newsfirstkannada.com

ವಾಹನ ಸವಾರರಿಗೆ ಸಿಹಿ ಸುದ್ದಿ; ಪೆಟ್ರೋಲ್​, ಡೀಸೆಲ್ ಬೆಲೆ 2 ರೂಪಾಯಿ ಇಳಿಕೆ; ಇಂದಿನಿಂದ ಅನ್ವಯ

Share :

Published March 15, 2024 at 7:35am

    ಪೆಟ್ರೋಲ್, ಡಿಸೇಲ್ ದರ ಇಳಿಕೆ ಮಾಡಿದ ಮೋದಿ ಸರ್ಕಾರ

    ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ವಾಹನ ಸವಾರರಿಗೆ ಗುಡ್​ನ್ಯೂಸ್​​

    ಇಂದು ಬೆಳಗ್ಗೆಯಿಂದಲೇ ಪೆಟ್ರೋಲ್​, ಡೀಸೆಲ್​ ಪರಿಷ್ಕೃತ ದರ ಜಾರಿಯಾಗಲಿದೆ

2024ರ ಲೋಕಸಭೆ ಚುನಾವಣೆ ಘೋಷಣೆಗೆ ದಿನಗಣನೆ ಶುರುವಾಗಿದೆ. ಈ ಹೊತ್ತಲ್ಲೇ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಗುಡ್​ ನ್ಯೂಸ್​ ಕೊಟ್ಟಿದೆ. ಪೆಟ್ರೋಲ್, ಡಿಸೇಲ್ ದರ ಪ್ರತಿ ಲೀಟರ್​ಗೆ 2 ರೂ ಕಡಿಮೆ ಮಾಡಿದೆ.

ತೈಲ ದರ ಇಳಿಕೆಗೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇಂದು ಬೆಳಗ್ಗೆಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ. ಚುನಾವಣೆ ಸಮೀಸ್ತಿದ್ದಂತೆ ಕೇಂದ್ರ ಸರ್ಕಾರ ತೈಲ ದರ ಇಳಿಕೆ ಮಾಡಿರೋದು ಚರ್ಚೆಗೆ ಗ್ರಾಸವಾಗಿದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಬೆಲೆ ಇಳಿಕೆಯ ಬಗ್ಗೆ ಟ್ವೀಟ್​ ಮಾಡಿದ್ದು, ‘ತೈಲ ಮಾರುಕಟ್ಟೆ ದೇಶದಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯನ್ನು ಪರಿಷ್ಕರಿಸುವುದಾಗಿ ತಿಳಿಸಿವೆ. ನೂತನ ಬೆಲೆ ಮಾರ್ಚ್​ 15, 2024 ಬೆಳಗ್ಗೆ 6 ಗಂಟೆಯಿಂದ ಜಾರಿಗೆ ಬರುತ್ತದೆ. ಬೆಲೆ ಕಡಿತವು ಗ್ರಾಹಕರ ವೆಚ್ಚವನ್ನು ಭರಿಸುತ್ತದೆ. ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ. ಡಿಸೇಲ್ ಮತ್ತು ಪೆಟ್ರೋಲ್​​ನಲ್ಲಿ ಚಲಿಸುವ 58 ಲಕ್ಷ ಸರಕು ವಾಹನಗಳು, 6 ಕೋಟಿ ಕಾರುಗಳು, 27 ಕೋಟಿ ದ್ವೀಚಕ್ರ ವಾಹನಗಳಿವೆ’ ಎಂದು ಹೇಳಿದೆ.

ತೈಲ ಬೆಲೆ ಇಳಿಕೆ ಕುಡಿತು ಕೇಂದ್ರ ಸಚಿವ ಹರ್ಷದೀಪ್​ ಸಿಂಗ್ ಪುರಿ ಟ್ವೀಟ್​ ಮಾಡಿ, ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ. ’’ಕೋಟ್ಯಾಂತರ ಭಾರತೀಯ ಕುಟುಂಬದ ಕಲ್ಯಾಣ ಮತ್ತು ಅನುಕೂಲತೆ ಯಾವಾಗಲೂ ಅವರ ಗುರಿ’’ ಎಂದು ಹೇಳಿದ್ದಾರೆ.

ಜಗತ್ತು ಕಷ್ಟದ ಸಮಯದಲ್ಲಿ ಸಾಗುತ್ತಿದೆ. ಹೀಗಿರುವಾಗ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಪೆಟ್ರೋಲ್​ ಬೆಲೆ 50-70 ಪ್ರತಿಶತದಷ್ಟು ಹೆಚ್ಚಾಗಿದೆ. ಇನ್ನು ನಮ್ಮ ಸುತ್ತಮುತ್ತಲಿನ ಅನೇಕ ದೇಶಗಳಲ್ಲಿ ಪೆ್ಟರೋಲ್​​ ಲಭ್ಯವಿಲ್ಲ. 1973ರ ನಂತರದ ವರ್ಷಗಳಲ್ಲಿ ದೇಶದಲ್ಲಿ ತೈಲ ಬಿಕ್ಕಟ್ಟಿನ ಹೊರತಾಗಿಯೂ ಮೋದಿಯವರ ದೂರದೃಷ್ಟಿ ಮತ್ತು ಅರ್ಥಗರ್ಭಿತ ನಾಯಕತ್ವ ಕುಟುಂಬಗಳ ಮೇಲೆ ಪರಿಣಾಮ ಬಿದ್ದಿಲ್ಲ. ಕಳೆದ 2 ವರ್ಷಗಳಲ್ಲಿ ಭಾರತದಲ್ಲಿ ಪಟ್ರೋಲ್​ ಬೆಲೆ 4.65% ಏರಿಕೆಯ ಬದಲು ಇಳಿಕೆಯಾಗಿದೆ ಎಂದು ಸಚಿವ ಹರ್ಷದೀಪ್​ ಸಿಂಗ್ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾಹನ ಸವಾರರಿಗೆ ಸಿಹಿ ಸುದ್ದಿ; ಪೆಟ್ರೋಲ್​, ಡೀಸೆಲ್ ಬೆಲೆ 2 ರೂಪಾಯಿ ಇಳಿಕೆ; ಇಂದಿನಿಂದ ಅನ್ವಯ

https://newsfirstlive.com/wp-content/uploads/2023/07/petrol-1-1.webp

Load More