ಚಾಂಪಿಯನ್ ಪಟ್ಟಕ್ಕೆ ಬಿಗ್ ಫೈಟ್‌.. ಫೈನಲ್ಸ್​ನಲ್ಲಿ ವರ್ಕ್​ಔಟ್ ಆಗುತ್ತಾ ಆ ಮ್ಯಾಜಿಕ್? ಕಿವೀಸ್‌ಗೆ ದೊಡ್ಡ ಟೆನ್ಷನ್‌!

author-image
admin
Updated On
INDvsNZ: ಫೈನಲ್​​​ ಫೈಟ್‌ನಲ್ಲಿ ಈ ಮೂವರೇ ವಿಲನ್ಸ್​.. ಟೀಮ್ ಇಂಡಿಯಾಗೆ ಕಾದಿದೆ ಬಿಗ್ ಥ್ರೆಟ್; ಯಾರವರು?
Advertisment
  • ವರುಣ್ ಟೀಮ್ ಇಂಡಿಯಾದ ಸ್ಪಿನ್ ಚಕ್ರವರ್ತಿ..!
  • ಲೀಗ್​ನಲ್ಲಿ ನ್ಯೂಜಿಲೆಂಡ್​​ನ 9 ಬ್ಯಾಟರ್ಸ್​ ಸ್ಪಿನ್​ಗೆ ಬಲಿ!
  • ಫೈನಲ್ಸ್​ನಲ್ಲಿ ವರ್ಕ್​ಔಟ್ ಆಗುತ್ತಾ ಸ್ಪಿನ್ ಮ್ಯಾಜಿಕ್..?

ಜಸ್ಟ್ ಒಂದೇ ಒಂದು ಪಂದ್ಯ. ಚಾಂಪಿಯನ್ಸ್ ಟ್ರೋಫಿಯ ಚಾಂಪಿಯನ್ಸ್ ಯಾರೂ ಅಂತ ಗೊತ್ತಾಗುತ್ತೆ. ಬಾಂಗ್ಲಾ, ಪಾಕ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳನ್ನ ಬಗ್ಗು ಬಡಿದಿರುವ ಟೀಮ್ ಇಂಡಿಯಾ, ಫೈನಲ್ಸ್​ ಗೆಲ್ಲುವ ಫೇವರಿಟ್ಸ್ ಎನಿಸಿಕೊಂಡಿದೆ. ರೋಹಿತ್ ಪಡೆಯ ವಿಶ್ವಾಸಕ್ಕೆ ಕಾರಣವಾಗಿರೋದೇ, ಟೀಮ್ ಇಂಡಿಯಾ ಸ್ಪಿನ್ನರ್ಸ್​.

ಸ್ಪಿನ್... ಸ್ಪಿನ್... ಸ್ಪಿನ್... ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಫೈನಲ್ಸ್​ ಗೆಲ್ಲೋಕೆ, ಸ್ಪಿನ್ ಅಸ್ತ್ರದ ಮೊರೆ ಹೋಗಿದೆ. ಟೂರ್ನಿಯಲ್ಲಿ ಫ್ರಂಟ್​​ಲೈನ್ ಬೌಲರ್​​​​ಗಾಳದ ಮೊಹಮ್ಮದ್ ಶಮಿ ಮತ್ತು ಹಾರ್ದಿಕ್ ಪಾಂಡ್ಯ, ಡೀಸೆಂಟ್​​​ ಪರ್ಫಾಮೆನ್ಸ್ ನೀಡ್ತಿದ್ದಾರೆ. ಆದ್ರೆ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಕೋಚ್ ಗೌತಮ್ ಗಂಭೀರ್ ಮಾತ್ರ, ಸ್ಪಿನ್ ಟು ವಿನ್ ಅಂತಿದ್ದಾರೆ.

publive-image

ಮೊಹಮ್ಮದ್ ಶಮಿ ಮತ್ತು ಹಾರ್ದಿಕ್ ಪಾಂಡ್ಯ ಜೋಡಿ, ಟೂರ್ನಿಯಲ್ಲಿ 12 ವಿಕೆಟ್​​​​​ ಬೇಟೆಯಾಡಿದ್ದಾರೆ. ಇನ್ನು ಸ್ಪಿನ್ನರ್​ಗಳಾದ ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ ಮತ್ತು ಜಡೇಜಾ ನಾಲ್ವರು ಸೇರಿ, 21 ವಿಕೆಟ್ ಪಡೆದಿದ್ದಾರೆ. ಮಿಡಲ್ ಓವರ್​ಗಳಲ್ಲಿ ಎಫೆಕ್ಟೀವ್ ಸ್ಪೆಲ್ ಹಾಕ್ತಿರುವ ಟೀಮ್ ಇಂಡಿಯಾ ಸ್ಪಿನ್ನರ್ಸ್​, ಮ್ಯಾಚ್ ವಿನ್ನರ್ಸ್ ಆಗಿದ್ದಾರೆ.

ವರುಣ್ ಟೀಮ್ ಇಂಡಿಯಾದ ಸ್ಪಿನ್ ಚಕ್ರವರ್ತಿ..!
ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಎಂಟ್ರಿಯಿಂದ, ಟೀಮ್ ಇಂಡಿಯಾ ಚರಿಷ್ಮಾ ಬದಲಾಗಿದೆ. ನಾಯಕ ರೋಹಿತ್​ ಶರ್ಮಾರ ನಂಬಿಕಸ್ತ ಸ್ಪಿನ್ನರ್​ ಎನಿಸಿಕೊಂಡಿರೋ ವರುಣ್, 3 ಪಂದ್ಯಗಳಿಂದ 7 ವಿಕೆಟ್ ಪಡೆದಿದ್ದಾರೆ. ಕೇವಲ 4.55ರ ಎಕಾನಮಿಯಲ್ಲಿ ವರುಣ್, ರನ್​ ನೀಡಿದ್ದಾರೆ.

publive-image

ಅಕ್ಷರ್, ಕುಲ್ದೀಪ್ ವೆರೈಟಿ ಸ್ಪಿನ್​ಗೆ ಎದುರಾಳಿಗೆ ಸ್ಟನ್..!
ವರುಣ್ ಚಕ್ರವರ್ತಿ ಗೂಗ್ಲಿ, ಲೆಗ್​ಸ್ಪಿನ್​​​​, ಮೀಡಿಯಮ್ ಪೇಸ್, ಎದುರಾಳಿಗಳ ನಿದ್ದೆಗೆಡಿಸಿದೆ ನಿಜ. ಆದ್ರೆ ಎಡಗೈ ಸ್ಪಿನ್ನರ್​ಗಳಾದ ಅಕ್ಷರ್ ಪಟೇಲ್ ಮತ್ತು ಕುಲ್ದೀಪ್ ಯಾದವ್​​ರ ವೆರೈಟಿ ಸ್ಪಿನ್​​​​​​, ಎದುರಾಳಿಗಳನ್ನ ಸ್ಟನ್ ಆಗಿಸಿರೋದಂತೂ ಸುಳ್ಳಲ್ಲ. ಟೂರ್ನಿಯಲ್ಲಿ ತಲಾ 5 ವಿಕೆಟ್ ಕಬಳಿಸಿರುವ ಉಭಯ ಸ್ಪಿನ್ನರ್​ಗಳು, 5ರ ಎಕಾನಮಿ ಮೇಂಟೇನ್ ಮಾಡಿದ್ದಾರೆ.

ಎದುರಾಳಿಗಳಿಗೆ ಅನುಭವಿ ಜಡೇಜಾ ಟೆನ್ಶನ್..!
ಅನುಭವಿ ಸ್ಪಿನ್ನರ್​​​​​ ರವೀಂದ್ರ ಜಡೇಜಾ, ಟೀಮ್ ಇಂಡಿಯಾದ ಪ್ರಮುಖ ಸ್ಪಿನ್ ಅಸ್ತ್ರ. ಮಿಡಲ್ ಓವರ್​ಗಳಲ್ಲಿ ಚಕಾ ಚಕಾ ಅಂತ ಬೌಲಿಂಗ್ ಮಾಡೋ ಜಡ್ಡು, ಎದುರಾಳಿ ಬ್ಯಾಟ್ಸ್​ಮನ್​ಗಳಿಗೆ ಸೆಟಲ್ ಆಗೋಕೆ ಬಿಡಲ್ಲ. ಪ್ರತಿ ಬಾಲ್, ಪ್ರತಿ ಓವರ್​​​​​​​​ ಎದುರಾಳಿಗಳಿಗೆ ಟೆನ್ಶನ್ ಕೊಡೋ ಜಡ್ಡು, 4.78ರಂತೆ ರನ್​ ನೀಡಿ, 4 ವಿಕೆಟ್ ಬೇಟೆಯಾಡಿದ್ದಾರೆ.

publive-image

ಲೀಗ್​ನಲ್ಲಿ ನ್ಯೂಜಿಲೆಂಡ್​​ನ 9 ಬ್ಯಾಟರ್ಸ್​ ಸ್ಪಿನ್​ಗೆ ಬಲಿ..!
ನೋ ಡೌಟ್ ನ್ಯೂಜಿಲೆಂಡ್​​​​​ ಒನ್ ಆಫ್ ದಿ ಬೆಸ್ಟ್ ಟೀಮ್ ಅನ್ನೋದು. ವೇಗಿಗಳಿಗೆ ನಿರಾಯಾಸವಾಗಿ ಬ್ಯಾಟ್ ಬೀಸೋ ಕಿವೀಸ್, ಸ್ಪಿನ್ನರ್ಸ್ ಎದುರು ಮಾತ್ರ ಪರದಾಡುತ್ತಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್, ಟೀಮ್ ಇಂಡಿಯಾ ವಿರುದ್ಧ ನಡೆದ ಲೀಗ್ ಪಂದ್ಯ. ಆ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಪಿನ್ನರ್ಸ್, 9 ಕಿವೀಸ್ ಬ್ಯಾಟ್ಸ್​ಮನ್​ಗಳನ್ನ ಔಟ್ ಮಾಡಿದ್ದಾರೆ.

ಇದನ್ನೂ ಓದಿ: INDvsNZ: ಫೈನಲ್​​​ ಫೈಟ್‌ನಲ್ಲಿ ಈ ಮೂವರೇ ವಿಲನ್ಸ್​.. ಟೀಮ್ ಇಂಡಿಯಾಗೆ ಕಾದಿದೆ ಬಿಗ್ ಥ್ರೆಟ್; ಯಾರವರು? 

ಫೈನಲ್ಸ್​ನಲ್ಲಿ ವರ್ಕ್​ಔಟ್ ಆಗುತ್ತಾ ಸ್ಪಿನ್ ಮ್ಯಾಜಿಕ್..?
ರಚ್ಚಿನ್ ರವೀಂದ್ರ ಮತ್ತು ಕೇನ್ ವಿಲಿಯಮ್ಸನ್ ಬಿಟ್ರೆ ನ್ಯೂಜಿಲೆಂಡ್​​ನ ಉಳಿದ ಬ್ಯಾಟರ್ಸ್ ಸ್ಪಿನ್ನರ್ಸ್ ವಿರುದ್ಧ ಹೆಚ್ಚು ಸಕ್ಸಸ್ ಕಂಡಿಲ್ಲ. ಇದನ್ನ ಫೈನಲ್ಸ್​ನಲ್ಲಿ ಟೀಮ್ ಇಂಡಿಯಾ, ಎನ್​ಕ್ಯಾಷ್ ಮಾಡಬೇಕಿದೆ. ಆದ್ರೆ ಸೆಮೀಸ್​​ನಲ್ಲಿ ಸೌತ್ ಆಫ್ರಿಕಾ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿರುವ ಕಿವೀಸ್​ ವಿರುದ್ಧ, ಇದು ಮತ್ತೆ ಸಾಧ್ಯನಾ..?

ಬ್ಯಾಟಿಂಗ್, ಬೌಲಿಂಗ್​ನಲ್ಲಿ ಎಲ್ಲಾ ಬಾಕ್ಸ್​ಗಳನ್ನ ಟಿಕ್ ಮಾಡಿರುವ ಟೀಮ್ ಇಂಡಿಯಾ, ಫೈನಲ್ಸ್​ನಲ್ಲಿ ಕಿವೀಸ್ ಕಿವಿ ಹಿಂಡೋಕೆ ಮತ್ತೆ ಸ್ಪಿನ್​​​​​​​​​​​​​​​​​​​​​​​​​​​​ ಟು ವಿನ್ ಮೊರೆ ಹೋಗಿರೋದು ವರ್ಕ್​ಔಟ್ ಆಗುತ್ತಾ..? ಕಾದು ನೋಡೋಣ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment