ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಆಡೋದು ಡೌಟ್; ಬದಲಿ ಆಟಗಾರ ಯಾರು?

author-image
Ganesh
Updated On
ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್.. ಬ್ಯಾಟಿಂಗ್ ಒಂದೇ ಭಾರತ ತಂಡದ ಸ್ಟ್ರೆಂಥ್, ವೀಕ್ನೆಸ್..!
Advertisment
  • ಅಗ್ರ ಸ್ಥಾನದ ಮೇಲೆ ಟೀಮ್ ಇಂಡಿಯಾ ಕಣ್ಣು
  • ಮಿಡಲ್ ಆರ್ಡರ್ ಟೆಸ್ಟ್​​ಗೆ ರೋಹಿತ್​​ ಬಾಯ್ಸ್ ರೆಡಿ
  • ಎಕ್ಸ್​ಪೀರಿಮೆಂಟ್​​ಗೆ ಮುಂದಾಗುತ್ತಾ ಟೀಮ್ ಇಂಡಿಯಾ?

ಸೂಪರ್​ ಸಂಡೇ.. ಸೂಪರ್​ ಫೈಟ್​​ಗೆ ಇಂಡೋ-ಕಿವೀಸ್ ತಂಡಗಳು ರೆಡಿಯಾಗಿವೆ. ದುಬೈನ ರನ್​ಭೂಮಿಯಲ್ಲಿ ನಡೆಯಲಿರೋ ಈ ಪಂದ್ಯ, ಉಭಯ ತಂಡಗಳಿಗೆ ಅತ್ಯಂತ ಮಹತ್ವದಾಗಿದೆ. ​​​​​​​​​ ಗ್ರೂಪ್​ A ನಲ್ಲಿ ಮೊದಲ ಸ್ಥಾನಕ್ಕಾಗಿ ಪೈಪೋಟಿಗೆ ಇಳಿದಿರುವ ತಂಡಗಳು, ಇಂದು ಕ್ರಿಕೆಟ್​​​ ಅಭಿಮಾನಿಗಳಿಗೆ ಮಸ್ತ್ ಮನರಂಜನೆ ನೀಡೋಕೆ ಮುಂದಾಗಿವೆ.

ದುಬೈನಲ್ಲಿ ದರ್ಬಾರ್ ನಡೆಸೋದ್ಯಾರು? ಟೀಮ್ ಇಂಡಿಯಾನಾ? ನ್ಯೂಜಿಲೆಂಡಾ? ವಿಶ್ವಕ್ರಿಕೆಟ್​​ನ ಎರಡು ಬಲಿಷ್ಟ ತಂಡಗಳ ಸೆಣಸಾಟ ನೋಡೋಕೆ, ಅಭಿಮಾನಿಗಳು ಕಾದು ಕುಳಿತಿದ್ದಾರೆ. ನಿಜ, ಒಂದು ತಂಡಕ್ಕೆ ಸೂಪರ್​​ಸ್ಟಾರ್ಸ್​ ಶಕ್ತಿ ಇದೆ. ಮತ್ತೊಂದು ತಂಡಕ್ಕೆ ಯುವ ಪಡೆಯೇ ಯುಕ್ತಿ. ಸೂಪರ್​​ಸ್ಟಾರ್ಸ್​ ವರ್ಸಸ್ ಯಂಗ್​​ಸ್ಟರ್ಸ್​​​ ಯುದ್ಧದಲ್ಲಿ ವಿಜಯ ಪತಾಕೆ ಹಾರಿಸೋದ್ಯಾರು?

ಇದನ್ನೂ ಓದಿ: ಧನರಾಜ್​ ಆಚಾರ್​ ಮನೆಗೆ ಸರ್​ಪ್ರೈಸ್​ ಭೇಟಿ ಕೊಟ್ಟ ಗೌತಮಿ ಜಾಧವ್ ದಂಪತಿ; ವಿಶೇಷತೆ ಏನು?​​

publive-image

ಅಗ್ರ ಸ್ಥಾನ ಮೇಲೆ ಟೀಮ್ ಇಂಡಿಯಾ ಕಣ್ಣು

ಬಾಂಗ್ಲಾದೇಶ ಮತ್ತು ಪಾಕಿಸ್ತಾನ ವಿರುದ್ಧ ಜಯಗಳಿಸಿರುವ ಟೀಮ್ ಇಂಡಿಯಾ, ಸದ್ಯ ಗ್ರೂಪ್​​ 'A'ನಲ್ಲಿ, ಎರಡನೇ ಸ್ಥಾನದಲ್ಲಿದೆ. ಆದ್ರೆ ಇಂದು ದುಬೈನಲ್ಲಿ ಕಿವೀಸ್ ಕಿವಿ ಹಿಂಡಿ, 6 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೇರಲು ರೋಹಿತ್ ಪಡೆ ತುದಿಗಾಲಲ್ಲಿ ನಿಂತಿದೆ.

ಮಿಡಲ್ ಆರ್ಡರ್ ಟೆಸ್ಟ್​​ಗೆ ರೋಹಿತ್​​ ಬಾಯ್ಸ್ ರೆಡಿ

ಮೊದಲ ಎರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಟಾಪ್ ಫೋರ್ ಬ್ಯಾಟರ್ಸ್​​, ಅಗ್ನಿ ಪರೀಕ್ಷೆ ಎದುರಿಸಿದ್ದಾರೆ. ಇಂದು ಟೀಮ್ ಇಂಡಿಯಾದ ಮಿಡಲ್ ಆರ್ಡರ್ ಬ್ಯಾಟರ್ಸ್​, ಕಿವೀಸ್​​ ಟೆಸ್ಟ್​​​ಗೆ ರೆಡಿಯಾಗಿದ್ದಾರೆ. ಸೆಮೀಸ್​​ಗೂ ಮುನ್ನ ರೋಹಿತ್ ಬಾಯ್ಸ್​, ಎದುರಾಳಿಗಳ ಸವಾಲಿಗೆ ಸನ್ನದ್ಧರಾಗಲಿದ್ದಾರೆ.

ಎಕ್ಸ್​ಪೀರಿಮೆಂಟ್​​ಗೆ ಮುಂದಾಗುತ್ತಾ ಟೀಮ್ ಇಂಡಿಯಾ?

ಕ್ಯಾಪ್ಟನ್ ರೋಹಿತ್ ಶರ್ಮಾ ಹ್ಯಾಮ್​ಸ್ಟ್ರಿಂಗ್​​ ಇಂಜುರಿಯಿಂದ ಬಳಲುತ್ತಿದ್ದಾರೆ. ರೋಹಿತ್ ಫಿಟ್ನೆಸ್ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. ಒಂದು ವೇಳೆ ರೋಹಿತ್ ಅಲಭ್ಯರಾದ್ರೆ, ಪಂತ್ ತಂಡಕ್ಕೆ ಎಂಟ್ರಿ ಕೊಡಲಿದ್ದಾರೆ. ಹಾಗೆ ಸೆಮೀಸ್​​ಗೂ ಮುನ್ನ ವೇಗಿ ಶಮಿಯನ್ನ ಫ್ರೆಶ್ ಆಗಿಟ್ಟು, ಎಡಗೈ ವೇಗಿ ಆರ್ಷ್​​ದೀಪ್​​ಗೆ ಪ್ಲೇಯಿಂಗ್​ ಇಲೆವೆನ್​ನಲ್ಲಿ ಆಡಿಸಲು ಮ್ಯಾನೇಜ್ಮೆಂಟ್ ಯೋಚಿಸುತ್ತಿದೆ.

ಇದನ್ನೂ ಓದಿ: ಸೂಟ್​ಕೇಸ್​ನಲ್ಲಿ ಕಾಂಗ್ರೆಸ್​​​ ನಾಯಕಿಯ ಶವ ಪತ್ತೆ; ದೇಶದಲ್ಲಿ ಸಂಚಲನ ಮೂಡಿಸಿದ ಕೇಸ್

publive-image

ಕಿವೀಸ್​ ಮೇಲೆ ಸ್ಪಿನ್ ಟು ವಿನ್ ಫಾರ್ಮುಲಾ?​​

ಏಷ್ಯನ್ ಕಂಡೀಷನ್ಸ್​​​ನಲ್ಲಿ ನ್ಯೂಜಿಲೆಂಡ್​​​​ ಸಕ್ಸಸ್ ಕಂಡಿದೆ. ಉಪಖಂಡದಲ್ಲಿ ಜಬರ್ದಸ್ತ್ ಪ್ರದರ್ಶನ ನೀಡಿರುವ ಬ್ಲ್ಯಾಕ್​​ ಕ್ಯಾಪ್ಸ್​ ಮೇಲೆ, ಇಂದು ಟೀಮ್ ಇಂಡಿಯಾ ಸ್ಪಿನ್ ದಾಳಿಗೆ ಮುಂದಾಗಲಿದೆ. ಸ್ಪಿನ್ ಟು ವಿನ್ ಫಾರ್ಮುಲಾದೊಂದಿಗೆ, ಕಿವೀಸ್ ವಿರುದ್ಧ ಗೆಲ್ಲೋ ಪ್ಲಾನ್, ಟೀಮ್ ಇಂಡಿಯಾದ್ದು.

ಆತ್ಮವಿಶ್ವಾಸ ಕುಗ್ಗಿಸೋ ಪ್ಲಾನ್

ಈಗಾಗಲೇ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್, ಸೆಮಿಫೈನಲ್​​​​​ಗೆ ಎಂಟ್ರಿ ಕೊಟ್ಟಿದೆ. ಒಂದು ವೇಳೆ ಸೆಮೀಸ್​​ನಲ್ಲಿ ಉಭಯ ತಂಡಗಳು ಗೆಲುವು ದಾಖಲಿಸಿದ್ರೆ, ಫೈನಲ್​ನಲ್ಲಿ ಮತ್ತೆ ಮುಖಾಮುಖಿ ಆಗಲಿವೆ. ಹಾಗಾಗಿ ಫೈನಲ್​ಗೂ ಮುನ್ನ ಟೀಮ್ ಇಂಡಿಯಾ, ನ್ಯೂಜಿಲೆಂಡ್​​ಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ದೊಡ್ಡ ಆಘಾತ ನೀಡಬೇಕು. ಕಿವೀಸ್ ಆತ್ಮವಿಶ್ವಾಸ ಕುಗ್ಗಿಸಬೇಕು. ಟೀಮ್ ಇಂಡಿಯಾ ಗೆಲುವಿನ ಲೆಕ್ಕಾಚಾರದಲ್ಲಿರುವ ನ್ಯೂಜಿಲೆಂಡ್​​ ವಿರುದ್ಧ ಹ್ಯಾಟ್ರಿಕ್​​ ಗೆಲುವಿಗಾಗಿ ಕಾಯ್ತಿದೆ. ದುಬೈನಲ್ಲಿ ಕಿವೀಸ್ ಉಡೀಸ್ ಮಾಡೋಕೆ ತುದಿಗಾಲಲ್ಲಿ ನಿಂತಿದೆ.

ಇದನ್ನೂ ಓದಿ: ಡಿ.ಕೆ ಶಿವಕುಮಾರ್ ನಡೆ- ನುಡಿಯಿಂದ ರಾಜಕೀಯದಲ್ಲಿ ಸಂಚಲನ.. ಕಾಂಗ್ರೆಸ್​ ನಾಯಕರು ಹೇಳುವುದೇನು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment