ಇಂದು ಭಾರತಕ್ಕೆ ದೊಡ್ಡ ಅಗ್ನಿ ಪರೀಕ್ಷೆ.. ಪ್ಲಸ್​, ಮೈನಸ್‌ಗಳು ಏನು? ರೋಹಿತ್ ಪಡೆಗೆ ವರದಾನವಾಗುತ್ತಾ ಪಾಕ್​ ಕಳಪೆ ಬೌಲಿಂಗ್​?

author-image
Gopal Kulkarni
Updated On
ಇಂದು ಭಾರತಕ್ಕೆ ದೊಡ್ಡ ಅಗ್ನಿ ಪರೀಕ್ಷೆ.. ಪ್ಲಸ್​, ಮೈನಸ್‌ಗಳು ಏನು? ರೋಹಿತ್ ಪಡೆಗೆ ವರದಾನವಾಗುತ್ತಾ ಪಾಕ್​ ಕಳಪೆ ಬೌಲಿಂಗ್​?
Advertisment
  • ದುಬೈನಲ್ಲಿಂದು ಭಾರತ-ಪಾಕಿಸ್ತಾನ ಮುಖಾಮುಖಿ
  • ಮೊದಲ ಪಂದ್ಯದಲ್ಲೇ ಟೀಮ್ ಇಂಡಿಯಾಕ್ಕೆ ಭರ್ಜರಿ ಜಯ
  • ತೃಪ್ತಿ ತಂದ ಟೀಮ್ ಇಂಡಿಯಾ ಪೇಸ್, ಸ್ಪಿನ್ ಅಟ್ಯಾಕ್..!

ಇಂಡಿಯಾ ವರ್ಸಸ್​ ಪಾಕ್ ಪಂದ್ಯಕ್ಕೆ, ಕೌಂಟ್​ಡೌನ್ ಶುರುವಾಗಿದೆ. ದುಬೈನಲ್ಲಿ ನಡೆಯಲಿರೋ ಈ ಹೈವೋಲ್ಟೇಜ್ ಪಂದ್ಯ ನೋಡೋಕೆ, ಇಡೀ ವಿಶ್ವವೇ ಕಾದು ಕುಳಿತಿದೆ. ಇದು ಕೇವಲ ಬದ್ಧವೈರಿಗಳ ಪಂದ್ಯವಲ್ಲ. ಎರಡು ದೇಶಗಳ ಪ್ರತಿಷ್ಟೆಯ ಕದನ. ಜಿದ್ದಾಜಿದ್ದಿ, ರಣರೋಚಕ ಕಾಳಗ ಗೆಲ್ಲೋಕೆ ಟೀಮ್ ಇಂಡಿಯಾ ಪ್ಲಾನ್ ಏನು? ಎದುರಾಳಿ ಪಾಕ್ ರಣತಂತ್ರವೇನು?

ಇದನ್ನೂ ಓದಿ:INDvsPAK: ಭಾರತದ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯ; ಪಾಕಿಸ್ತಾನಕ್ಕೆ ಡಬಲ್ ಟೆನ್ಷನ್!

ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಮ್​ಗೆ ಇಂದು, ಜನಸಾಗರವೇ ಹರಿದುಬರಲಿದೆ. ಯಾಕಂದ್ರೆ ಅರಬ್ಬರ ನಾಡಲ್ಲಿ, ಬದ್ಧವೈರಿಗಳು ವಿಜಯಕ್ಕಾಗಿ ವೀರರಂತೆ ಹೋರಾಡಲಿದ್ದಾರೆ. ರನ್​ಭೂಮಿಯಲ್ಲಿ ರಣರೋಚಕ ದೃಶ್ಯಗಳನ್ನ ನೋಡಲು, ಇಡೇ ವಿಶ್ವವೇ ಕಾಯುತ್ತಿದೆ.

publive-image

ಮೊದಲ ಪಂದ್ಯದಲ್ಲೇ ಟೀಮ್ ಇಂಡಿಯಾಕ್ಕೆ ಭರ್ಜರಿ ಗೆಲುವು

ಟೂರ್ನಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ, ಬಾಂಗ್ಲಾ ಟೈಗರ್ಸ್​ ಬೇಟೆಯಾಡಿದೆ. ಹುಲಿಗಳ ಘರ್ಜನೆ ನಿಲ್ಲಿಸಿದ ರೋಹಿತ್ ಸೈನ್ಯ, ದುಬೈನಲ್ಲಿ ವಿಜಯೋತ್ಸವ ಆಚರಿಸಿದೆ. ಆ ಮೂಲಕ ಶತ್ರು ಪಾಕ್​​ ಸಂಹಾರಕ್ಕೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.

publive-image

ಆರಂಭಿಕರು ಕ್ಲಿಕ್..! ಮಿಡಲ್ ಆರ್ಡರ್​​ಗೆ ಅಗ್ನಿ ಪರೀಕ್ಷೆ..!
ಪ್ರಿನ್ಸ್ ಶುಭ್ಮನ್ ಗಿಲ್, ಬಾಂಗ್ಲಾ ವಿರುದ್ಧ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್​ನಲ್ಲಿ ಭರವಸೆ ಮೂಡಿಸಿದ್ದಾರೆ. ಕೆ.ಎಲ್.ರಾಹುಲ್ ಮಿಸ್ಟರ್ ಡಿಪೆಂಡಬಲ್ ಅನ್ನೋದನ್ನ ತೋರಿಸಿದ್ದಾರೆ. ಆದ್ರೆ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್​,​​​​​​​​​​​​​​ ತಾಳ್ಮೆ ಮತ್ತು ಜವಾಬ್ದಾರಿಯಿಂದ ಬ್ಯಾಟಿಂಗ್ ಮಾಡಬೇಕು. ಇಂದು ಟೀಮ್ ಇಂಡಿಯಾದ ಟಾಪ್ ಸೆವೆನ್ ಬ್ಯಾಟರ್ಸ್​, ಪಾಕ್ ಬೌಲರ್​​​​ಗಳ ಪರೀಕ್ಷೆಗೆ ರೆಡಿಯಾಗಬೇಕು.!

publive-image

ಪಾಕ್ ವಿರುದ್ಧ ಆಡ್ತಾರಾ ರಿಷಭ್ ಪಂತ್, ಆರ್ಷ್​​ದೀಪ್ ಸಿಂಗ್..?
ಪಾಕಿಸ್ತಾನ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್​ಗೆ, ಸವಾಲೊಂದು ಎದುರಾಗಿದೆ. ಅದೇ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​​ ರಿಷಭ್ ಪಂತ್ ಮತ್ತು ಎಡಗೈ ವೇಗಿ ಆರ್ಷ್​​ದೀಪ್ ಸಿಂಗ್​ರನ್ನ ಆಡಿಸಬೇಕಾ ಬೇಡ್ವಾ ಅನ್ನೋದು. ಕೆ.ಎಲ್.ರಾಹುಲ್ ವಿಕೆಟ್ ಹಿಂದೆ ಮತ್ತು ಬ್ಯಾಟಿಂಗ್​ನಲ್ಲಿ ಮಿಂಚಿದ್ದಾರೆ. ಹರ್ಷಿತ್ ರಾಣಾ 3 ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ. ಹೀಗಿರುವಾಗ ರೋಹಿತ್ ಶರ್ಮಾ ತಂಡದಲ್ಲಿ ಬದಲಾವಣೆ ಮಾಡ್ತಾರಾ.?

ಇದನ್ನೂ ಓದಿ:ಭಾರತ, ಪಾಕ್ ಹೈವೋಲ್ಟೇಜ್‌ ಪಂದ್ಯಕ್ಕೆ ಅಂತಿಮ ಕಸರತ್ತು.. ರೋಹಿತ್​, ವಿರಾಟ್​ ಕೊಹ್ಲಿ ಮೇಲೆ ತೀವ್ರ ಒತ್ತಡ!

ಜಸ್ಪ್ರೀತ್ ಬೂಮ್ರಾ ಇಲ್ಲದ ಪೇಸ್ ಬೌಲಿಂಗ್ ಅಟ್ಯಾಕ್, ವೀಕ್ ಆಗಲಿದೆ ಅಂತ ಕ್ರಿಕೆಟ್ ವಿಶ್ಲೇಷಕರು ಭವಿಷ್ಯ ನುಡಿದಿದ್ರು. ಆದ್ರೆ ಅನುಭವಿ ವೇಗಿ ಮೊಹಮ್ಮದ್ ಶಮಿ, ಅದನ್ನ ಸುಳ್ಳಾಗಿಸಿದ್ದಾರೆ. ಶಮಿ ಜೊತೆಗೂಡಿದ ಹರ್ಷಿತ್ ರಾಣಾ, ಬಾಂಗ್ಲಾ ವಿರುದ್ಧ ಸೂಪರ್ ಸ್ಪೆಲ್ ಹಾಕಿದ್ದಾರೆ. ಆದ್ರೆ, ಪೇಸ್ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ, ವಿಕೆಟ್​​ಗಾಗಿ ಹುಡುಕಾಟ ನಡೆಸ್ತಿದ್ದಾರೆ. ಪಾಂಡ್ಯ ಬೌಲಿಂಗ್ ಫಾರ್ಮ್​​, ಕ್ಯಾಪ್ಟನ್-ಕೋಚ್​​ಗೆ ಸ್ವಲ್ಪ ಚಿಂತೆ ಆದ್ರೆ, ಸ್ಪಿನ್ನರ್ಸ್​ ಆ ಚಿಂತೆಯನ್ನ ದೂರ ಮಾಡಿದ್ದಾರೆ.

publive-image

ಪಾಕ್ ವೇಗಿಗಳು ಪರದಾಟ! ನಾಯಕನಿಗೆ ಸಂಕಟ.

ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಅನುಭವಿಸಿರುವ ಪಾಕಿಸ್ತಾನ, ಸದ್ಯ ಒತ್ತಡಕ್ಕೆ ಸಿಲುಕಿದೆ. ವೇಗಿಗಳಾದ ಶಾಹೀನ್ ಶಾ ಅಫ್ರೀದಿ,​ ನಸೀಮ್ ಶಾ, ಹ್ಯಾರಿಸ್ ರೌಫ್ ಕಿವೀಸ್​ ವಿರುದ್ಧ ದುಬಾರಿ ಬೌಲಿಂಗ್ ಸ್ಪೆಲ್ ಮಾಡಿದ್ದು, ತಂಡಕ್ಕೆ ಭಾರೀ ಹಿನ್ನಡೆ ಉಂಟಾಗಿದೆ. ಇದೇ ಕ್ಯಾಪ್ಟನ್ ರಿಝ್ವಾನ್​​​ ಟೆನ್ಶನ್​​ಗೂ ಕಾರಣವಾಗಿದೆ.

publive-image

ಟೀಮ್ ಇಂಡಿಯಾಕ್ಕೆ ಬಾಬರ್, ರಿಜ್ವಾನ್ ಮೇಲೆ ಕಣ್ಣು..!
ಪಾಕ್ ಬೌಲಿಂಗ್ ಅಟ್ಯಾಕ್​​​​ ಸಮಸ್ಯೆ ಒಂದೆಡೆಯಾದ್ರೆ, ಮತ್ತೊಂದೆಡೆ ಪಾಕ್ ಬ್ಯಾಟ್ಸ್​ಮನ್​​ಗಳ ಫಾರ್ಮ್​​ ಸಹ, ಮ್ಯಾನೇಜ್ಮೆಂಟ್​​ಗೆ ತಲೆಬಿಸಿ ಹೆಚ್ಚಿಸಿದೆ. ನ್ಯೂಜಿಲೆಂಡ್ ವಿರುದ್ಧ ಬಾಬರ್ ಅಝಂ ಅರ್ಧಶತಕ ಸಿಡಿಸಿದ್ರು. ಆದ್ರೆ ಬಾಬರ್ ಸ್ಲೋ ಇನ್ನಿಂಗ್ಸ್​ನಿಂದ ತಂಡಕ್ಕೆ ಲಾಭಕ್ಕಿಂತ ನಷ್ಟವೇ ಆಯ್ತು. ಸೌದ್ ಶಖೀಲ್, ಮೊಹಮ್ಮದ್ ರಿಝ್ವಾನ್, ಸಲ್ಮಾನ್ ಆಘಾ ಮತ್ತು ಖುಷ್​ದಿಲ್ ಶಾ, ಟೀಮ್ ಇಂಡಿಯಾ ವಿರುದ್ಧ ಸಿಡಿದೇಳುವ ಲೆಕ್ಕಾಚಾರದಲ್ಲಿದ್ದಾರೆ.
ವೈಟ್​ಬಾಲ್ ಕ್ರಿಕೆಟ್​​ನಲ್ಲಿ ಸಾಲಿಡ್ ಫಾರ್ಮ್​ನಲ್ಲಿರುವ ಟೀಮ್ ಇಂಡಿಯಾ, ಇಂದಿನ ಪಂದ್ಯ ಗೆಲ್ಲೋ ಹಾಟ್ ಫೇವರಿಟ್ಸ್​​. ಆದ್ರೆ ನ್ಯೂಜಿಲೆಂಡ್ ವಿರುದ್ಧ ಸೋತು ಕಮ್​ಬ್ಯಾಕ್​ ಮಾಡಲು ರೆಡಿಯಾಗಿರುವ ಪಾಕ್, ರೋಹಿತ್ ಪಡೆಗೆ ಟಫ್ ಫೈಟ್​​​ ನೀಡಲು ಕಾತರದಿಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment