ಚೊಚ್ಚಲ ವಿಶ್ವಕಪ್​ಗೆ ಮುತ್ತಿಟ್ಟ ಭಾರತ.. ಖೋ ಖೋದಲ್ಲಿ ಮಹಿಳೆಯರು, ಪುರುಷರು ಇಬ್ಬರಿಗೂ ವರ್ಲ್ಡ್​​​ಕಪ್

author-image
Bheemappa
Updated On
ಚೊಚ್ಚಲ ವಿಶ್ವಕಪ್​ಗೆ ಮುತ್ತಿಟ್ಟ ಭಾರತ.. ಖೋ ಖೋದಲ್ಲಿ ಮಹಿಳೆಯರು, ಪುರುಷರು ಇಬ್ಬರಿಗೂ ವರ್ಲ್ಡ್​​​ಕಪ್
Advertisment
  • ಎರಡು ತಂಡಗಳಿಗೆ ಅಭಿನಂದನೆ ತಿಳಿಸಿರುವ ಸಿಎಂ ಸಿದ್ದರಾಮಯ್ಯ
  • ಮಹಿಳೆಯರ ವಿಜೇತ ತಂಡದಲ್ಲಿ ಕರ್ನಾಟದ ಮೈಸೂರಿನ ಯುವತಿ
  • ಫೈನಲ್​ನಲ್ಲಿ ಮೊದಲು ಕಪ್​ಗೆ ಮುತ್ತಿಕ್ಕಿದ್ದು ಮಹಿಳೆಯರ, ಪುರುಷರ?

ದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರೋಮಾಂಚಕಾರಿ ಖೋ ಖೋ ಫೈನಲ್‌ ಪಂದ್ಯಗಳಲ್ಲಿ ನೇಪಾಳ ತಂಡವನ್ನು ಮಣಿಸಿ ಭಾರತದ ಪುರುಷರು, ಮಹಿಳೆಯರೂ ಇಬ್ಬರೂ ಟ್ರೋಫಿಗೆ ಮುತ್ತಿಕ್ಕಿದ್ದಾರೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಎರಡು ತಂಡಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಫೈನಲ್​ನಲ್ಲಿ ಮಹಿಳೆಯರ ಅಮೋಘ ಪ್ರದರ್ಶನ

ಇಂದಿರಾ ಗಾಂಧಿ ಸ್ಟೇಡಿಯಂನಲ್ಲಿ ಮೊದಲು ಮಹಿಳೆಯರ ಖೋಖೋ ಫೈನಲ್ ಪಂದ್ಯ ನಡೆಯಿತು. ಇದರಲ್ಲಿ ನೇಪಾಳವನ್ನು 78-40 ಅಂಕಗಳಿಂದ ಭಾರತದ ಮಹಿಳಾ ತಂಡ ಸೋಲಿಸಿದೆ. ಈ ಮೂಲಕ ಚೊಚ್ಚಲ ಖೋ ಖೋ ವಿಶ್ವಕಪ್‌ಗೆ ಮುತ್ತಿಕ್ಕುವ ಮೂಲಕ ಭಾರತ ತಂಡ ಅಮೋಘ ಸಾಧನೆ ಮಾಡಿದೆ. ಇನ್ನು ಭಾರತದ ಪರ ಮೊದಲು ದಾಳಿಗೆ ಮುಂದಾದ ಪ್ರಿಯಾಂಕಾ ಇಂಗಲ್ ಭಾರತಕ್ಕೆ ಮೊದಲ ಸರದಿಯಲ್ಲಿ ಸ್ಫೋಟಕ ಆರಂಭ ಒದಗಿಸಿದರು.

publive-image

ಮೊದಲ ಹಂತದಲ್ಲೇ ಉತ್ತಮ ಪರ್ಫಾಮೆನ್ಸ್​ನಿಂದ 34-0 ದಿಂದ ಮುನ್ನಡೆ ಸಾಧಿಸಿತ್ತು. ಕೊನೆವರೆಗೂ ನೇಪಾಳ ಭಾರತದ ಅಂಕ ತಲುಪಲು ಆಗಲೇ ಇಲ್ಲ. ಅದರಲ್ಲಿ ಭಾರತೀಯ ನಾಯಕಿಯ ಪರ್ಫಾಮೆನ್ಸ್​​ನಿಂದ ತಂಡ ಗೆಲುವಿನ ನಗೆ ಬೀರಿತು. ಖೋ ಖೋ ಆಟದ ಮೊಟ್ಟ ಮೊದಲ ಫೈನಲ್ ಆಟದಲ್ಲೇ ಭಾರತ ವಿಜಯ ಮಾಲೆ ಧರಿಸಿ ಇತಿಹಾಸ ಬರೆದಿದೆ.

ಖೋ ಖೋ ವಿಶ್ವಕಪ್​ನಲ್ಲಿ ಗೆದ್ದ ಭಾರತದ ಪುರುಷರ ತಂಡ

ಮಹಿಳೆಯರು ಟ್ರೋಫಿ ಜಯಿಸಿದ ಬೆನ್ನಲ್ಲೇ ಭಾರತದ ಖೋ ಖೋ ಪುರುಷರ ತಂಡ ಕಪ್​ ಗೆದ್ದುಕೊಂಡಿದೆ. ರವಿವಾರ ಇಂದಿರಾ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಖೋ ಖೋ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತದ ಪುರುಷರ ತಂಡ, ನೇಪಾಳ ಟೀಮ್​ ಅನ್ನು 54-36 ಪಾಯಿಂಟ್ಸ್​​ನಿಂದ ಮಣಿಸಿ ಗೆಲುವು ಪಡೆದಿದೆ.

ಫೈನಲ್​ ಪಂದ್ಯದಲ್ಲಿ ನಾಯಕ ಪ್ರತೀಕ್ ವೈಕರ್ ಮತ್ತು ಸ್ಟಾರ್ ಆಟಗಾರ ರಾಮ್‌ಜಿ ಕಶ್ಯಪ್ ಅವರ ಅಸಾಧಾರಣ ಆಟದಿಂದ ಭಾರತ ತಂಡ ಉತ್ತಮ ಪ್ರದರ್ಶನ ನೀಡಿತು. ರಾಮ್‌ಜಿ ಕಶ್ಯಪ್ ಅವರ ಸ್ಕೈ ಡೈವ್​ಗಳ ನೆರವಿನಿಂದ ಭಾರತ ಆರಂಭದಲ್ಲೇ 4 ನಿಮಿಷದಲ್ಲಿ 10 ಪಾಯಿಂಟ್ ಕಲೆ ಹಾಕಿತ್ತು. ಹೀಗಾಗಿ ಇದೇ ಅಂತರ ಕಾಯ್ದುಕೊಂಡ ಟೀಮ್ ಇಂಡಿಯಾ ಕೊನೆಗೆ 54-36 ಪಾಯಿಂಟ್ಸ್​​ನಿಂದ ಜಯ ಸಾಧಿಸಿತು.

publive-image

ಇನ್ನು ಲೀಗ್​ ಹಂತದಲ್ಲಿ ಟೀಮ್ ಇಂಡಿಯಾ, ಬ್ರೆಜಿಲ್, ಪೆರು ಮತ್ತು ಭೂತಾನ್ ವಿರುದ್ಧ ಭರ್ಜರಿಯಾಗಿ ಗೆಲುವುಗಳನ್ನು ಪಡೆದಿತ್ತು. ಇವೆಲ್ಲಾ ನಿರ್ಣಾಯಕ ಗೆಲುವುಗಳು ಆಗಿದ್ದವು. ಅಲ್ಲದೇ ಬಾಂಗ್ಲಾದೇಶದ ವಿರುದ್ಧದ ಕ್ವಾರ್ಟರ್‌ಫೈನಲ್‌ನಲ್ಲಿ ಕಮಾಂಡಿಂಗ್ ಪ್ರದರ್ಶನ ನೀಡಿ ಜಯ ಪಡೆದುಕೊಂಡಿತ್ತು. ಇನ್ನು ಸೆಮಿಫೈನಲ್‌ನಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾದ ಖೋ ಖೋ ತಂಡಕ್ಕೆ ಚಮಕ್ ಕೊಟ್ಟು ಭಾರತದ ಪುರುಷರು ಫೈನಲ್​ಗೆ ಎಂಟ್ರಿ ಕೊಟ್ಟಿದ್ದರು. ಅದರಂತೆ ಫೈನಲ್​ನಲ್ಲಿ ನೇಪಾಳಕ್ಕೆ ಸೋಲಿನ ರುಚಿ ತೋರಿಸಿ ಮನೆಗೆ ಕಳಿಸಿದೆ.

publive-image

ಇದನ್ನೂ ಓದಿ:ಮಹಾ ಕುಂಭಮೇಳದಲ್ಲಿ ಸಿಡಿದ ಆರು ಸಿಲಿಂಡರ್​ಗಳು.. 300 ಟೆಂಟ್​ಗಳು ಸುಟ್ಟು ಭಸ್ಮ

ಮೊಟ್ಟ ಮೊದಲ ಖೋ ಖೋ ವಿಶ್ವಕಪ್ ಪಂದ್ಯಾಕೂಟದಲ್ಲಿ ನೇಪಾಳವನ್ನು ಬಗ್ಗು ಬಡಿದು ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತದ ಮಹಿಳಾ, ಪುರುಷರ ತಂಡಕ್ಕೆ ಅಭಿನಂದನೆಗಳು. ಚೊಚ್ಚಲ ವಿಶ್ವಕಪ್‌ನಲ್ಲಿ ಭಾರತೀಯ ತಂಡಗಳ ಈ ಅಮೋಘ ಸಾಧನೆ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಉಳಿಯಲಿದೆ. ಇದು ಭಾರತೀಯರ ಪಾಲಿಗೆ ಇದೊಂದು ಐತಿಹಾಸಿಕ ದಿನ. ಇನ್ನು ಮೈಸೂರಿನ ಟಿ.ನರಸೀಪುರದ ಕುರುಬೂರಿನ ಯುವತಿ ಚೈತ್ರಾ. ಬಿ ಅವರು ವಿಶ್ವವಿಜೇತ ಮಹಿಳಾ ತಂಡದ ಭಾಗವಾಗಿರುವುದು ನಾಡಿಗೆ ಹೆಮ್ಮೆಯ ಸಂಗತಿ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.


">January 19, 2025

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment