ಭಾರತೀಯ ವಿಮಾನಗಳ ಹಾರಾಟಕ್ಕೆ ಪಾಕ್ ಅಡ್ಡಗಾಲು.. ಈಗ ಯಾವ ವಾಯುನೆಲೆ ಬಳಸಲಾಗುತ್ತಿದೆ ಗೊತ್ತಾ..?

author-image
Ganesh
Updated On
ಮುಂದಿನ 24 -36 ಗಂಟೆಯಲ್ಲಿ ಭಾರತ ಅಟ್ಯಾಕ್ -ಹೆದರಿ ಬೊಬ್ಬೆ ಹೊಡೆದುಕೊಂಡ ಪಾಕ್ ಸಚಿವ
Advertisment
  • ಪಹಲ್ಗಾಮ್ ದಾಳಿ ಬೆನ್ನಲ್ಲೇ 2 ದೇಶಗಳ ಮಧ್ಯೆ ಭಿಕ್ಕಟ್ಟು
  • ಭಾರತೀಯ ವಿಮಾನಗಳಿಗೆ ಪಾಕ್ ವಾಯು ಪ್ರದೇಶ ನಿರ್ಭಂಧ
  • ಪಾಕ್​​ನಿಂದಾಗಿ ವಿಮಾನ ಪ್ರಯಾಣಿಕರ ಜೇಬಿಗೆ ಕತ್ತರಿ

ಭಾರತ ಮತ್ತು ಪಾಕ್ ನಡುವೆ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಭಾರತ ದಿಟ್ಟ ಕ್ರಮ ತೆಗೆದುಕೊಂಡ ಬೆನ್ನಲ್ಲೇ ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಪರಿಣಾಮ ದೆಹಲಿ ವಿಮಾನ ನಿಲ್ದಾಣದಿಂದ ವಿದೇಶಕ್ಕೆ ಹಾರುವ ಹೆಚ್ಚಿನ ವಿಮಾನಗಳು ಇತರ ವಾಯು ಮಾರ್ಗ ಬಳಸಬೇಕಾಗಿದೆ.

ಭಾರತ ಸರ್ಕಾರ ಪಾಕ್ ವಿರುದ್ಧ ಐದು ಪ್ರಮುಖ ಕ್ರಮಗಳನ್ನು ತೆಗೆದುಕೊಂಡಿದೆ. ಅವುಗಳಲ್ಲಿ ವೀಸಾ ರದ್ದುಗೊಳಿಸುವುದು ಮತ್ತು ಸಿಂಧೂ ಜಲ ಒಪ್ಪಂದ ಸ್ಥಗಿತಗೊಳಿಸುವುದೂ ಸೇರಿವೆ. ಇದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದೆ.

ಇದನ್ನೂ ಓದಿ: NIAಗೆ ಸಖತ್ ಕ್ಲೂ ಕೊಟ್ಟ ಅದೊಂದು ವಿಡಿಯೋ, ಪಹಲ್ಗಾಮ್ ದಾಳಿ ತನಿಖೆಗೆ ಬಿಗ್​ ಟ್ವಿಸ್ಟ್..!

ಈ ನಿರ್ಬಂಧ ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳಿಗೆ ಅನ್ವಯಿಸಲ್ಲ. ಅಂದರೆ ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಪಾಕಿಸ್ತಾನದ ವಾಯುಪ್ರದೇಶ ಬಳಸಿಕೊಂಡು ಭಾರತದಲ್ಲಿಳಿಯಬಹುದು. ಪಾಕಿಸ್ತಾನದ ಈ ನಿರ್ಧಾರ ಭಾರತೀಯ ವಿಮಾನಯಾನ ಕಂಪನಿಗಳ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಪಾಕ್​ನ ಈ ನಿಷೇಧವು ದೆಹಲಿ ವಿಮಾನ ನಿಲ್ದಾಣದಿಂದ ಹೊರಡುವ ವಿಮಾನಗಳ ಮೇಲೆ ಅತಿ ದೊಡ್ಡ ಪರಿಣಾಮ ಬೀರಲಿದೆ.

ಇದನ್ನೂ ಓದಿ: ಪಾಕ್​ನ ಮತ್ತೊಂದು ಕರಾಳ ಮುಖ ಬಯಲು.. ಉಗ್ರರ ರಕ್ಷಣೆಗಾಗಿ ಮತ್ತಷ್ಟು ಕೆಳಮಟ್ಟಕ್ಕೆ ಇಳಿದ ಪಾಪಿಸ್ತಾನ್..!

ಪಾಕ್ ತನ್ನ ವಾಯುಪ್ರದೇಶ ಮುಚ್ಚಿರೋದ್ರಿಂದ ದೆಹಲಿ ವಿಮಾನ ನಿಲ್ದಾಣದಿಂದ ಹಾರುವ ವಿಮಾನಗಳು ಇತರ ವಾಯು ಮಾರ್ಗಗಳನ್ನು ಬಳಸಬೇಕಾಗುತ್ತದೆ. ಹೆಚ್ಚಿನ ವಿಮಾನಗಳು ಅರೇಬಿಯನ್ ಸಮುದ್ರ, ಇರಾನ್ ಮತ್ತು ಅಜೆರ್ಬೈಜಾನ್‌ನ (Azerbaijan) ವಾಯುಪ್ರದೇಶವನ್ನು ಬಳಸುತ್ತಿವೆ.

ಪಾಕ್​ ವಾಯುಪ್ರದೇಶ ಮುಚ್ಚುವುದರಿಂದ ಪ್ರಯಾಣದ ಸಮಯ ಹೆಚ್ಚಾಗಲಿದೆ. ವಿಮಾನಯಾನ ಸಂಸ್ಥೆಗಳ ವೆಚ್ಚವೂ ಗಣನೀಯವಾಗಿ ಹೆಚ್ಚಾಗಿದೆ. ದೀರ್ಘ ಮಾರ್ಗಗಳ ಬಳಕೆಯಿಂದಾಗಿ ವಿಮಾನಗಳ ಇಂಧನ ಬಳಕೆ ಹೆಚ್ಚಾಗಿದೆ. ಮಾಹಿತಿ ಪ್ರಕಾರ, ವಿಮಾನಯಾನ ಸಂಸ್ಥೆಯ ನಿರ್ವಹಣಾ ವೆಚ್ಚದ ಸುಮಾರು ಶೇಕಡಾ 30 ರಷ್ಟು ಇಂಧನಕ್ಕಾಗಿ ಖರ್ಚು ಮಾಡಲಾಗುತ್ತಿದೆ. ಇದು ಪ್ರಯಾಣಿಕರ ಜೇಬಿನ ಮೇಲೂ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: ಕಣ್ಮುಂದೆಯೇ ನಡೀತು ಭೀಕರ ದಾಳಿ.. ಜಿಪ್‌ಲೈನ್‌ನಲ್ಲಿ ಕೂತಿದ್ದ ಪ್ರತ್ಯಕ್ಷದರ್ಶಿ ರಿಷಿ ಭಟ್‌ ಏನಂದ್ರು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment