/newsfirstlive-kannada/media/post_attachments/wp-content/uploads/2025/04/raffale-fighter-jet.jpg)
ನವದೆಹಲಿ: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ಬಳಿಕ ಭಾರತ ದಿಟ್ಟ ಹೆಜ್ಜೆಯ ಮೂಲಕ ಐತಿಹಾಸಿಕ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಉಗ್ರರ ಮಟ್ಟ ಹಾಕಲು ತೀರ್ಮಾನಿಸಿರೋ ಭಾರತೀಯ ಯೋಧರು ಆಕ್ರಮಣಾಕಾರಿ ಆಪರೇಷನ್‌ಗೆ ಇಳಿದಿದ್ದಾರೆ. ಭಾರತದ ಭೂ ಸೇನೆ, ವಾಯುಸೇನೆ ಗಡಿಯಲ್ಲಿ ಹೈ ಅಲರ್ಟ್ ಆಗಿದೆ.
ಪಾಕಿಸ್ತಾನಕ್ಕೆ ಯುದ್ಧದ ಭೀತಿ ಕಾಡುತ್ತಿರುವಾಗಲೇ ಭಾರತ, ಫ್ರಾನ್ಸ್ ಇಂದು ಮತ್ತೊಂದು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ. ಭಾರತ ಇಂದು ಫ್ರಾನ್ಸ್‌ನಿಂದ 26 ರಫೇಲ್ ಫೈಟರ್ ಜೆಟ್‌ಗಳನ್ನು ಖರೀದಿ ಮಾಡುವ ಒಪ್ಪಂದ ಮಾಡಿಕೊಂಡಿದೆ.
ಈಗಾಗಲೇ ಭಾರತೀಯ ವಾಯುಪಡೆಯಲ್ಲಿ ರಫೇಲ್ ಫೈಟರ್ ಜೆಟ್‌ಗಳು ಇವೆ. ಅವುಗಳಲ್ಲಿ 2 ಸ್ಕ್ವಾಡ್ರನ್ (Squadron) ರಫೇಲ್ ಫೈಟರ್ ಜೆಟ್‌ಗಳು ಪಾಕ್ ಮತ್ತು ಚೀನಾ ಗಡಿಯಲ್ಲಿ ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ: ಪಾಕ್ ವಿರುದ್ಧ ಯುದ್ಧ ನಡೆದರೆ.. ಧೋನಿ, ತೆಂಡುಲ್ಕರ್ ಗನ್ ಹಿಡಿದು ಸಂಗ್ರಾಮಕ್ಕೆ ಬರ್ತಾರೆ..!
ಇದೀಗ ಫ್ರಾನ್ಸ್‌ನಿಂದ ಭಾರತ 63 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 26 ರಫೇಲ್ ಫೈಟರ್ ಜೆಟ್‌ಗಳನ್ನು ಖರೀದಿ ಮಾಡಲಾಗುತ್ತಿದೆ. 4.5 ಜನರೇಷನ್‌ನ ಈ ರಫೇಲ್ ಫೈಟರ್ ಜೆಟ್‌ಗಳು ವಾಯುಪಡೆಗೆ ಸೇರ್ಪಡೆಯಾಗುತ್ತಿರೋದು ಭಾರತೀಯ ಸೇನೆಗೆ ಹೆಚ್ಚಿನ ಬಲ ತರಲಿದೆ. ಪಾಕಿಸ್ತಾನದ F-16 ಫೈಟರ್ ಜೆಟ್‌ಗೆ ರಫೇಲ್ ಫೈಟರ್ ಜೆಟ್‌ಗಳು ಫೈಟ್ ನೀಡಲಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ