/newsfirstlive-kannada/media/post_attachments/wp-content/uploads/2024/10/JAISHANKAR.jpg)
2022.. ಬರೋಬ್ಬರಿ 3 ವರ್ಷಗಳಿಗೂ ಅಧಿಕ ಅವಧಿಯಿಂದ ರಷ್ಯಾ ಮತ್ತು ಉಕ್ರೇನ್​ ನಡುವೆ ಯುದ್ಧ ನಡೆಯುತ್ತಲೇ ಇದೆ. ಸದ್ಯಕಂತೂ ಇದು ನಿಲ್ಲು ಲಕ್ಷಣ ಕಾಣ್ತಿಲ್ಲ. ಉಕ್ರೇನ್​-ರಷ್ಯಾ ಸಂಘರ್ಷ ನಿಲ್ಲಿಸಲು ಟ್ರಂಪ್ ಹೊಸ ತಂತ್ರಕ್ಕೆ ಮುಂದಾಗಿದ್ದಾರೆ.
ಹಲವು ಬಾರಿ ಕದನ ವಿರಾಮದ ಮಾತುಕತೆ ನಡೆಸುವಂತೆ ಒತ್ತಾಯಿಸಿದಾಗ್ಯೂ ರಷ್ಯಾ ಯುದ್ಧ ಮುಂದುವರೆಸಿದೆ. ಹೀಗಾಗಿ ಅರಿಕಾ ಬ್ಲ್ಯಾಕ್​ಮೇಲ್​ ಮೂಲಕ ರಷ್ಯಾವನ್ನು ಕಟ್ಟಿಹಾಕಲು ಯತ್ನಿಸ್ತಿದೆ. 50 ದಿನದಲ್ಲಿ ಸಂಧಾನಕ್ಕೆ ಮುಂದಾಗದಿದ್ರೆ, ನಿರ್ಬಂಧ ಅಸ್ತ್ರ ಪ್ರಯೋಗಿಸುವ ಎಚ್ಚರಿಕೆ ನೀಡಿದೆ. ಜೊತೆ ರಷ್ಯಾದ ತೈಲ ಪಾಲುದಾರಿಕೆ ರಾಷ್ಟ್ರಗಳಾದ ಭಾರತದ ಮೂಲಕವೂ ಅಮೆರಿಕ ಒತ್ತಡ ತಂತ್ರ ನಡೆಸುತ್ತಿದ್ದು, ಇದಕ್ಕೆ ಭಾರತ ತಿರುಗೇಟು ನೀಡಿದೆ.
ರಷ್ಯಾದಿಂದ ಕಚ್ಚಾತೈಲ ಖರೀದಿ ಮಾಡಬಾರದು.. ಒಂದ್ವೇಳೆ ಖರೀದಿ ಮಾಡಿದ್ರೆ 100% ದ್ವಿತೀಯ ಸುಂಕ ವಿಧಿಸುವುದಾಗಿ ಅಮೆರಿಕಾದ ಜೊತೆ ನ್ಯಾಟೋ ಮುಖ್ಯಸ್ಥರು ಕೂಡ, ಭಾರತಕ್ಕೆ ಬೆದರಿಕೆ ಹಾಕಿದ್ರು. ಆದ್ರೆ ಇದಕ್ಕೆ ಭಾರತದ ವಿದೇಶಾಂಗ ಇಲಾಖೆ ವಕ್ತಾರ ಖಡಕ್​ ತಿರುಗೇಟನ್ನೇ ನೀಡಿದ್ದಾರೆ. ಭಾರತಕ್ಕೆ ಜನರ ಇಂಧನ ಅಗತ್ಯತೆ ಈಡೇರಿಸುವುದೇ ಪ್ರಮುಖ ಆದ್ಯತೆ. ಜಾಗತಿಕ ಮಾರುಕಟ್ಟೆಯಲ್ಲಿ ಸಿಗೋದನ್ನು ನಾವು ಖರೀದಿಸುತ್ತೇವೆ ಎನ್ನುವ ಮೂಲಕ ರಷ್ಯಾದಿಂದ ಕಚ್ಚಾತೈಲ ಖರೀದಿ ನಿಲ್ಲಿಸಲ್ಲ ಎಂಬ ಖಡಕ್​ ಸಂದೇಶ ನ್ಯಾಟೋ ಮುಖ್ಯಸ್ಥರಿಗೆ ರವಾನೆ ಮಾಡಿದೆ.
ನಮ್ಮ ಜನರಿಗಾಗಿ ಅಗತ್ಯ ಇಂಧನಗಳನ್ನ ಭದ್ರಪಡಿಸುವುದು ನಮಗೆ ಅತ್ಯಂತ ಮುಖ್ಯವಾದ ಆದ್ಯತೆ. ಈ ಪ್ರಯತ್ನದಲ್ಲಿ, ಮಾರುಕಟ್ಟೆಗಳಲ್ಲಿ ಏನು ನೀಡಲಾಗುತ್ತಿದೆ. ಹಾಗೆ ಪ್ರಸ್ತುತ ಜಾಗತಿಕ ಸನ್ನಿವೇಶಗಳು ನಮಗೆ ಒಂದು ಮಾರ್ಗದರ್ಶನವಾಗಿದೆ. ಈ ವಿಚಾರದಲ್ಲಿ ಯಾವುದೇ ದ್ವಂದ್ವ ನಿಲುವು ತೋರುವವರ ವಿರುದ್ಧ ನಾವು ವಿಶೇಷವಾಗಿ ಎಚ್ಚರಿಕೆ ವಹಿಸುತ್ತೇವೆ-ರಣದೀಪ್ ಜೈಸ್ವಾಲ್, ಭಾರತದ ವಿದೇಶಾಂಗ ಇಲಾಖೆ ವಕ್ತಾರ
ಇದನ್ನೂ ಓದಿ: Gold news: ಯಾವ ದೇಶದ ಬಳಿ ಅತಿ ಹೆಚ್ಚು ಚಿನ್ನ ಇದೆ..? ಭಾರತದ ಸ್ಥಾನ ಏನು?
ನ್ಯಾಟೋ ಮುಖ್ಯಸ್ಥರಿಗೆ ಮಾತ್ರ.. ಎರಡು ನಾಲಿಗೆಯ ವಿಶ್ವದ ದೊಡ್ಡ ಅಮೆರಿಕಾಗೂ ಎಚ್ಚರಿಕೆ ಸಂದೇಶ ರವಾನಿಸಿದೆ. ಪಾಶ್ಚಿಮಾತ್ಯ ರಾಷ್ಟ್ರಗಳ ಧ್ವಂಧ್ವ ನೀತಿ ಬಗ್ಗೆ ನಾವು ಎಚ್ಚರಿಕೆಯಿಂದ ಇರುತ್ತೇವೆ. ಅಮೆರಿಕಾವೇ ಡಬಲ್ ಸ್ಟಾಂಡರ್ಡ್ ಅನುಸರಿಸುತ್ತಿದ್ದು, ಅದನ್ನು ಅಳವಡಿಸಿಕೊಳ್ಳದಂತೆ ಭಾರತದ ಎಚ್ಚರಿಕೆ ನೀಡಿದೆ.
ಒಟ್ಟಾರೆ.. ಪುಟಿನ್‌ಗೆ ಕರೆ ಮಾಡಿ.. ಇಲ್ಲವೇ ಆರ್ಥಿಕ ನಿರ್ಬಂಧ ಎದುರಿಸಿ ಎಂಬ ನ್ಯಾಟೋ ಧಮ್ಕಿಗೆ ಭಾರತ ಬಗ್ಗದೇ ಖಡಕ್​ ತಿರುಗೇಟು ನೀಡಿದೆ. ಯಾಕಂದ್ರೆ, ರಷ್ಯಾ ಕಷ್ಟ ಕಾಲದಲ್ಲಿ ನೆರವಿಗೆ ಧಾವಿಸುವ ಸ್ನೇಹಿತ.. ಉಭಯ ದೇಶಗಳ ನಡುವೆ ಉತ್ತಮ ಭಾಂದವ್ಯ ಕೂಡ ಇದೆ.
ಇದನ್ನೂ ಓದಿ: ಟಾಯ್ಲೆಟ್ ರೂಂನಿಂದಲೇ ವಿಚಾರಣೆಗೆ ಹಾಜರಾದ ವ್ಯಕ್ತಿ.. ₹1 ಲಕ್ಷ ದಂಡ ವಿಧಿಸಿದ ನ್ಯಾಯಾಲಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ