/newsfirstlive-kannada/media/post_attachments/wp-content/uploads/2025/02/JOB_POST-1.jpg)
ಭಾರತೀಯ ಅಂಚೆ ಇಲಾಖೆಯು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ನ್ಯೂಸ್ ನೀಡಿದೆ. 10 ಸಾವಿರ, 15 ಸಾವಿರ ಉದ್ಯೋಗಗಳಲ್ಲ, ಬರೋಬ್ಬರಿ 21 ಸಾವಿರಕ್ಕೂ ಅಧಿಕ ಉದ್ಯೋಗಗಳನ್ನು ಭರ್ತಿ ಮಾಡಲು ಅಂಚೆ ಇಲಾಖೆಯು ಯೋಜಿಸಿದೆ. ಈ ಸಂಬಂಧ ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. ಅಭ್ಯರ್ಥಿಗಳು ಈ ಕೂಡಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
ಭಾರತದ್ಯಾಂತ ಇರುವ 23 ಕ್ಷೇತ್ರಗಳಲ್ಲಿನ ಅಂಚೆ ಕಚೇರಿಗಳಲ್ಲಿ ಖಾಲಿ ಇರುವ ಉದ್ಯೋಗಗಳನ್ನು ತುಂಬಲಾಗುತ್ತಿದೆ. ಆಯ್ಕೆ ಮಾನದಂಡ ಆಧರಿಸಿ 23 ಕ್ಷೇತ್ರಗಳಿಗೆ ಮೆರಿಟ್ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳ ಹೆಸರನ್ನು ನಿರ್ಧರಿಸಲಾಗುತ್ತದೆ. ಅರ್ಜಿಗಳ ನೋಂದಣಿ ಪ್ರಕ್ರಿಯೆಯು ಮುಗಿದ ನಂತರ ಮೆರಿಟ್ ಲಿಸ್ಟ್ ಬಿಡುಗಡೆ ಮಾಡಲಾಗುತ್ತದೆ. ಹುದ್ದೆಗಳ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ, ವೇತನ ಶ್ರೇಣಿ, ಅರ್ಜಿ ಶುಲ್ಕ, ಪರೀಕ್ಷೆ, ವಿದ್ಯಾರ್ಹತೆ ಸೇರಿ ಇತರೆ ಮಾಹಿತಿ ಇಲ್ಲಿ ನೀಡಲಾಗಿದೆ.
ಎಷ್ಟು ಉದ್ಯೋಗಗಳು- 21,413
ಉದ್ಯೋಗಗಳ ಹೆಸರು?
- ಗ್ರಾಮೀಣ ಡಾಕ್ ಸೇವಕರು (GDS)
- ಬ್ರಾಂಚ್ ಪೋಸ್ಟ್ ಮಾಸ್ಟರ್ (BPM)
- ಸಹಾಯಕ ಬ್ರ್ಯಾಂಚ್ ಪೋಸ್ಟ್‌ಮಾಸ್ಟರ್ (ABPM)
ವಿದ್ಯಾರ್ಹತೆ
10ನೇ ತರಗತಿ
ಇದನ್ನೂ ಓದಿ: ಖಾಲಿ ಇರೋ ಹುದ್ದೆಗಳಿಗೆ ಕೃಷಿ ಇಲಾಖೆಯಿಂದ ಅರ್ಜಿ ಆಹ್ವಾನ; ಅರ್ಹ ಅಭ್ಯರ್ಥಿಗಳು ಕೂಡಲೇ ಅಪ್ಲೈ ಮಾಡಿ!
ಮಾಸಿಕ ಸಂಬಳ ಎಷ್ಟು?
GDS ಹುದ್ದೆಗೆ- 10,000 ದಿಂದ 24,470 ರೂಪಾಯಿಗಳು
BPM ಹುದ್ದೆಗೆ- 12,000 ದಿಂದ 29,380 ರೂಪಾಯಿಗಳು
ABPM ಹುದ್ದೆಗೆ- 10,000 ದಿಂದ 24,470 ರೂಪಾಯಿಗಳು
ಎಷ್ಟು ವರ್ಷದ ಒಳಗಿನವರಿಗೆ ಅವಕಾಶ ಇದೆ
18 ರಿಂದ 40 ವರ್ಷದ ಒಳಗಿನ ಅಭ್ಯರ್ಥಿಗಳು
ಈ ಉದ್ಯೋಗದ ಮುಖ್ಯವಾದ ದಿನಾಂಕಗಳು
- ಅರ್ಜಿ ಸಲ್ಲಿಕೆಯ ಪ್ರಾರಂಭದ ದಿನಾಂಕ- 10 ಫೆಬ್ರುವರಿ 2025
- ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ- 03 ಮಾರ್ಚ್ 2025
- ಅರ್ಜಿಯಲ್ಲಿ ತಪ್ಪಿದ್ದರೇ ತಿದ್ದುಪಡಿಗೆ ಅವಕಾಶ- 06 ರಿಂದ 08 ಮಾರ್ಚ್
ಅರ್ಜಿ ಶುಲ್ಕ ಎಷ್ಟು ಇದೆ?
ಸಾಮಾನ್ಯ ಅಭ್ಯರ್ಥಿಗಳಿಗೆ- 100 ರೂಪಾಯಿ
ಎಸ್ಸ್ಸಿ, ಎಸ್ಟಿ, ಮಹಿಳೆಯರು, ವಿಶೇಷ ಚೇತನರು, ಟ್ರಾನ್ಸ್ ವುಮೆನ್- ಶುಲ್ಕ ಇಲ್ಲ
ಮಾಹಿತಿಗಾಗಿ-https://indiapostgdsonline.cept.gov.in/Notifications1/Model_Notification.pdf
ಅರ್ಜಿ ಸಲ್ಲಿಕೆಗೆ ಲಿಂಕ್- https://indiapostgdsonline.gov.in/
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ