/newsfirstlive-kannada/media/post_attachments/wp-content/uploads/2024/08/RCB_TEAM-3.jpg)
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಇನ್ನೇನು 6 ತಿಂಗಳು ಮಾತ್ರ ಬಾಕಿ ಇದೆ. ಈಗಿನಿಂದಲೇ ವರ್ಷದ ಕೊನೆಗೆ ನಡೆಯಲಿರೋ ಮೆಗಾ ಆನ್ಷನ್ಗೆ ಭಾರೀ ತಯಾರಿ ಶುರುವಾಗಿದೆ. ಎಲ್ಲಾ ಐಪಿಎಲ್ ತಂಡಗಳಂತೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಅಳೆದು ತೂಗಿ ರೀಟೈನ್ ಲಿಸ್ಟ್ ಮಾಡಲು ಮುಂದಾಗಿದೆ. ಇದರ ಮಧ್ಯೆ ಆರ್ಸಿಬಿ ಹೊಸ ರೀಟೈನ್ ಲಿಸ್ಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರೀಟೈನ್ ಲಿಸ್ಟ್ನಲ್ಲಿ ಯಾರ ಹೆಸರುಗಳಿವೆ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರನ್ನು ರೀಟೈನ್ ಮಾಡಿಕೊಳ್ಳಲು ಮುಂದಾಗಿದೆ. ಕೊಹ್ಲಿ ನಂತರ ಆರ್ಸಿಬಿ ಸ್ಟಾರ್ ಪ್ಲೇಯರ್ ಎಂದೇ ಖ್ಯಾತಿಯಾಗಿರೋ ರಜತ್ ಪಾಟಿದಾರ್ ಹೆಸರು ಕೂಡ ಸೇರಿದೆ. ಜತೆಗೆ ಫಾರೀನ್ ಪ್ಲೇಯರ್ ಆಗಿರೋ ಕ್ಯಾಮೆರಾನ್ ಗ್ರೀನ್ ಮತ್ತು ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಅವರ ಹೆಸರು ಕೂಡ ವೈರಲ್ ಆಗಿರೋ ಲಿಸ್ಟ್ನಲ್ಲಿ ಇದೆ.
Any changes ??#IPL2025#CricketTwitterpic.twitter.com/v9dNxvUThB
— RCBIANS OFFICIAL (@RcbianOfficial)
Any changes ??#IPL2025#CricketTwitterpic.twitter.com/v9dNxvUThB
— RCBIANS OFFICIAL (@RcbianOfficial) August 17, 2024
">August 17, 2024
ರಿಲೀಸ್ ಆಗೋ ಆಟಗಾರರು ಇವರೇ!
ಕಳೆದ ಸೀಸನ್ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಮ್ಯಾಕ್ಸ್ವೆಲ್ ಮತ್ತು 40 ವರ್ಷಕ್ಕೆ ಕಾಲಿಟ್ಟಿರೋ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಅವರನ್ನು ರಿಲೀಸ್ ಮಾಡುವ ಸಾಧ್ಯತೆ ಇದೆ. ಹಾಗೆಯೇ 2024ರ ಐಪಿಎಲ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿಲ್ ಜಾಕ್ಸ್ ಮತ್ತು ಯಶ್ ದಯಾಳ್ ಅವರನ್ನು ರಿಲೀಸ್ ಮಾಡುವ ಸಾಧ್ಯತೆ ಇದ್ದು, ಇವರನ್ನು ಮೆಗಾ ಆಕ್ಷನ್ನಲ್ಲಿ ಖರೀದಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:6,6,6,6,6,6,6,6,6,6,6,6; ಅಬ್ಬಬ್ಬಾ! ಸಿಡಿಲಬ್ಬರದ ಶತಕ ಸಿಡಿಸಿ ದಾಖಲೆ ಬರೆದ ಇಶಾನ್ ಕಿಶನ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ