ದೇಶಾದ್ಯಂತ ಭಾರೀ ವಿವಾದಗಳಿಗೆ ಕಾರಣವಾದ ನೋಟ್ ಬ್ಯಾನ್!
ದೇಶಾದ್ಯಂತ ನೋಟ್ ಬ್ಯಾನ್ ಬಗ್ಗೆ ಜೋರಾದ ಚರ್ಚೆ
ಮತ್ತೆ 5000, 10000 ರೂಪಾಯಿ ನೋಟುಗಳ ಪ್ರಸ್ತಾಪ
ನವೆಂಬರ್ 8, 2016. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನೋಟ್ ಬ್ಯಾನ್ ಮಾಡಿತ್ತು. 500, 1000 ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿತ್ತು. ಇದು ದೇಶಾದ್ಯಂತ ಭಾರೀ ವಿವಾದಗಳಿಗೆ ಕಾರಣವಾಗಿತ್ತು. ನೋಟುಗಳ ಅಮಾನ್ಯೀಕರಣ ಬೆನ್ನಲ್ಲೇ ಹೊಸದಾಗಿ 2000 ಹಾಗೂ 200 ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿತ್ತು. ಇದೀಗ ಆರ್ಬಿಐ 2000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ನಿಷೇಧಿಸಿದೆ. ಬೆನ್ನಲ್ಲೇ, ದೇಶಾದ್ಯಂತ ಸರಿ-ತಪ್ಪುಗಳ ಬಗ್ಗೆ ಜೋರಾಗಿ ಚರ್ಚೆ ನಡೆಯುತ್ತಿದೆ.
ಬ್ಯಾನ್ ಆಗಿರುವ 2000 ಸಾವಿರ ರೂಪಾಯಿ ನೋಟು, ದೇಶದಲ್ಲಿ ಅತ್ಯಧಿಕ ಬೆಲೆ ಹೊಂದಿರುವ ಕರೆನ್ಸಿ ಆಗಿತ್ತಾ? ಎಂಬ ಪ್ರಶ್ನೆ ಕೆಲವರನ್ನು ಕಾಡ್ತಿದೆ. ಉತ್ತರ ಇಲ್ಲ. ನಿಮಗೆ ಅಶ್ಚರ್ಯ ಆಗಬಹುದು. ಈ ಮೊದಲು ದೇಶದಲ್ಲಿ 5000 ಮತ್ತು 10000 ನೋಟುಗಳು ಮುದ್ರಣಗೊಳ್ಳುತ್ತಿದ್ದವು. ದೇಶದಲ್ಲಿ ಮುದ್ರಣಗೊಂಡ highest-value ಕರೆನ್ಸಿ 2000 ರೂಪಾಯಿ ನೋಟು ಅಲ್ಲ, ಬದಲಾಗಿ 10000 ರೂಪಾಯಿ ನೋಟುಗಳು. 1938ರಲ್ಲಿ ಆರ್ಬಿಐ ಮೊದಲ ಬಾರಿಗೆ 10,000 ನೋಟುಗಳನ್ನು ಪ್ರಿಂಟ್ ಮಾಡಿತ್ತು. ಅದನ್ನು 1946, ಜನವರಿಯಲ್ಲಿ ಬ್ಯಾನ್ ಮಾಡಲಾಯ್ತು. 1954ರಲ್ಲಿ ಮತ್ತೆ ಚಲಾವಣೆಗೆ ತಂದು, 1978ರಲ್ಲಿ ಬ್ಯಾನ್ ಆರ್ಬಿಐ ಬ್ಯಾನ್ ಮಾಡಿತ್ತು.

ಇತಿಹಾಸ ಹೀಗಿರುವಾಗ ಹಿಂದಿನ ಆರ್ಬಿಐ ಗವರ್ನರ್, ರಘುರಾಮ್ ರಾಜನ್, ಮತ್ತೆ 10 ಸಾವಿರ ರೂಪಾಯಿ ನೋಟುಗಳನ್ನು ಚಲಾವಣೆಗೆ ತರುವ ಬಗ್ಗೆ ಮಾತನಾಡಿದ್ದರು. ಆರ್ಬಿಐ ಗವರ್ನರ್ ಆಗಿದ್ದ ಸಂದರ್ಭದಲ್ಲಿ ಮತ್ತೆ 5000 ಮತ್ತು 10000 ರೂಪಾಯಿ ನೋಟುಗಳನ್ನು ಮತ್ತೆ ದೇಶಕ್ಕೆ ಪರಿಚಯಿಸುವ ಐಡಿಯಾವನ್ನು ರಾಜನ್ ನೀಡಿದ್ದರು. ಅಂತೆಯೇ 2014ರಲ್ಲಿ ಪಬ್ಲಿಕ್ ಅಕೌಂಟ್ಸ್ ಕಮಿಟಿಗೆ ಶಿಫಾರಸು ಕೂಡ ಮಾಡಲಾಗಿತ್ತು. ಆಗ ದಿವಂಗತ ಅರುಣ್ ಜೇಟ್ಲಿ ಅವರು ಕೇಂದ್ರದ ಹಣಕಾಸು ಮಂತ್ರಿಯಾಗಿದ್ದರು. 5000 ಮತ್ತು 10000 ನೋಟುಗಳನ್ನು ಮತ್ತೆ ಮುದ್ರಣ ಮಾಡುವ ಶಿಫಾರಸ್ಸನ್ನು ತಳ್ಳಿ ಹಾಕಿದರು. ಮಾತ್ರವಲ್ಲ ನೋಟ್ ಬ್ಯಾನ್ ಬೆನ್ನಲ್ಲೇ 2000 ನೋಟುಗಳ ಮುದ್ರಣಕ್ಕೆ ಅನುಮತಿ ನೀಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ