newsfirstkannada.com

IND vs ENG; ಕೆ.ಎಲ್.ರಾಹುಲ್​ ಅಲಭ್ಯತೆಯಿಂದ ಮತ್ತೊಬ್ಬ ಕನ್ನಡಿಗನಿಗೆ ಚಾನ್ಸ್ ಸಿಗುತ್ತಾ.. RCB ಪ್ಲೇಯರ್​​ಗೆ ಕೊಕ್? ​

Share :

Published February 23, 2024 at 9:02am

  ಟೀಮ್ ಇಂಡಿಯಾದ ನೆಟ್​ ಸೆಷನ್​ನಲ್ಲೂ ಈ ಲೆಫ್ಟಿ ಬ್ಯಾಟರ್ ಹಿಟ್ಟರ್

  ಒಂದೇ ಒಂದು ಅವಕಾಶಕ್ಕಾಗಿ ಕಾಯುತ್ತಿರುವ ಕರ್ನಾಟಕದ ಪ್ಲೇಯರ್

  3 ಇನ್ನಿಂಗ್ಸ್​ಗಳಲ್ಲಿ ಆರ್​ಸಿಬಿ ಬ್ಯಾಟರ್​ ನೀಡಿದ್ದು ಕಳಪೆ ಪರ್ಫಾಮೆನ್ಸ್

2 ಟೆಸ್ಟ್​ ಪಂದ್ಯಗಳಿಂದ ಟೀಮ್ ಇಂಡಿಯಾ ಪರ ಮೂವರು ಪದಾರ್ಪಣೆ ಮಾಡಿದ್ದಾರೆ. ನಾಳೆ ರಾಂಚಿಯಲ್ಲಿ ನಡೆಯೋ 4ನೇ ಟೆಸ್ಟ್​ನಲ್ಲಿ 4ನೇ ಆಟಗಾರನ ಡೆಬ್ಯೂಗೆ ವೇದಿಕೆ ಸಜ್ಜಾಗಿದೆ. ಕೆ.ಎಲ್.ರಾಹುಲ್ ಅಲಭ್ಯತೆ ಮತ್ತೊರ್ವ ಕರ್ನಾಟಕದ ಬ್ಯಾಟರ್​ಗೆ ವರವಾಗ್ತಿದೆ.

ಇಂಗ್ಲೆಂಡ್ ಹಾಗೂ ಭಾರತ ನಡುವಿನ ಟೆಸ್ಟ್​ ಸರಣಿಯ 4ನೇ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ರಾಂಚಿ ಟೆಸ್ಟ್​ ಗೆಲುವಿನೊಂದಿಗೆ ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಚಾರದಲ್ಲಿ ಟೀಮ್ ಇಂಡಿಯಾ ಇದೆ. ಅತ್ತ ಇಂಗ್ಲೆಂಡ್​​​​​​​​​​​, ಸತತ ಎರಡು ಸೋಲುಗಳ ಪ್ರತೀಕಾರಕ್ಕೆ ಕಾದಿದೆ. ಇಂತಾ ಮಹತ್ವದ ಪಂದ್ಯದಲ್ಲಿ ಕರ್ನಾಟಕದ ಸ್ಟಾರ್ ಬ್ಯಾಟರ್​ನ ಡೆಬ್ಯುಗೆ ವೇದಿಕೆ ಸಿದ್ಧವಾಗಿದೆ.

ಕರ್ನಾಟಕದ ಸ್ಟಾರ್​ ಬ್ಯಾಟರ್​ಗೆ ಒಲಿಯುತ್ತಾ ಅದೃಷ್ಟ..!​

ಹೈದರಾಬಾದ್​ ಮೊದಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಕೆ.ಎಲ್.ರಾಹುಲ್, ಮೊದಲ ಇನ್ನಿಂಗ್ಸ್​ನಲ್ಲಿ ಗಮನ ಸೆಳೆದಿದ್ದರು. ಆದ್ರೆ, ಇಂಜುರಿಗೆ ಒಳಗಾಗಿದ್ದ ಕಾರಣ 2 ಹಾಗೂ 3ನೇ ಟೆಸ್ಟ್​ ಪಂದ್ಯಗಳಿಗೆ ಅಲಭ್ಯರಾಗಿದ್ರು. ಹೀಗಾಗಿ ರಾಂಚಿ ಟೆಸ್ಟ್ ವೇಳೆ ತಂಡ ಕೂಡಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದ್ರೀಗ ಸಂಪೂರ್ಣ ಫಿಟ್​ ಆಗದ ರಾಹುಲ್, 4ನೇ ಟೆಸ್ಟ್ ಪಂದ್ಯ ಆಡುತ್ತಿಲ್ಲ. ಇದೇ ಈಗ ಕರ್ನಾಟಕದ ಬ್ಯಾಟರ್​​ಗೆ ಅದೃಷ್ಟ ಖುಲಾಯಿಸುವಂತೆ ಮಾಡಿದೆ.

ರಾಂಚಿ ಟೆಸ್ಟ್​​ನಿಂದ ರಜತ್​​ ಪಾಟಿದರ್​​ಗೆ ಕೊಕ್​..?

ಕಳೆದ 2 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ರಜತ್ ಪಾಟಿದರ್, ಸಿಕ್ಕ ಅವಕಾಶವನ್ನ ಕೈಚೆಲ್ಲಿದ್ದಾರೆ. ವೈಜಾಗ್​ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ 32 ರನ್ ಗಳಿಸಿದ್ದು ಬಿಟ್ಟರೆ, ನಂತರದ 3 ಇನ್ನಿಂಗ್ಸ್​ಗಳಲ್ಲಿ ಆರ್​ಸಿಬಿ ಬ್ಯಾಟರ್​ ನೀಡಿದ್ದು ಕಳಪೆ ಪರ್ಫಾಮೆನ್ಸ್​. ಕಳೆದ 4 ಇನಿಂಗ್ಸ್​ಗಳಿಂದ ಜಸ್ಟ್​ 46 ರನ್ ಕಲೆ ಹಾಕಿರುವ ರಜತ್​ಗೆ ರಾಂಚಿ ಟೆಸ್ಟ್​ನಿಂದ ಕೊಕ್​ ಕೊಡೋ ಸಾಧ್ಯತೆಯಿದೆ.

ಒಂದೇ ಒಂದು ಅವಕಾಶಕ್ಕಾಗಿ ಕಾಯ್ತಿದ್ದಾರೆ ಪಡಿಕ್ಕಲ್​

ಒಂದೆಡೆ ರಜತ್ ಪಾಟಿದಾರ್​ ಸಿಕ್ಕ ಸಿಕ್ಕ ಅವಕಾಶ ಕೈಚೆಲ್ತಿದ್ದರೆ. ಇತ್ತ ಕೆ.ಎಲ್.ರಾಹುಲ್ ಅಲಭ್ಯತೆಯಲ್ಲಿ ಸ್ಥಾನ ಪಡೆದಿರುವ ದೇವದತ್ ಪಡಿಕ್ಕಲ್, ಒಂದೇ ಒಂದು ಅವಕಾಶಕ್ಕಾಗಿ ಕಾಯ್ತಿದ್ದಾರೆ. ಡೊಮೆಸ್ಟಿಕ್​ ಕ್ರಿಕೆಟ್​​ನಲ್ಲಿ ಈ ಯಂಗ್​ಸ್ಟರ್​​ ರೆಡ್ ಹಾಟ್​ ಫಾರ್ಮ್​ನಲ್ಲಿ ಮಿಂಚಿದ್ದಾರೆ. ರಣಜಿ ಹಾಗೂ ಇಂಗ್ಲೆಂಡ್ ಲಯನ್ಸ್ ಎದುರು ಅಬ್ಬರಿಸಿ ಬೊಬ್ಬಿರೆದಿದ್ದಾರೆ.

ಪ್ರಸಕ್ತ ರಣಜಿಯಲ್ಲಿ ಪಡಿಕ್ಕಲ್

ಪ್ರಸಕ್ತ ರಣಜಿ ಟ್ರೋಫಿಯಲ್ಲಿ 4 ಪಂದ್ಯಗಳನ್ನಾಡಿರುವ ಪಡಿಕ್ಕಲ್, ಬರೋಬ್ಬರಿ 556 ರನ್ ಸಿಡಿಸಿದ್ದಾರೆ. 92.66ರ ಸರಾಸರಿಯಲ್ಲಿ ರನ್ ಗಳಿಸಿರುವ ದೇವದತ್​ ಪಡಿಕ್ಕಲ್​, 3 ಶತಕ ದಾಖಲಿಸಿದ್ದಾರೆ. 76.9 ಸ್ಟ್ರೈಕ್​​​​​​ರೇಟ್​ ಹೊಂದಿದ್ದಾರೆ.

ಇದಿಷ್ಟೇ ಅಲ್ಲ, ಇಂಗ್ಲೆಂಡ್ ಲಯನ್ಸ್ ಎದುರಿನ ಅನಧಿಕೃತ ಟೆಸ್ಟ್​ನಲ್ಲಿ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ದೇವದತ್​ ಪಡಿಕ್ಕಲ್​, 2ನೇ ಟೆಸ್ಟ್​ನಲ್ಲಿ ಕ್ರಮವಾಗಿ 65, 21 ರನ್ ಬಾರಿಸಿ ಗಮನ ಸೆಳೆದಿದ್ರು. ಇದೇ ಪ್ರದರ್ಶನ ಟೀಮ್ ಇಂಡಿಯಾ ಬಾಗಿಲು ತೆರೆಯುವಂತೆ ಮಾಡಿದೆ.

ಪಡಿಕ್ಕಲ್​ ಪ್ರಾಕ್ಟೀಸ್.. ಕೋಚ್​ಗಳೂ ಫುಲ್​ಖುಷ್​.!

ರಣಜಿ ಹಾಗೂ ಇಂಗ್ಲೆಂಡ್​ ಲಯನ್ಸ್​ ಎದುರು ಮಾತ್ರವೇ ಅಲ್ಲ, ಟೀಮ್ ಇಂಡಿಯಾದ ನೆಟ್​ ಸೆಷನ್​ನಲ್ಲೂ ಈ ಲೆಫ್ಟಿ ಬ್ಯಾಟರ್​​ ಗಮನ ಸೆಳೆದಿದ್ದಾರೆ. ಪ್ರ್ಯಾಕ್ಟೀಸ್ ವೇಳೆ ಅದ್ಭುತ ಶಾಟ್ಸ್​ ಹಾಗೂ ಫುಟ್​ ವರ್ಕ್​ನಿಂದ ಕೋಚಿಂಗ್ ಸ್ಟಾಫ್​ಗಳ ಮನವನ್ನು ಗೆದ್ದಿದ್ದಾರೆ. ಹೀಗಾಗಿ ಕಳಪೆ ಶಾಟ್ಸ್​ನಿಂದ ವಿಕೆಟ್ ಕೈಚೆಲ್ತಿರೋ ಪಾಟಿದರ್ ಬದಲಿಗೆ ರಾಂಚಿಯಲ್ಲಿ ದೇವದತ್​ ಪಡಿಕ್ಕಲ್​​ಗೆ ಚಾನ್ಸ್ ಸಿಗೋ ಸಾಧ್ಯತೆ ಇದೆ. ಸಿಕ್ಕ ಅವಕಾಶದಲ್ಲಿ ಕನ್ನಡಿಗ ಮಿಂಚು ಹರಿಸಲಿ ಅನ್ನೋದು ಕನ್ನಡಿಗರ ಹಾರೈಕೆಯಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

IND vs ENG; ಕೆ.ಎಲ್.ರಾಹುಲ್​ ಅಲಭ್ಯತೆಯಿಂದ ಮತ್ತೊಬ್ಬ ಕನ್ನಡಿಗನಿಗೆ ಚಾನ್ಸ್ ಸಿಗುತ್ತಾ.. RCB ಪ್ಲೇಯರ್​​ಗೆ ಕೊಕ್? ​

https://newsfirstlive.com/wp-content/uploads/2024/02/devdutt_padikkal.jpg

Load More