WCLನಲ್ಲಿ ಸೆಮೀಸ್​ಗೆ ಭಾರತ.. ನಾಳೆ ಪಾಕ್ ವಿರುದ್ಧ ಹೈವೋಲ್ಟೇಜ್ ಮ್ಯಾಚ್! ಆದರೆ..

author-image
Ganesh
WCLನಲ್ಲಿ ಸೆಮೀಸ್​ಗೆ ಭಾರತ.. ನಾಳೆ ಪಾಕ್ ವಿರುದ್ಧ ಹೈವೋಲ್ಟೇಜ್ ಮ್ಯಾಚ್! ಆದರೆ..
Advertisment
  • ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿ
  • ಪಾಕ್ ವಿರುದ್ಧ ಗ್ರೂಪ್ ಹಂತದಲ್ಲಿ ಆಡಲ್ಲ ಎಂದಿದ್ದ ಭಾರತ
  • ವೆಸ್ಟ್​​ ವಿಂಡೀಸ್ ಬಗ್ಗು ಬಡಿದು ಸೆಮೀಸ್​​ಗೆ ಲಗ್ಗೆ

ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL-2025) 15ನೇ ಪಂದ್ಯದಲ್ಲಿ ಇಂಡಿಯಾ ಚಾಂಪಿಯನ್ಸ್ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ಅನ್ನು 5 ವಿಕೆಟ್‌ಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದೆ. ಜುಲೈ 31 ರಂದು ಪಾಕಿಸ್ತಾನ ಚಾಂಪಿಯನ್ಸ್ ತಂಡವನ್ನು ಎದುರಿಸಲಿದೆ. ಆದರೆ  ಭಾರತ ಪಾಕಿಸ್ತಾನದ ವಿರುದ್ಧ ಆಡುತ್ತದೆಯೋ, ಇಲ್ಲವೋ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಈಗಾಗಲೇ ಗ್ರೂಪ್ ಹಂತದಲ್ಲಿ ಪಾಕ್ ವಿರುದ್ಧ ಆಡಲು ನಿರಾಕರಿಸಿತ್ತು. ಮತ್ತೊಂದು ಕಡೆ EaseMyTrip  ಸ್ಪಾನರ್ಸ್​ಶಿಪ್​​ನಿಂದ ಹೊರ ಬಿದ್ದಿದೆ. ಭಯೋತ್ಪಾನೆ ಮತ್ತು ಕ್ರಿಕೆಟ್ ಒಟ್ಟಿಗೆ ಹೋಗಲು ಸಾಧ್ಯವಿಲ್ಲ ಎಂದು ಕಂಪನಿ ಹೇಳಿದೆ.

ಲೀಸೆಸ್ಟರ್​ನ ಗ್ರೇಸ್ ಗ್ರೌಂಡ್ ಮೈದಾನದಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ವೆಸ್ಟ್ ಇಂಡೀಸ್ ಚಾಂಪಿಯನ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 144 ರನ್ ಕಲೆ ಹಾಕಿತು. 145 ರನ್​​ಗಳ ಸುಲಭ ಗುರಿ ಬೆನ್ನತ್ತಿದ ಇಂಡಿಯಾ ಚಾಂಪಿಯನ್ಸ್ 13.2 ಓವರ್‌ಗಳಲ್ಲಿ 148 ರನ್ ಬಾರಿಸಿ ಏಕೈಕ ಗೆಲುವು ದಾಖಲಿಸಿದೆ. ನೆಟ್ ರನ್ ರೇಟ್​ನಲ್ಲಿ ಇಂಗ್ಲೆಂಡ್ ಚಾಂಪಿಯನ್ಸ್ ತಂಡವನ್ನ ಹಿಂದಿಕ್ಕಿ ಸೆಮಿಫೈನಲ್​ಗೆ ಎಂಟ್ರಿ ಕೊಟ್ಟಿದೆ.

ಇದನ್ನೂ ಓದಿ: WCLನಲ್ಲಿ ವಿಂಟೇಜ್ ಎಬಿಡಿ ದರ್ಶನ.. 2 ವಿಸ್ಫೋಟಕ ಶತಕ.. ಹೇಗಿತ್ತು ಖದರ್​​..?

145 ರನ್‌ಗಳ ಗುರಿ ಬೆನ್ನಟ್ಟಿದ ಇಂಡಿಯಾ, ಸ್ಥಿರ ಆರಂಭ ಪಡೆಯಿತು. ಧವನ್ 25 ರನ್‌ ಗಳಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು. ಗುರುಕೀರತ್ ಮಾನ್ ಮತ್ತು ಸುರೇಶ್ ರೈನಾ ಬೇಗ ಔಟಾದರು. ಸ್ಟುವರ್ಟ್ ಬಿನ್ನಿ ಅದ್ಭುತವಾಗಿ ಆಡಿದರು. 21 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಒಳಗೊಂಡ ಅಜೇಯ 50 ರನ್ ಗಳಿಸಿದರು.

ನಾಯಕ ಯುವರಾಜ್ ಸಿಂಗ್ 21 ರನ್​ಗಳ ಕೊಡುಗೆ ನೀಡಿದರು. ಯೂಸುಫ್ ಪಠಾಣ್ 7 ಎಸೆತಗಳಲ್ಲಿ 21 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಪಠಾಣ್ ತಮ್ಮ ಇನ್ನಿಂಗ್ಸ್​ನಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್​ಗಳು ಸೇರಿದ್ದವು. ವಿಂಡೀಸ್ ಪರ ಪೊಲಾರ್ಡ್ 43 ಎಸೆತಗಳಲ್ಲಿ 3 ಬೌಂಡರಿ ಮತ್ತು 8 ಸಿಕ್ಸರ್‌ಗಳನ್ನು ಒಳಗೊಂಡ 74 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ವೆಸ್ಟ್ ಇಂಡೀಸ್ ಪರ, ಡ್ವೇನ್ ಸ್ಮಿತ್ ಮತ್ತು ಡ್ವೇನ್ ಬ್ರಾವೋ ತಲಾ 2 ವಿಕೆಟ್ ಪಡೆದರು.

ಭಾರತ vs ಪಾಕ್ ಸೆಮಿಫೈನಲ್

ಗೆಲುವಿನೊಂದಿಗೆ ಟೀಂ ಇಂಡಿಯಾ ಸೆಮಿಫೈನಲ್‌ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಜುಲೈ 31 ರಂದು ಪಾಕಿಸ್ತಾನ ಚಾಂಪಿಯನ್ಸ್ ಅನ್ನು ಎದುರಿಸಲಿದೆ. ಗುಂಪು ಹಂತದಲ್ಲಿ ಭಾರತ-ಪಾಕ್ ವಿರುದ್ಧ ಆಡಲು ನಿರಾಕರಿಸಿತ್ತು. ಹೈ-ವೋಲ್ಟೇಜ್ ಪಂದ್ಯವನ್ನು ಆಡುವ ಸಾಧ್ಯತೆ ಇದೆ.

ಇದನ್ನೂ ಓದಿ: NISAR ಉಡಾವಣೆಗೆ ಕೌಂಟ್​ಡೌನ್; ಇಸ್ರೋ-ನಾಸಾದ ಈ ಜಂಟಿ ಪ್ರಾಜೆಕ್ಟ್​​ ವಿಶೇಷತೆಗಳು ಏನೇನು..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment