/newsfirstlive-kannada/media/post_attachments/wp-content/uploads/2024/10/MEDICAL-SUPPLIES.jpg)
ಮಧ್ಯಪ್ರಾಚ್ಯ ಸದ್ಯ ಹೊತ್ತಿ ಉರಿಯುತ್ತಿದೆ. ಇಸ್ರೇಲ್ ಈಗ ಲೆಬನಾನ್, ಇರಾಕ್ ಸಿರಿಯಾಗಳೊಂದಿಗೆ ಕದನಕ್ಕೆ ನಿಂತಿದೆ. ಅದು ನಡೆಸುತ್ತಿರುವ ಏರ್ಸ್ಟ್ರೈಕ್ಗಳು ಆಯಾ ಪ್ರದೇಶಗಳನ್ನು ಮುರುಕು ಮಂಟಪವನ್ನಾಗಿಸುತ್ತಿದೆ. ಅದರಲ್ಲೂ ಲೆಬನಾನ್ನಲ್ಲೀಗ ಸಂದಿಗ್ಧ ಪರಿಸ್ಥಿತಿಯಿದೆ. ಸದ್ಯ ಆ ದೇಶಕ್ಕೂ ಕೂಡ ಯಾರದಾದರೂ ಸ್ಪಂದನೆಯ ಅಗತ್ಯವಿದೆ. ಲೆಬನಾನ್ ಸ್ಥಿತಿಗೆ ಮರುಗಿದ ಭಾರತ ಈಗ ಮಾನವೀಯತೆಯ ದೃಷ್ಟಿಯಿಂದ 33 ಟನ್ ಔಷಧಿ ಸಾಮಗ್ರಿ ಕಳುಹಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಮೊದಲ ಹಂತವಾಗಿ ಈಗ 11 ಟನ್ ಔಷಧಿ ಹಾಗೂ ಅಗತ್ಯ ವಸ್ತುಗಳನ್ನು ಭಾರತ ಕಳುಹಿಸಿಕೊಟ್ಟಿದೆ.
ಇದನ್ನೂ ಓದಿ: ಇಸ್ರೇಲ್ ಪ್ರಧಾನಿ ಮನೆ ಮೇಲೆ ಡ್ರೋನ್ ಅಟ್ಯಾಕ್.. ನಮ್ಮನ್ನ ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ ಎಂದ ನೆತನ್ಯಾಹು
ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ರಂಧೀರ್ ಜೈಸ್ವಾಲ್ ಈ ಬಗ್ಗೆ ಟ್ವೀಟ್ ಮಾಡಿದ್ದು ಭಾರತ ಮಾನವೀಯ ದೃಷ್ಟಿಯಿಂದ 33 ಟನ್ ಔಷಧೋಪಚಾರ ಸಾಮಗ್ರಿ ಹಾಗೂ ಅಗತ್ಯ ವಸ್ತುಗಳನ್ನು ಲೆಬಾನಾನ್ಗೆ ಕಳುಹಿಸಲು ನಿರ್ಧರಿಸಿದ್ದು. ಮೊದಲ ಹಂತವಾಗಿ ಈಗ 11 ಟನ್ ಔಷಧಿ ಸಾಮಗ್ರಿಗಳನ್ನು ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣಾ ಕಾವು; ಕಮಲಾ ಹ್ಯಾರಿಸ್ ಬೆನ್ನಿಗೀಗ ಒಬಾಮಾ ಶಕ್ತಿ
ಸದ್ಯ ದಕ್ಷಿಣ ಲೆಬನಾನ್ನಲ್ಲಿ ಸಂಘರ್ಷದ ಸ್ಥಿತಿಯಿದೆ. ಯುದ್ಧದ ಉನ್ಮಾದಲ್ಲಿರುವ ಮಧ್ಯಪ್ರಾಚ್ಯಗಳ ದೇಶಗಳಲ್ಲಿ ಒಂದಲ್ಲ ಒಂದು ಅನಾಹುತಗಳು ನಡೆಯುತ್ತಲೇ ಇವೆ. ಹೀಗಾಗಿ ಅಲ್ಲಿರುವ ರಾಷ್ಟ್ರಗಳಿಗೆ ಈಗ ವೈದ್ಯಕೀಯ ನೆರವಿನ ಅಗತ್ಯವಿದೆ. ಹೀಗಾಗಿ ಭಾರತ ಮೊದಲ ಹಂತದಲ್ಲಿ 11 ಟನ್ ವೈದ್ಯಕೀಯ ಸಾಮಾಗ್ರಿಗಳನ್ನು ಕಳುಹಿಸಿದೆ. ಮಾನವೀಯ ದೃಷ್ಟಿಯ ಹಿನ್ನೆಲೆಯನ್ನಿಟ್ಟುಕೊಂಡು ಈ ಸಹಾಯಕ್ಕೆ ಭಾರತ ಮುಂದಾಗಿದೆ ಎಂದು ಕೇಂದ್ರ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ