ಮುಂದಿನ 24 -36 ಗಂಟೆಯಲ್ಲಿ ಭಾರತ ಅಟ್ಯಾಕ್ -ಹೆದರಿ ಬೊಬ್ಬೆ ಹೊಡೆದುಕೊಂಡ ಪಾಕ್ ಸಚಿವ

author-image
Veena Gangani
Updated On
ಮುಂದಿನ 24 -36 ಗಂಟೆಯಲ್ಲಿ ಭಾರತ ಅಟ್ಯಾಕ್ -ಹೆದರಿ ಬೊಬ್ಬೆ ಹೊಡೆದುಕೊಂಡ ಪಾಕ್ ಸಚಿವ
Advertisment
  • ಸೇನಾ ಕಾರ್ಯಾಚರಣೆಗೆ ಸೇನಾಧಿಕಾರಿಗಳ ಸಕಲ‌ ಸಿದ್ಧತೆ
  • ಪಾಪಿ ಪಾಕಿಸ್ತಾನದ ವಿರುದ್ಧ ಸಮರಕ್ಕೆ ಸಜ್ಜಾಗ್ತಿದೆ ಭಾರತ
  • ಯಾವುದೇ ಸಮಯದಲ್ಲೂ ಪಾಕ್ ಮೇಲೆ ದಾಳಿ ಸಾಧ್ಯತೆ

ಜಮ್ಮು ಕಾಶ್ಮೀರದ ಪಹಲ್ಗಾಮ್​ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 26 ಮಂದಿ ಜೀವ ಕಳೆದುಕೊಂಡಿದ್ದರು. ಈ ದಾಳಿ ಬೆನ್ನಲ್ಲೇ ಭಾರತದ ಮಿಲಿಟರಿ ಯಾವುದೇ ಕ್ಷಣದಲ್ಲಾದರೂ ಪಾಕ್ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಹೀಗಾಗಿ ಭಾರತದ ಪ್ರಧಾನಿಯ ಈ ನಿರ್ಧಾರ ಕೇಳಿ ಪಾಕ್​​ಗೆ ನಡುಕ ಶುರುವಾಗಿದೆ.

ಇದನ್ನೂ ಓದಿ:ಕೋಲ್ಕತ್ತ ಹೋಟೆಲ್​​ನಲ್ಲಿ ಭೀಕರ ಬೆಂಕಿ ಅವಘಡ.. 14 ಮಂದಿ ಸಜೀವ ದಹನ

ರಾತ್ರಿಯೆಲ್ಲಾ ನಿದ್ದೆ ಮಾಡದ ಪಾಕ್​ ಸಚಿವರು ಏಕಾಏಕಿ ಮಧ್ಯರಾತ್ರಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಭಾರತವು ಮುಂದಿನ 24 ರಿಂದ 36 ಗಂಟೆಗಳಲ್ಲಿ ತನ್ನ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳಲು ಯೋಜಿಸುತ್ತಿದೆ. ಇದು ಭಾರತವು ಮುಂದಿನ ಮಿಲಿಟರಿ ಕ್ರಮಕ್ಕೆ ನೆಪವಾಗಿ ಬಳಸಲು ಮುಂದಾಗಿದೆ ಎಂದು ಪಾಕಿಸ್ತಾನದ ಮಾಹಿತಿ ಸಚಿವ ಅತ್ತೌಲ್ಲಾ ತರಾರ್ ವಿಡಿಯೋ ಹರಿಬಿಟ್ಟಿದ್ದಾರೆ.

publive-image

ಹೌದು, ಭಾರತದ ಮಿಲಿಟರಿ ಯಾವುದೇ ಕ್ಷಣದಲ್ಲಾದರೂ, ಯಾವುದೇ ರೀತಿಯ ಪ್ರತಿಕ್ರಿಯೆ ನಿರ್ಧರಿಸಲು ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಕಾರ್ಯಾಚರಣೆ ಸ್ವಾತಂತ್ರ್ಯವಿದೆ ಎಂದು ಹೇಳಿದ್ದಾರೆ. ಅಲ್ಲದೇ ಭಾರತ ಮುಂದಿನ 24- 36 ಗಂಟೆಯಲ್ಲಿ ಮಿಲಿಟರಿ ಆಪರೇಷನ್ ಮಾಡಲು ತೀರ್ಮಾನಿಸಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಪಾಕಿಸ್ತಾನದ ಸಚಿವ ಅತ್ತೌಲ್ಲಾ ತರಾರ್ ಹೆದರಿಕೊಂಡು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

publive-image

ಪಾಕಿಸ್ತಾನ ಸಚಿವ ಹೇಳಿದ್ದೇನು?

ಭಾರತ ಮುಂದಿನ 24- 36 ಗಂಟೆಯಲ್ಲಿ ಮಿಲಿಟರಿ ಆಪರೇಷನ್ ಮಾಡಲು ತೀರ್ಮಾನಿಸಿದೆ. ನಮಗೆ ನಮ್ಮ ಗುಪ್ತಚರ ಇಲಾಖೆಯಿಂದ ಮಾಹಿತಿ ಬಂದಿದೆ. ಪೆಹಲ್ಗಾಮ್ ದಾಳಿಯ ಬಗ್ಗೆ ಮುಕ್ತವಾದ ಸ್ವತಂತ್ರ ಸಂಸ್ಥೆ ವಿಚಾರಣೆ ನಡೆಸಲಿ. ಪಾಕಿಸ್ತಾನ ಸಹ ಉಗ್ರರ ಚಟುವಟಿಕೆಯಿಂದ ತೊಂದರೆಗೀಡಾಗಿದೆ. ಈ ಹಿನ್ನಲೆ ಭಾರತ ಸುಖಾಸುಮ್ಮನೆ ಆರೋಪ ಮಾಡೊದು ಬೇಡ. ಭಾರತ ಯಾವುದೇ ರೀತಿಯ ದಾಳಿ ನಡೆಸಿದ್ರು ಪಾಕ್ ಅದಕ್ಕೆ ಪ್ರತ್ಯುತ್ತರ ನೀಡಲಿದೆ. ಮುಂದಿನ ಎಲ್ಲಾ ಘಟನೆಗೆ ಭಾರತವೆ ಹೊಣೆಯಾಗಲಿದೆ. ಪಾಕಿಸ್ತಾನವು ಉಗ್ರವಾದಕ್ಕೆ ಬಲಿಯಾಗಿದೆ. ವಿಶ್ವದ ಯಾವುದೇ ಭಾಗದಲ್ಲಿ ಉಗ್ರವಾದ ನಡೆದರು ಪಾಕ್ ಇದನ್ನ ವಿರೋಧಿಸುತ್ತೆ. ಉಲ್ಬಣಗೊಳ್ಳುವ ಸುರುಳಿ ಮತ್ತು ಅದರ ನಂತರದ ಪರಿಣಾಮಗಳ ಜವಾಬ್ದಾರಿ ಭಾರತದ ಮೇಲಿರುತ್ತದೆ. ಯಾವುದೇ ಬೆಲೆ ತೆತ್ತಾದರೂ ಪಾಕಿಸ್ತಾನದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸುವ ತನ್ನ ಸಂಕಲ್ಪವನ್ನು ರಾಷ್ಟ್ರವು ಪುನರುಚ್ಚರಿಸುತ್ತದೆ ಎಂದ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment