಧಿಸಿದೆ.
ಭಾರತ ನೀಡಿದ 221 ರನ್​ಗಳ ಬೃಹತ್​ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡ 18.1 ಓವರ್​ನಲ್ಲೇ ಕೇವಲ 126 ರನ್​ಗಳಿಗೆ ಆಲೌಟ್​ ಆಗಿದೆ. ಭಾರತ ತಂಡದ ಪರ ವಿನಯ್​ ಕುಮಾರ್​ 2, ಶಹಬಾಜ್ ನದೀಮ್ 4, ಇರ್ಫಾನ್​ ಪಠಾಣ್​​ 2, ಸ್ಟುವರ್ಟ್ ಬಿನ್ನಿ ಮತ್ತು ಪವನ್​ ನೇಗಿ ತಲಾ 1 ವಿಕೆಟ್​ ಪಡೆದರು.
ಟಾಸ್​ ಸೋತ್ರೂ ಮೊದಲು ಬ್ಯಾಟಿಂಗ್​ ಮಾಡಿದ ಭಾರತ ತಂಡದ ಪರ ಸ್ಟಾರ್​ ಆಲ್​ರೌಂಡರ್​ ಯುವರಾಜ್​ ಸಿಂಗ್​ ಅಬ್ಬರಿಸಿದರು. ಕೇವಲ 30 ಬಾಲ್​ನಲ್ಲಿ 7 ಭರ್ಜರಿ ಸಿಕ್ಸರ್​ ಸಮೇತ 1 ಫೋರ್​ನೊಂದಿಗೆ 59 ರನ್​ ಚಚ್ಚಿದ್ರು. ಸಚಿನ್​ ತೆಂಡುಲ್ಕರ್​​ 7 ಫೋರ್​ ಸಮೇತ 42 ರನ್​ ಬಾರಿಸಿದರು.
ಇಷ್ಟೇ ಅಲ್ಲ ಸ್ಟುವರ್ಟ್ ಬಿನ್ನಿ 36, ಯೂಸಫ್​ ಪಠಾಣ್​ 23, ಇರ್ಫಾನ್​ ಪಠಾಣ್​​ 19, ನೇಗಿ 14 ರನ್​ ಗಳಿಸಿದರು. ಭಾರತ ತಂಡ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 220 ರನ್​ಗಳ ಬೃಹತ್​ ಮೊತ್ತವನ್ನು ಕಲೆ ಹಾಕಿತ್ತು.
ಇದನ್ನೂ ಓದಿ:ಕೋಟಿ ಕೋಟಿ ಹಣ ಸುರಿದ್ರೂ ಯಾವುದೇ ಪ್ರಯೋಜನ ಇಲ್ಲ! RCB ತಂಡದಿಂದ ಈ ಮೂವರಿಗೆ ಗೇಟ್​ಪಾಸ್​​​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us