/newsfirstlive-kannada/media/post_attachments/wp-content/uploads/2025/04/airlines2.jpg)
ಪಾಕಿಸ್ತಾನದ ಮೇಲೆ ಭಾರತ ಒಂದೊಂದಾಗಿ ಪ್ರತೀಕಾರ ತೀರಿಸಿಕೊಳ್ಳುತ್ತದೆ. ಈಗಾಗಲೇ ಭಾರತದ ಮಿಲಿಟರಿ ಯಾವುದೇ ಕ್ಷಣದಲ್ಲಾದರೂ ಮುಂದಿನ 24- 36 ಗಂಟೆಯಲ್ಲಿ ಮಿಲಿಟರಿ ಆಪರೇಷನ್ ಮಾಡಲು ತೀರ್ಮಾನಿಸಿದೆ ಅಂತಾ ಸ್ವತಃ ಪಾಕಿಸ್ತಾನವೇ ಆತಂಕ ವ್ಯಕ್ತಪಡಿಸಿದೆ.
ಇದನ್ನೂ ಓದಿ: 35 ಬಾಲ್ನಲ್ಲಿ 100 ರನ್.. ವೈಭವ್ ಸೂರ್ಯವಂಶಿಗೆ ಕೊಹ್ಲಿ ಕಿವಿ.. ಏನಂದ್ರು ಗೊತ್ತಾ..?
ಇದರ ಮಧ್ಯೆ ಆರ್ಥಿಕ ಸಂಕಷ್ಟದಲ್ಲಿರೋ ಪಾಕ್ಗೆ ಮತ್ತೊಂದು ಹೊಡೆತ ಬಿದ್ದಿದೆ. ಪಹಲ್ಗಾಮ್ ಬೆಳವಣಿಗೆ ನಂತರ ಭಾರತ ಪಾಕ್ ವಿರುದ್ಧ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿತ್ತು. ಬೆನ್ನಲ್ಲೇ ಪಾಕಿಸ್ತಾನ, ಭಾರತೀಯ ವಿಮಾನಗಳಿಗೆ ತನ್ನ ವಾಯು ಪ್ರದೇಶವನ್ನು ಬಂದ್ ಮಾಡಿತ್ತು. ಭಾರತದ ವಿಮಾನಗಳ ಪ್ರವೇಶ ನಿಷೇಧ ಹೇರಿದ ಬೆನ್ನಲ್ಲೇ ಭಾರೀ ನಷ್ಟಕ್ಕೆ ಸಿಲುಕಿದೆ ಪಾಕ್.
ಹೌದು, ಪಾಕ್ ಏರ್ಸ್ಪೇಸ್ ಬಂದ್ ಮಾಡಿದ್ದರಿಂದ ಪಾಕ್ಗೆ ನಷ್ಟವಾಗಿದೆ. ವಿದೇಶಿ ಏರ್ಲೈನ್ಸ್ ಫ್ಲೈಟ್ ಹಾರಾಟದಿಂದ ಪಾಕ್ಗೆ ಲಾಭ ಆಗುತ್ತಿತ್ತು. ಆದರೀಗ ಈ ಏರ್ ಲೈನ್ಸ್ ಫೀಸ್ ಆದಾಯದಲ್ಲಿ 3 ಲಕ್ಷ ಡಾಲರ್ ನಷ್ಟವಾಗಿದೆ. ಭಾರತದ ವಿಮಾನಗಳು ಬೇರೆ ಮಾರ್ಗದಲ್ಲಿ ಹಾರಾಟ ನಡೆಸುತ್ತಿವೆ.
ಆರ್ಥಿಕ ಸಂಕಷ್ಟದಲ್ಲಿರೋ ಪಾಕ್ಗೆ ಈಗ ಏರ್ ಸ್ಪೇಸ್ ಬಂದ್ ಮಾಡಿ ಆದಾಯದಲ್ಲಿ ಕೈ ಸುಟ್ಟುಕೊಂಡಿದೆ. 2019ರಲ್ಲಿ ಏರ್ಸ್ಪೇಸ್ ಬಂದ್, 100 ಮಿಲಿಯನ್ ಡಾಲರ್ ನಷ್ಟ ಆಗಿತ್ತು. ಬೋಯಿಂಗ್ ವಿಮಾನ ಪಾಕ್ ವಾಯುಪ್ರದೇಶದಲ್ಲಿ ಹಾರಾಟಕ್ಕೆ 580 ಡಾಲರ್ ಪಾಕ್ಗೆ ನೀಡುತ್ತಿತ್ತು. ಹೀಗೆ ವಿದೇಶಿ ಏರ್ ಲೈನ್ಸ್ ವಿಮಾನ ತನ್ನ ವಾಯುಪ್ರದೇಶದಲ್ಲಿ ಹಾರಾಟದಿಂದ ಪಾಕ್ಗೆ ಆದಾಯ ಆಗುತ್ತಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ