/newsfirstlive-kannada/media/post_attachments/wp-content/uploads/2025/05/Pakistan-drone-attack-india.jpg)
ನಿನ್ನೆಯ ದಿನ ಭಾರತ ಮತ್ತು ಪಾಕಿಸ್ತಾನ ಸೇನೆ ಮಧ್ಯೆ ದೊಡ್ಡ ಮಟ್ಟದಲ್ಲಿ ಘರ್ಷಣೆ ಆಗಿದೆ. ಭಾರತೀಯ ನಾಗರಿಕರ ಮತ್ತು ನಮ್ಮ ಸೇನಾ ನೆಲೆಯನ್ನು ಟಾರ್ಗೆಟ್ ಮಾಡುತ್ತಿದ್ದ ಪಾಕಿಸ್ತಾನಿ ಯುದ್ಧ ವಿಮಾನವನ್ನು ಹೊಡೆದುರುಳಿಸಲಾಗಿದೆ.
ಆಪರೇಷನ್ ಸಿಂಧೂರ ಪ್ರತಿಯಾಗಿ ಪಾಕಿಸ್ತಾನ ಭಾರತದ ನಾಗರಿಕರನ್ನು ಗರಿಯಾಗಿಸಿಕೊಂಡು ದಾಳಿ ನಡೆಸಿತ್ತು. ಪಾಕ್​ನ ಈ ಕೃತ್ಯಕ್ಕೆ ಪೂಂಚ್​​ನಲ್ಲಿ ಭಾರತದ 15 ನಾಗರಿಕರು ಜೀವ ಕಳೆದುಕೊಂಡಿದ್ದರು. ಆ ಮೂಲಕ ಪಾಕಿಸ್ತಾನ ಭಾರತವನ್ನು ಕೆರಳಿಸಿ, ಯುದ್ಧಕ್ಕೆ ರಣವಿಳ್ಯವನ್ನು ನೀಡಿತು.
ಇದನ್ನೂ ಓದಿ: ಲಾಹೋರ್, ಪೇಶಾವರದಿಂದ ಕರಾಚಿವರೆಗೆ.. ಮತ್ತೆ ಪಾಕಿಸ್ತಾನ ಗಿರಿಗಿಟ್ಲೆ.. ರಾತ್ರಿ ಏನೆಲ್ಲ ಆಯ್ತು..?
ಪಾಕ್​ನ ಕೃತ್ಯಕ್ಕೆ ಕೆರಳಿದ ಭಾರತ, ಪಾಕಿಸ್ತಾನದ ಮೇಲೆ ನಿನ್ನೆ ಬೆಳಗ್ಗೆ ಮತ್ತು ಮಧ್ಯಾಹ್ನ ಲಾಹೋರ್, ಕರಾಚಿ, ಇಸ್ಲಾಮಾಬಾದ್​​ನಲ್ಲಿ ಡ್ರೋಣ್ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಭಾರತದ ಮೇಲೆ ಮಿಸೈಲ್​​ಗಳ ಅಟ್ಯಾಕ್​ಗೆ ಮುಂದಾಗಿತ್ತು. ಆದರೆ ಪಾಕ್​ನ ಕ್ಷಿಪಣಿಗಳು, ಡ್ರೋಣ್​ಗಳು, ಯುದ್ಧ ವಿಮಾನಗಳು ದಾಳಿ ನಡೆಸದಂತೆ ಭಾರತದ ಏರ್​ ಡಿಫೆನ್ಸ್ ಸಿಸ್ಟಮ್​ ತಡೆದಿವೆ. ಆ ಮೂಲಕ ಪಾಕಿಸ್ತಾನ ತುಂಬಾನೇ ನಷ್ಟ ಅನುಭವಿಸಿತು.
ಪಾಕಿಸ್ತಾನಕ್ಕೆ ಏನೆಲ್ಲ ನಷ್ಟ..?
- ಪಾಕಿಸ್ತಾನದ 16 ನಗರಗಳ ಮೇಲೆ ದಾಳಿ
- 1 ಎಫ್​-16 ಯುದ್ಧ ವಿಮಾನ ಉಡೀಸ್
- 2 JF 17 ಯುದ್ಧ ವಿಮಾನ ಉಡೀಸ್
- ಐದು ಏರ್​ ಡಿಫೆನ್ಸ್ ಸಿಸ್ಟಮ್​​​ಗಳು ಧ್ವಂಸ
- 50 ಮಿಸೈಲ್​​ಗಳು ಫಿನಿಶ್
- 60 ಡ್ರೋಣ್​ಗಳು ಢಮಾರ್
- ಸರ್ವೈಲೆನ್ಸ್​ ವಿಮಾನ ಪತನ
- ಏರ್​ಬೋರ್ನ್​ ವಾರ್ನಿಂಗ್ ಕಂಟ್ರೋಲ್ ಸಿಸ್ಟಮ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us