ಜಮ್ಮು ಕಂಪ್ಲೀಟ್‌ ಬ್ಲಾಕ್ ಔಟ್‌; ಮನೆಯಲ್ಲೇ ಇರಿ ಎಂದು ಸಿಎಂ ಒಮರ್ ಅಬ್ದುಲ್ಲಾ ಮನವಿ; ಗಡಿಯಲ್ಲಿ ಆತಂಕ!

author-image
Bheemappa
Updated On
ಜಮ್ಮು ಕಂಪ್ಲೀಟ್‌ ಬ್ಲಾಕ್ ಔಟ್‌; ಮನೆಯಲ್ಲೇ ಇರಿ ಎಂದು ಸಿಎಂ ಒಮರ್ ಅಬ್ದುಲ್ಲಾ ಮನವಿ; ಗಡಿಯಲ್ಲಿ ಆತಂಕ!
Advertisment
  • ಜಮ್ಮುವಿನ ಮೇಲೆ ಮತ್ತೆ ಡ್ರೋಣ್​ ದಾಳಿಗೆ ಯತ್ನಿಸಿರುವ ಪಾಕ್
  • ಜಮ್ಮುವಿನಾದ್ಯಂತ ಬ್ಲಾಕ್ ಔಟ್ ಘೋಷಣೆ, ಎಲ್ಲ ಕಡೆ ಕತ್ತಲು
  • ಜಮ್ಮುವಿನ ಪ್ರತಿಯೊಬ್ಬರು ಕೂಡ ಮನೆ ಬಿಟ್ಟು ಹೊರ ಬರಬೇಡಿ

ಭಾರತ, ಪಾಕಿಸ್ತಾನದ ಸಂಘರ್ಷದಲ್ಲಿ ಜಮ್ಮುವಿನ ಮೇಲೆ ಪಾಕಿಸ್ತಾನ ಮತ್ತೆ ಡ್ರೋಣ್‌ಗಳ ದಾಳಿಗೆ ಯತ್ನಿಸಿದೆ. ಪಾಕಿಸ್ತಾನದ ನಿರಂತರ ದಾಳಿಯಿಂದಾಗಿ ಜಮ್ಮುವಿನಾದ್ಯಂತ ಬ್ಲಾಕ್ ಔಟ್ ಘೋಷಣೆ ಮಾಡಲಾಗಿದೆ. ಜಮ್ಮು ಸಿಟಿ ಸಂಪೂರ್ಣ ಕತ್ತಲಮಯವಾಗಿದೆ.

ಈ ಆತಂಕದ ಸಂದರ್ಭದಲ್ಲಿ ಜಮ್ಮು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಅವರು ಜನರ ಬಳಿ ವಿಶೇಷ ಮನವಿ ಮಾಡಿದ್ದಾರೆ. ಸೋಷಿಯಲ್ ಮೀಡಿಯಾ Xನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು ಮುಂದಿನ ಕೆಲವು ಗಂಟೆಗಳ ಕಾಲ ಮನೆಯಲ್ಲೇ ಇರಿ ಎಂದು ಹೇಳಿದ್ದಾರೆ.

ಇದನ್ನೂ ಓದಿ:ತಾಯಿಗೆ ಅನಾರೋಗ್ಯ, ತಂಗಿ ಮದುವೆಗೆ ಬಂದಿದ್ದ ಯೋಧ ಸೇನೆಗೆ ವಾಪಸ್​.. ಭಾವುಕ ಕ್ಷಣ

publive-image

ಜಮ್ಮು ನಗರದಾದ್ಯಂತ ಸೈರನ್ ಸದ್ದು ಕೇಳಿ ಬರುತ್ತಿದೆ. ಪ್ರತಿಯೊಬ್ಬರಲ್ಲೂ ನಾನು ಒಂದು ಮನವಿ ಮಾಡುತ್ತೇನೆ. ಜಮ್ಮುವಿನ ಪ್ರತಿಯೊಂದು ನಗರದ ನಿವಾಸಿಗಳು ಮನೆಯಲ್ಲೇ ಇರಿ. ಮುಂದಿನ ಕೆಲವು ಗಂಟೆಗಳ ಕಾಲ ಮನೆಯಿಂದ ಹೊರಗೆ ಬರಬೇಡಿ.

ಯಾವುದೇ ವದಂತಿ, ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ. ಅನಧಿಕೃತವಾದ ಯಾವುದೇ ಸುದ್ದಿಗಳನ್ನು ನಂಬಬೇಡಿ ಎಂದು ಜಮ್ಮು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಜನರ ಬಳಿ ಕೇಳಿಕೊಂಡಿದ್ದಾರೆ.


">May 9, 2025

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment