/newsfirstlive-kannada/media/post_attachments/wp-content/uploads/2025/04/KOHLI-9.jpg)
ಭಾರತ ತಂಡದ ಟಿ20 ಹಾಗೂ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿರುವ ವಿರಾಟ್ ಕೊಹ್ಲಿ ಕೇವಲ ಏಕದಿನ ಪಂದ್ಯಗಳನ್ನು ಮಾತ್ರ ಆಡಲಿದ್ದಾರೆ. ವಿರಾಟ್ ಕೊಹ್ಲಿ ಕ್ರಿಕೆಟ್ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿ ಇಂದು ಅಭಿಮಾನಿಗಳ ಮನದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದ್ದಾರೆ. ಸದ್ಯ ಈ ಬಗ್ಗೆ ಮಾತನಾಡಿದ ಇಶಾಂತ್ ಶರ್ಮಾ, ಕೊಹ್ಲಿ ನಮಗೆ ಯಾವತ್ತಿದ್ದರೂ ಚೀಕುನೇ ಎಂದು ಕರೆದಿದ್ದಾರೆ.
ವಿರಾಟ್ ಕೊಹ್ಲಿ ಜೊತೆಗಿನ ಗೆಳತನ ಕುರಿತು ಭಾರತ ತಂಡದ ಮಾಜಿ ಆಟಗಾರ ಹಾಗೂ ಗುಜರಾತ್ ಟೈಟನ್ಸ್ ತಂಡದ ಬೌಲರ್ ಇಶಾಂತ್ ಮಾತನಾಡಿದ್ದಾರೆ. ವಿರಾಟ್ ಕೊಹ್ಲಿ ಎಲ್ಲರಂತೆ ಸಾಮಾನ್ಯ. ಜನರು ದೊಡ್ಡ ಮಟ್ಟದಲ್ಲಿ ನೋಡುತ್ತಾರೆ. ಆದರೆ ನಾನು ಯಾವಾತ್ತೂ ಆ ಮಟ್ಟದಲ್ಲಿ ಅವರನ್ನು ನೋಡಿಲ್ಲ. ಏಕೆಂದರೆ ಅಂಡರ್-17 ಕ್ರಿಕೆಟ್ನಿಂದ ಜೊತೆಯಲ್ಲಿ ಆಡಿಕೊಂಡು ಬಂದಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಕೊಹ್ಲಿಗಾಗಿ ಅಲ್ಲವೇ ಅಲ್ಲ.. RCB ಫ್ಯಾನ್ಸ್ಗೆ ಕ್ಯಾಪ್ಟನ್ ರಜತ್ ಥ್ಯಾಂಕ್ಸ್ ಹೇಳಿದ್ದು ಯಾಕೆ?
ನಾನು, ವಿರಾಟ್ ಇಬ್ಬರೂ ಸಣ್ಣವರಿದ್ದಾಗಿನಿಂದ ದೋಸ್ತ್ ಇದ್ದೆವು. ಅವಾಗಿನಿಂದಲೂ ರೂಮ್ ಶೇರ್ ಮಾಡಿದ್ದೆವು. ಜೊತೆಯಲ್ಲಿ ಊಟ ಮಾಡುತ್ತಿದ್ದೆ. ಅಂಡರ್-19ನಲ್ಲಿ ನಮ್ಮ ಬಳಿ ಎಷ್ಟು ಹಣವಿದೆ ಎಂದು ಮೊದಲು ಎಣಿಸಿ ಆಮೇಲೆ ಊಟ ಮಾಡುತ್ತಿದ್ದೆವು. ವಿರಾಟ್ ಕೊಹ್ಲಿ ಎಲ್ಲರಿಗೂ ಸ್ಪೆಷಲ್ ಆಗಿ ಕಾಣಿಸಿದರೆ ನನಗೆ ಆಗಲ್ಲ. ಬಾಲ್ಯದಲ್ಲಿ ವಿರಾಟ್ನನ್ನ ಹೇಗೆ ನೋಡಿದ್ದೇ ಹಾಗೇ ಈಗಲೂ ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.
ನಾವಿಬ್ಬರೂ ಎಲ್ಲಿಯಾದರೂ ಸಿಕ್ಕಾಗಿ ಅರೇ ನೀನು ಇಷ್ಟೊಂದು ಟೆಸ್ಟ್ ಮ್ಯಾಚ್ ಆಡಿದ್ದೀಯಾ, ಇಷ್ಟೊಂದು ರನ್ ಗಳಿಸಿದೆ, ನಿನಗೆ ಫ್ಯಾನ್ಸ್ ಹೆಚ್ಚು ಇದಾರೆ ಅಂತ ಇದೆಲ್ಲಾ ಮಾತನಾಡಲ್ಲ. ನಮಗೆ ಯಾವಾತ್ತೂ ವಿರಾಟ್ ಕೊಹ್ಲಿ ಹಾಗೇ ಕಾಣಿಸಿಲ್ಲ. ನಮಗೆ ಯಾವಾತ್ತಿದ್ದರೂ ವಿರಾಟ್ ಚೀಕುನೇ. ಭಾರತ ತಂಡಕ್ಕೆ ಡೆಬ್ಯು ಮಾಡಲು ನನಗೆ ಅವಕಾಶ ಬಂತು. ನನ್ನ ಹೆಸರು ಬಂದಿದ್ದು ನೋಡಿ ವಿರಾಟ್ ಕೊಹ್ಲಿ, ನನಗೆ ಕಾಲಿನಿಂದ ಒದ್ದು, ಹೋಗೋ ನಿನಗೆ ಚಾನ್ಸ್ ಸಿಕ್ಕಿದೆ. ನನಗೆ ಮಲಗೋದೆ ಇನ್ನು ಕೆಲಸ ಅಂತ ಹೇಳಿದ್ದ ಎಂದು ಇಶಾಂತ್ ಶರ್ಮಾ ಬಾಲ್ಯದ ನೆನಪುಗಳನ್ನು ಹೇಳಿಕೊಂಡಿದ್ದಾರೆ.
Ishant Sharma opens up about his bond with Virat Kohli ❤️
A heartwarming journey of two lifelong mates.
pic.twitter.com/zbmxaJF7q2— Cricket Winner (@cricketwinner_)
Ishant Sharma opens up about his bond with Virat Kohli ❤️
A heartwarming journey of two lifelong mates.
pic.twitter.com/zbmxaJF7q2— Cricket Winner (@cricketwinner_) May 18, 2025
">May 18, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ