/newsfirstlive-kannada/media/post_attachments/wp-content/uploads/2025/06/Gill-5.jpg)
ಜೂನ್ 20 ರಿಂದ ಇಂಗ್ಲೆಂಡ್ ವಿರುದ್ಧ ಭಾರತ ತಂಡವು ಟೆಸ್ಟ್ ಸರಣಿ ಆರಂಭಿಸಲಿದೆ. ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಹೊಸ ನಾಯಕನ ಪಡೆದಿದ್ದು, ಶುಬ್ಮನ್ ಗಿಲ್ ನಾಯಕರಾಗಿ ತಂಡವನ್ನು ಮುನ್ನಡೆಸ್ತಿದ್ದಾರೆ.
ನಾಡಿದ್ದಿಂದ ಆರಂಭವಾಗುವ ಪಂದ್ಯಗಳಿಗೆ ಟೀಂ ಇಂಡಿಯಾದ ಪ್ಲೇಯಿಂಗ್-11 ಹೇಗಿರಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಟೀಂ ಇಂಡಿಯಾದ ಮಾಜಿ ಕೋಚ್, 18 ಸದಸ್ಯರಲ್ಲಿ ಪ್ಲೇಯಿಂಗ್-11 ಆಯ್ಕೆ ಮಾಡಿದ್ದಾರೆ. ಅವರ ಪ್ರಕಾರ, ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಗೆಲ್ಲಲು ಭಾರತ ತಂಡ ಹೀಗಿರಬೇಕು.
ಯಾರಿಗೆಲ್ಲ ಸ್ಥಾನ ನೀಡಲಾಗಿದೆ..?
ಯಶಸ್ವಿ ಜೈಸ್ವಾಲ್ ಮತ್ತು ಕೆ.ಎಲ್.ರಾಹುಲ್ ಅವರು ಆರಂಭಿಕ ಆಟಗಾರರಾಗಿ ಕಣಕ್ಕೆ ಬರಬೇಕು ಅಂತಾ ರವಿ ಶಾಸ್ತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇವರಿಬ್ಬರೂ ಅನುಭವ ಇರುವ ಬ್ಯಾಟ್ಸ್ಮನ್ಗಳು ಇದರಿಂದ ತಂಡಕ್ಕೆ ಲಾಭ ಆಗಲಿದೆ ಅನ್ನೋದು ಶಾಸ್ತ್ರಿ ಲೆಕ್ಕಾಚಾರ.
ಇದನ್ನೂ ಓದಿ: ಬಿಗ್ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್ ವಿರುದ್ಧ ಗಂಭೀರ ಆರೋಪ.. ಏನದು?
ಮೂರನೇ ಕ್ರಮಾಂಕದಲ್ಲಿ ಸಾಯಿ ಸುದರ್ಶನ್ಗೆ ಚಾನ್ಸ್ ನೀಡಿದ್ದಾರೆ. ಐಪಿಎಲ್ ಹಾಗೂ ದೇಶಿಯ ಟೂರ್ನಿಗಳಲ್ಲಿ ಸುದರ್ಶನ್ ಅವರ ಅದ್ಭುತ ಪ್ರದರ್ಶನಕ್ಕೆ ಸೋತಿರುವ ಶಾಸ್ತ್ರಿ ಮೂರನೇ ಕ್ರಮಾಂಕದಲ್ಲಿ ಸಾಯಿ ಬ್ಯಾಟ್ ಮಾಡಬೇಕು ಎಂದು ಶಾಸ್ತ್ರಿ ತಿಳಿಸಿದ್ದಾರೆ. ಇನ್ನು ನಾಲ್ಕನೇ ಆರ್ಡರ್ನಲ್ಲಿ ಶುಬ್ಮನ್ ಗಿಲ್ ಬ್ಯಾಟಿಂಗ್ ಬಂದರೆ ಚೆನ್ನಾಗಿರಲಿದೆ. 25 ವರ್ಷದ ಗಿಲ್, 32 ಟೆಸ್ಟ್ ಪಂದ್ಯಗಳನ್ನು ಆಡಿದ ಅನುಭವ ಪಡೆದುಕೊಂಡಿದ್ದಾರೆ.
ಐದನೇ ಕ್ರಮಾಂಕದಲ್ಲಿ ಕರುಣ್ ನಾಯರ್, ಆರನೇ ಸ್ಲಾಟ್ನಲ್ಲಿ ರಿಷಬ್ ಪಂತ್ರನ್ನು ಕಣಕ್ಕೆ ಇಳಿಸಬೇಕು ಅಂತಾ ಪ್ರತಿಪಾದಿಸಿದ್ದಾರೆ. ಇನ್ನುಳಿದಂತೆ ರವೀಂದ್ರ ಜಡೇಜಾ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಲೈನ್ಅಪ್ ಇರಬೇಕು. 8ನೇ ಸ್ಥಾನದಲ್ಲಿ ಪ್ರಸಿದ್ಧ್ ಕೃಷ್ಣ ಅಥವಾ ಅರ್ಷದೀಪ್ ಸಿಂಗ್ ಬಂದರೆ ಚೆನ್ನಾಗಿರಲಿದೆ. ಅಲ್ಲದೇ ಮೊಹ್ಮದ್ ಸಿರಾಜ್, ಜಸ್ಪ್ರಿತಾ ಬೂಮ್ರಾ ಕೂಡ ಕಣದಲ್ಲಿರಲಿದ್ದಾರೆ. ಜೊತೆಗೆ ನಿತಿಶ್ ರೆಡ್ಡಿ ಅಥವಾ ಶಾರ್ದುಲ್ ಠಾಕೂರ್ ಒಬ್ಬರು ಮ್ಯಾಚ್ನಲ್ಲಿ ಇರಬೇಕು ಎಂದಿದ್ದಾರೆ.
ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಶುಬ್ಮನ್ ಗಿಲ್, ಕರುಣ್ ನಾಯರ್, ರಿಷಬ್ ಪಂತ್, ರವೀಂದ್ರ ಜಡೇಜಾ, ನಿತಿಶ್ ಕುಮಾರ್ ರೆಡ್ಡಿ/ಶಾರ್ದುಲ್ ಠಾಕೂರ್, ಪ್ರಸಿದ್ಧ ಕೃಷ್ಣ/ ಅರ್ಷದೀಪ್ ಸಿಂಗ್, ಸಿರಾಜ್, ಬುಮ್ರಾ.
ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಗೆಲ್ಲಲು ಭಾರತ ತಂಡಕ್ಕೆ ಬೇಕು ಐದು ಮಂತ್ರ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ