newsfirstkannada.com

ದೇಶದ ಅತಿದೊಡ್ಡ ಗಣೇಶನ ವಿಗ್ರಹ.. ಎಷ್ಟು ಅಡಿ, ಎಷ್ಟು ಟನ್ ಇದೆ, ಇದರ ವಿಶೇಷತೆ ಏನು?

Share :

Published September 7, 2024 at 8:51am

Update September 7, 2024 at 10:18am

    ದೊಡ್ಡ ಗಣೇಶನ ನಿರ್ಮಾಣ ಮಾಡಲು ಎಷ್ಟು ಖರ್ಚು ಆಗಿದೆ?

    ಗಣಪತಿ ಉತ್ಸವ ಸಮಿತಿ ನಿರ್ಧಾರದಂತೆ ಗಣೇಶನ ವಿಗ್ರಹ ರೆಡಿ

    ಗಣೇಶನ ಪಕ್ಕದಲ್ಲಿ ಇದೆ ಆಕರ್ಷಣೆಯ ರಾಮಲಲ್ಲಾ ಮೂರ್ತಿ

ಇಂದು ಗಣೇಶ ಚತುರ್ಥಿ ಹಬ್ಬದ ಸಡಗರ, ಸಂಭ್ರಮ. ಗೌರಿ, ಗಣಪತಿಯ ವಿಗ್ರಹಗಳನ್ನ ಪ್ರತಿಷ್ಠಾಪಿಸಿ ಯಾವುದೇ ಅಡೆತಡೆ ಬಾರದಂತೆ ಸಮೃದ್ಧಿಯನ್ನು ದಯಪಾಲಿಸು ಎಂದು ವಿಘ್ನ ನಿವಾರಕನ ಬಳಿ ಭಕ್ತರು ಕೋರಿಕೊಳ್ಳುತ್ತಾರೆ. ಗಣೇಶನಿಗೆ ನೈವೇದ್ಯಕ್ಕಾಗಿ ವಿವಿಧ ರೀತಿಯ ಭಕ್ಷ್ಯ, ಕರಿಗಡುಬು ಮತ್ತು ಸಿಹಿ ಸಿಹಿತಿಂಡಿ ಸೇರಿದಂತೆ ಹಣ್ಣುಗಳನ್ನು ಪೂಜೆಯಲ್ಲಿಟ್ಟು ಇಷ್ಟಾರ್ಥ ಸಿದ್ಧಿ ನೆರವೇರಿಸು ಎಂದು ಗಣಪನನ್ನ ಕೇಳಿಕೊಳ್ಳುತ್ತಾರೆ. ಈ ಬಾರಿ ದೇಶದ ಅತಿ ದೊಡ್ಡ ಗಣಪತಿ ಮೂರ್ತಿ ಎಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ ಎಂದರೆ ಅದು ತೆಲಂಗಾಣದ ಹೈದರಾಬಾದ್ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Ganesh Chaturthi 2024: ಗಣೇಶ ಪ್ರತಿಷ್ಠಾಪನೆಗೆ ಮೂರು ಒಳ್ಳೆಯ ಮುಹೂರ್ತ.. ರಾಜ್ಯದಲ್ಲಿ ಹೇಗಿದೆ ಸಡಗರ?

ಬೆಂಗಳೂರು, ಮುಂಬೈ, ಕೋಲ್ಕತ್ತಾ ಸೇರಿದಂತೆ ವಿವಿಧ ನಗರಗಳು ಗಣೇಶನ ಉತ್ಸವಕ್ಕೆ ಬಾರೀ ಹೆಸರು ಪಡೆದುಕೊಂಡಿವೆ. ಇವುಗಳ ಜೊತೆಗೆ ಹೈದರಾಬಾದ್​ನಲ್ಲೂ ಗಣೇಶ ಉತ್ಸವ ಜೋರಾಗಿ ನಡೆಯುತ್ತದೆ. ಆದರೆ ಹೈದರಾಬಾದ್​ನ ಖೈರತಾಬಾದ್​ನಲ್ಲಿ 70ನೇ ವರ್ಷದ ಗಣೇಶೋತ್ಸವವನ್ನು ಸಡಗರದಿಂದ ಆಚರಣೆ ಮಾಡಲಾಗುತ್ತಿದೆ. 70ನೇ ವರ್ಷದ ಹಿನ್ನೆಲೆಯಲ್ಲಿ 70 ಅಡಿ ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು ಇದು 50 ಟನ್​ಗೂ ಅಧಿಕ ತೂಕವಿದೆ ಎನ್ನಲಾಗಿದೆ. ಇದಕ್ಕಾಗಿ ಕೆಲ ತಿಂಗಳುಗಳ ಮೊದಲೇ ಖೈರತಾಬಾದ್​ನ ಗಣೇಶ ಉತ್ಸವ ಸಮಿತಿ ಯೋಜನೆ ರೂಪಿಸಿ ಅತಿ ದೊಡ್ಡ ಗಣೇಶ ಮೂರ್ತಿಯನ್ನ ಪ್ರತಿಷ್ಠಾಪಿಸಿದೆ ಎಂದು ತಿಳಿದು ಬಂದಿದೆ.

ಕಳೆದ ವರ್ಷ ಇದೇ ಸ್ಥಳದಲ್ಲಿ 63 ಅಡಿ ಎತ್ತರದ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿದ್ದರು. ಕಳೆದ ಬಾರಿಗಿಂತ ಈ ಸಲ 7 ಅಡಿ ಎತ್ತರವನ್ನು ಗಣೇಶ ಉತ್ಸವ ಸಮಿತಿ ಹೆಚ್ಚಿಸಿದೆ. ಉತ್ಸವ ಸಮಿತಿ ನಿರ್ಧಾರದಂತೆ ಈ ಸಲ ಸಪ್ತಮುಖ ಮಹಾ ಶಕ್ತಿ ಗಣಪತಿಯನ್ನು ಪ್ರತಿಷ್ಠಾಪಿಸಿದ್ದು ವಿಗ್ರಹವು 7 ಮುಖಗಳನ್ನು ಹೊಂದಿದ್ದು ದೊಡ್ಡದಾದ 7 ಹೆಡೆ ಹಾವು ಹಾಗೂ ಗಣೇಶ 14 ಕೈಗಳನ್ನು ಹೊಂದಿದ್ದಾನೆ. 7 ಮುಖಗಳಲ್ಲಿ ಒಂದು ಕಡೆ ದೇವತೆಯ ಮುಖಗಳು ಇನ್ನೊಂದು ಕಡೆ ಪುರುಷ ದೇವರ ಮುಖಗಳು ಇವೆ ಎಂದು ವಿಗ್ರಹ ಗಮನಿಸಿದಾಗ ತಿಳಿದು ಬರುತ್ತದೆ. ಇನ್ನು ಇದು ವಿಶ್ವದಲ್ಲೇ ಅತಿ ದೊಡ್ಡ ಗಣಪತಿಯನ್ನು ನಾವು ಪ್ರತಿಷ್ಠಾಪನೆ ಮಾಡಿದ್ದೇವೆ ಎಂದು ಸಮಿತಿ ಹೇಳುತ್ತಿದೆ.

ಇದನ್ನೂ ಓದಿ: ಫಿಲಂ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಜೂನಿಯರ್ NTR ಸಹೋದರ.. ಬಾಲಯ್ಯನ ಫ್ಯಾನ್ಸ್​ ಫುಲ್ ಖುಷ್!

ಈ 70 ಅಡಿ ಎತ್ತರದ ಗಣೇಶ ಪರಿಸರ ಸ್ನೇಹಿಯಾಗಿದ್ದಾನೆ. ಇದನ್ನು ಸಂಪೂರ್ಣವಾಗಿ ಮಣ್ಣಿನಿಂದಲೇ ತಯಾರು ಮಾಡಲಾಗಿದೆ. ಇದನ್ನು ನಿರ್ಮಾಣ ಮಾಡಲು ಸುಮಾರು 1 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಅಯೋಧ್ಯೆಯ ರಾಮಲಲ್ಲಾನನ ವಿಗ್ರದಂತೆ ಇರೋ ಮೂರ್ತಿಯನ್ನು ಈ ಗಣೇಶನ ಪಕ್ಕದಲ್ಲಿ ಇಡಲಾಗಿದೆ. ಈ ದೊಡ್ಡ ಗಣಪತಿಯ ವಿಗ್ರಹ ನೋಡಿ ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಇದರ ಫೋಟೋ, ವಿಡಿಯೋಗಳನ್ನು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಡುತ್ತಿದ್ದಾರೆ. ಕೆಲವರು ಡ್ರೋನ್ ಕ್ಯಾಮೆರಾ ಬಳಸಿ ಗಣೇಶನ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದಾರೆ.

ಖೈರತಾಬಾದ್​ನಿಂದ ಭಾರೀ ಮೆರವಣಿಗೆಯ ಮೂಲಕ ಗಣೇಶನ ಶೋಭಾಯಾತ್ರೆಯ ಮೂಲಕ ಉಸ್ಮಾನ ಸಾಗರದಲ್ಲಿ ವಿಸರ್ಜನೆ ಮಾಡಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇಶದ ಅತಿದೊಡ್ಡ ಗಣೇಶನ ವಿಗ್ರಹ.. ಎಷ್ಟು ಅಡಿ, ಎಷ್ಟು ಟನ್ ಇದೆ, ಇದರ ವಿಶೇಷತೆ ಏನು?

https://newsfirstlive.com/wp-content/uploads/2024/09/GANESH_TELANGANA_NEW.jpg

Load More