/newsfirstlive-kannada/media/post_attachments/wp-content/uploads/2025/02/JOBS_POST-1.jpg)
ಸರ್ಕಾರಿ ಕೆಲಸ ಹುಡುಕುತ್ತಿರುವವರಿಗೆ ಭಾರತೀಯ ಅಂಚೆ ಇಲಾಖೆಯಲ್ಲಿ ಅತ್ಯುತ್ತಮವಾದ ಅವಕಾಶಗಳು ಇವೆ. ಭಾರತದ 23 ಅಂಚೆ ಕಚೇರಿಗಳಲ್ಲಿ ಖಾಲಿ ಇರುವ ಉದ್ಯೋಗಗಳನ್ನು ತುಂಬಲಾಗುತ್ತಿದೆ. ಇದರಲ್ಲಿ ಕರ್ನಾಟಕದಲ್ಲೂ ಸಾವಿರಕ್ಕಿಂತ ಅಧಿಕ ಹುದ್ದೆಗಳು ಇವೆ. ಹೀಗಾಗಿ ಯಾರು ಪೋಸ್ಟ್ ಆಫೀಸ್ನಲ್ಲಿ ಕೆಲಸ ಮಾಡಲು ಇಚ್ಚಿಸುವವರೋ ಅವರು ಈ ಕೇಂದ್ರ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು.
ಈ ಉದ್ಯೋಗಗಳಿಗೆ ಸಂಬಂಧಿಸಿದ ವೇತನ ಶ್ರೇಣಿ, ಅರ್ಜಿ ಶುಲ್ಕ, ಪರೀಕ್ಷೆ, ವಿದ್ಯಾರ್ಹತೆ, ಹುದ್ದೆಗಳ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಸೇರಿದಂತೆ ಇತರೆ ಮಾಹಿತಿಗಳನ್ನು ಇಲ್ಲಿ ತಿಳಿಸಿಕೊಡಲಾಗಿದೆ. ದೇಶದ್ಯಾಂತ 21,413 ಉದ್ಯೋಗಗಳು ಇವೆ. ಇದರಲ್ಲಿ ದೇಶದ ವಿವಿಧ ರಾಜ್ಯಗಳು ಸೇರಿದಂತೆ ಕರ್ನಾಟಕಕ್ಕೂ ಉದ್ಯೋಗಗಳು ಮೀಸಲಿವೆ. ಹೀಗಾಗಿ ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಈ ಕೆಲಸಗಳಿಗೆ ಪ್ರಯತ್ನ ಮಾಡಬಹುದಾಗಿದೆ.
ಈಗಾಗಲೇ ಅರ್ಜಿಗಳು ಆರಂಭವಾಗಿದ್ದು, ಈ ಕೂಡಲೇ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಕೇಂದ್ರ ಸರ್ಕಾರದ ಅಂಚೆ ಇಲಾಖೆಯಲ್ಲಿ ಮೂರು ವಿಧಧ ಹುದ್ದೆಗಳಿವೆ. ಹೆಚ್ಚಿನ ಓದು ಇಲ್ಲಿ ಬೇಕಾಗಿಲ್ಲ. 10ನೇ ತರಗತಿ ತೇರ್ಗಡೆ ಆಗಿದ್ರೆ ಸಾಕು. ಕಂಪ್ಯೂಟರ್ ಜ್ಞಾನ, ಇತರೆ ಕೌಶಲ್ಯಗಳು ಇದ್ದರೇ ಅಭ್ಯರ್ಥಿ ಆಯ್ಕೆಗೆ ಇನ್ನಷ್ಟು ಉತ್ತಮ.
ಉದ್ಯೋಗಗಳ ಹೆಸರು?
ಗ್ರಾಮೀಣ ಡಾಕ್ ಸೇವಕರು (GDS)
ಬ್ರಾಂಚ್ ಪೋಸ್ಟ್ ಮಾಸ್ಟರ್ (BPM)
ಸಹಾಯಕ ಬ್ರ್ಯಾಂಚ್ ಪೋಸ್ಟ್‌ಮಾಸ್ಟರ್ (ABPM)
ಇದನ್ನೂ ಓದಿ: ಭಾರತೀಯ ಅಂಚೆ ಇಲಾಖೆ ಇಂದ ಭರ್ಜರಿ ಗುಡ್ನ್ಯೂಸ್.. 21,413 ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕದ ಹುದ್ದೆಗಳ ವರ್ಗೀಕರಣ
- ಸಾಮಾನ್ಯ ಅಭ್ಯರ್ಥಿಗಳು- 482
- ಒಬಿಸಿ ಅಭ್ಯರ್ಥಿಗಳು- 260
- ಎಸ್ಸಿ ಅಭ್ಯರ್ಥಿಗಳು- 175
- ಎಸ್ಟಿ ಅಭ್ಯರ್ಥಿಗಳು- 78
- ಇಡಬ್ಲುಎಸ್ ಅಭ್ಯರ್ಥಿಗಳು- 122
- ಪಿಡಬ್ಲುಡಿ- ಎ- ಅಭ್ಯರ್ಥಿಗಳು- 03
- ಪಿಡಬ್ಲುಡಿ- ಬಿ- ಅಭ್ಯರ್ಥಿಗಳು- 03
- ಪಿಡಬ್ಲುಡಿ- ಸಿ- ಅಭ್ಯರ್ಥಿಗಳು- 12
- ಪಿಡಬ್ಲುಡಿ- ಡಿ- ಅಭ್ಯರ್ಥಿಗಳು- ಇಲ್ಲ
ಎಷ್ಟು ಉದ್ಯೋಗಗಳು- 1,135
ವಿದ್ಯಾರ್ಹತೆ
10ನೇ ತರಗತಿ ಪಾಸ್
ಅರ್ಜಿ ಶುಲ್ಕ ಎಷ್ಟು ಇದೆ?
ಸಾಮಾನ್ಯ ಅಭ್ಯರ್ಥಿಗಳಿಗೆ- 100 ರೂಪಾಯಿ
ಎಸ್ಸ್ಸಿ, ಎಸ್ಟಿ, ಮಹಿಳೆಯರು, ವಿಶೇಷ ಚೇತನರು, ಟ್ರಾನ್ಸ್ ವುಮೆನ್- ಶುಲ್ಕ ಇಲ್ಲ
ಮಾಸಿಕ ಸಂಬಳ ಎಷ್ಟು?
GDS ಹುದ್ದೆಗೆ- 10,000 ದಿಂದ 24,470 ರೂಪಾಯಿಗಳು
BPM ಹುದ್ದೆಗೆ- 12,000 ದಿಂದ 29,380 ರೂಪಾಯಿಗಳು
ABPM ಹುದ್ದೆಗೆ- 10,000 ದಿಂದ 24,470 ರೂಪಾಯಿಗಳು
ಎಷ್ಟು ವರ್ಷದ ಒಳಗಿನವರಿಗೆ ಅವಕಾಶ ಇದೆ
18 ರಿಂದ 40 ವರ್ಷದ ಒಳಗಿನ ಅಭ್ಯರ್ಥಿಗಳು
ಈ ಉದ್ಯೋಗದ ಮುಖ್ಯವಾದ ದಿನಾಂಕಗಳು
ಅರ್ಜಿ ಸಲ್ಲಿಕೆಯ ಪ್ರಾರಂಭದ ದಿನಾಂಕ- 10 ಫೆಬ್ರುವರಿ 2025
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ- 03 ಮಾರ್ಚ್ 2025
ಅರ್ಜಿಯಲ್ಲಿ ತಪ್ಪಿದ್ದರೇ ತಿದ್ದಪಡಿಗೆ ಅವಕಾಶ- 06 ರಿಂದ 08 ಮಾರ್ಚ್
ಮಾಹಿತಿಗಾಗಿ-https://indiapostgdsonline.cept.gov.in/Notifications1/Model_Notification.pdf
ಹುದ್ದೆಗಳ ವರ್ಗೀಕರಣ-
https://indiapostgdsonline.cept.gov.in/Notifications1/Final_Post_Consolidation.pdf
ಅರ್ಜಿ ಸಲ್ಲಿಕೆಗೆ ಲಿಂಕ್- https://indiapostgdsonline.gov.in/
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ