/newsfirstlive-kannada/media/post_attachments/wp-content/uploads/2024/05/Heavy-Rains-Karnataka.jpg)
ಬೆಂಗಳೂರು: ರಾಜ್ಯದಲ್ಲಿ ಇನ್ನೂ 5 ದಿನಗಳ ಕಾಲ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆಗಸ್ಟ್​​ 1ನೇ ತಾರೀಕಿನಿಂದ 5 ರವರೆಗೂ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹೇಳಿದೆ.
ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ ಸಾಧ್ಯತೆ ಇದೆ. ಈ ಮೂರು ಜಿಲ್ಲೆಗಳಲ್ಲಿ ಆಗಸ್ಟ್​​ 1ನೇ ತಾರೀಕು ರೆಡ್​ ಅಲರ್ಟ್​​​ ಘೋಷಣೆಯಾಗಿದೆ. ಬಳಿಕ ಆಗಸ್ಟ್​​ 2 ಮತ್ತು 3 ರಂದು ಆರೇಂಜ್​​ ಅಲರ್ಟ್​​, 4 ರಂದು ಯಲ್ಲೋ ಅಲರ್ಟ್​​ ಘೋಷಣೆ ಮಾಡಲಾಗಿದೆ.
ಶಿವಮೊಗ್ಗ, ಚಿಕ್ಕಮಗಳೂರು, ಕೊಡಗಿನಲ್ಲಿ ಭಾರೀ ಮಳೆ ಆಗಲಿದೆ. ಇಲ್ಲೂ 3 ದಿನ ಆರೆಂಜ್​ ಅಲರ್ಟ್​ ಮತ್ತು 1 ದಿನ ಯಲ್ಲೋ ಅಲರ್ಟ್​ ಘೋಷಿಸಲಾಗಿದೆ. ಕಾರ್ಕಳ, ಉಡುಪಿ, ಅಂಕೋಲಾ ಮತ್ತು ಉತ್ತರ ಕನ್ನಡದಲ್ಲಿ 20 ಸೆಂಟಿ ಮೀಟರ್​ ಮಳೆ ಆಗಲಿದೆ.
ಇದನ್ನೂ ಓದಿ:ಕೇರಳದ ಬೆನ್ನಲ್ಲೇ ಹಿಮಾಚಲ ಪ್ರದೇಶದಲ್ಲಿ ದುರಂತ.. 35 ಜನ ಕಣ್ಮರೆ; ಕೊಚ್ಚಿ ಹೋಗಿರುವ ಶಂಕೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us