/newsfirstlive-kannada/media/post_attachments/wp-content/uploads/2025/01/TEAM_INDIA_1-1.jpg)
ಕಿವೀಸ್ ಹಾಗೂ ಆಸಿಸ್ ವಿರುದ್ಧದ ಟೆಸ್ಟ್ ಸೋಲುಗಳಿಂದ ಭಾರೀ ಮುಖಭಂಗಕ್ಕೆ ಒಳಗಾಗಿರುವ ಬಿಸಿಸಿಐ, ಭಾರತ ತಂಡದ ಆಟಗಾರರಿಗೆ ಕಠಿಣ ನಿಯಮಗಳನ್ನು ಜಾರಿ ಮಾಡಿದೆ. ಹಿರಿ-ಕಿರಿಯರು ಎನ್ನದೇ ಎಲ್ಲರಿಗೂ ಈ 10 ರೂಲ್ಸ್ ಅನ್ವಯ ಆಗುತ್ತವೆ. ಒಂದು ವೇಳೆ ಪ್ಲೇಯರ್ಸ್ ನಿಯಮಗಳನ್ನು ಮೀರಿ ವರ್ತನೆ ಮಾಡಿದರೆ ಮಹತ್ವದ ಟೂರ್ನಿಯಿಂದಲೇ ನಿಷೇಧ ಏರಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಪಂದ್ಯ ನಡೆಯುವಾಗಲೂ ಹೋಗಿ ಜಾಹೀರಾತು ಶೂಟಿಂಗ್ ಮಾಡುವಂತಿಲ್ಲ. ಎಲ್ಲ ಆಟಗಾರರು ಒಟ್ಟಿಗೆ ಇರಬೇಕು. ಅಭ್ಯಾಸ ನಡೆಯುವಾಗ ಚಕ್ಕರ್ ಹಾಕುವಂಗಿಲ್ಲ. ಹಿರಿಯ ಆಟಗಾರರು ಸೇರಿ ಎಲ್ಲರೂ ದೇಶಿಯ ಪಂದ್ಯಗಳನ್ನು ಆಡಲೇಬೇಕು. ಇದರಿಂದ ಪ್ಲೇಯರ್ಸ್ ಫಾರ್ಮ್ ಉಳಿಸಿಕೊಳ್ಳಬಹುದು. ಪಂದ್ಯದ ವೇಳೆ ನಿಗದಿತ ಸಮಯದವರೆಗೆ ಪತ್ನಿ ಹಾಗೂ ಮಕ್ಕಳು ಭೇಟಿ ಮಾಡಬಹುದು. ಏನದರೂ ಮುಖ್ಯವಾದ ಕೆಲಸ, ಸಮಸ್ಯೆ ಆದ್ರೆ ಮಾತ್ರ ಹೆಡ್ ಕೋಚ್ನ ಅನುಮತಿ ಪಡೆಯಬೇಕು ಎಂದು ತಿಳಿಸಲಾಗಿದೆ.
ಇದನ್ನೂ ಓದಿ:ಆಟಗಾರರಿಗೆ BCCI ಮೂಗುದಾರ.. ‘10 ಪಾಯಿಂಟ್ಸ್ ಪಾಲಿಸಿ’ಗೆ ಬೆಚ್ಚಿಬಿದ್ದ ಸ್ಟಾರ್ಗಳು..!
ಭಾರತ ತಂಡದ ಆಟಗಾರರಿಗೆ ಬಿಸಿಸಿಐ 10 ಹೊಸ ನಿಯಮಗಳನ್ನು ಹೊರಡಿಸಿದೆ. ಇದರ ಪ್ರಕಾರವೇ ಎಲ್ಲರೂ ನಡೆದುಕೊಳ್ಳಬೇಕು. ಸೀನಿಯರ್ಸ್, ಜೂನಿಯರ್ಸ್ ಎನ್ನುವ ಭೇದಭಾವವಿಲ್ಲ. ಅಲ್ಲದೇ ಪ್ರತಿಯೊಬ್ಬ ಆಟಗಾರನೂ ಇವುಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಅಲ್ಲದೇ ಬಿಸಿಸಿಐ ನಿಗದಿ ಮಾಡುವಂತ ಕಾರ್ಯಕ್ರಮಗಳಲ್ಲಿ ಪ್ಲೇಯರ್ಸ್ ಭಾಗಿಯಾಗಬೆಕು. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಬಿಸಿಸಿಐ ಕಠಿಣ ಶಿಕ್ಷೆ ಕೂಡ ನೀಡಬಹುದು. ಆ ಶಿಕ್ಷೆಗಳು ಹೀಗಿವೆ.
ಆಟಗಾರರಿಗೆ ಶಿಕ್ಷೆ ಏನು?
ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಆ ಆಟಗಾರನನ್ನ ಮುಂಬರುವ ಮಹತ್ವದ ಐಪಿಎಲ್ ಟೂರ್ನಿಯಿಂದ ಹೊರಗಿಡಲಾಗುತ್ತದೆ. ಎಷ್ಟೇ ಅವಶ್ಯಕತೆ ಬಂದರು ಐಪಿಎಲ್ ಟ್ರೋಫಿಗೆ ಎಂಟ್ರಿ ಇರುವುದಿಲ್ಲ. ಇದರಿಂದ ಆಟಗಾರ ದೊಡ್ಡ ಮೊತ್ತದಲ್ಲಿ ಹಣ ಕಳೆದುಕೊಳ್ಳಬೇಕಾಗುತ್ತದೆ. ಇದರ ಜೊತೆಗೆ ತನ್ನ ಆಟಕ್ಕೂ ಕುತ್ತು ತಂದುಕೊಂಡಂತೆ ಆಗುತ್ತದೆ ಎನ್ನಲಾಗಿದೆ.
ಐಪಿಎಲ್ ಟ್ರೋಫಿಗೆ ನಿಷೇಧ ಒಂದೇ ಅಲ್ಲ ಇನ್ನು ಆಟಗಾರ ಪಡೆಯುವ ಸಂಬಳವನ್ನು ಬಿಸಿಸಿಐ ಸಂಪೂರ್ಣವಾಗಿ ಕಡಿತ ಮಾಡುತ್ತದೆ. ಈ ಸಂಬಳವನ್ನು ಕಡಿತ ಮಾಡಿದರೆ ಆಟಗಾರನ ಆರ್ಥಿಕ ಬಲ ಶೇಕಡಾ 90 ರಷ್ಟು ನಷ್ಟ ಆದಂತೆ ಆಗುತ್ತದೆ. ಹೀಗಾಗಿ ಸದ್ಯ ಬಿಸಿಸಿಐ ರಿಲೀಸ್ ಮಾಡಿರುವ 10 ನಿಯಮಗಳ ಪ್ರಕಾರ ತಂಡದ ಆಟಗಾರರು ನಡೆದುಕೊಳ್ಳಬೇಕಿರುವುದು ಅನಿವಾರ್ಯವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ