ವಿಶ್ವಕ್ಕೆ ದೊಡ್ಡ ಮೆಸೇಜ್​ ಕೊಡಲಿದೆ ಭಾರತ.. ಶೀಘ್ರದಲ್ಲೇ ಹೈಪರ್ಸಾನಿಕ್ ಮಿಸೈಲ್ ವಿಷ್ಣುವಿನ ಪರೀಕ್ಷೆ!

author-image
Bheemappa
Updated On
ವಿಶ್ವಕ್ಕೆ ದೊಡ್ಡ ಮೆಸೇಜ್​ ಕೊಡಲಿದೆ ಭಾರತ.. ಶೀಘ್ರದಲ್ಲೇ ಹೈಪರ್ಸಾನಿಕ್ ಮಿಸೈಲ್ ವಿಷ್ಣುವಿನ ಪರೀಕ್ಷೆ!
Advertisment
  • ಹೈಪರ್ಸಾನಿಕ್ ಮಿಸೈಲ್ ವಿಶ್ವದಲ್ಲಿ ಎಷ್ಟು ದೇಶಗಳ ಬಳಿ ಇವೆ?
  • ಇನ್ಮುಂದೆ ಪಾಕಿಸ್ತಾನ ಕಿತಾಪತಿ ಮಾಡಬೇಕಂದ್ರೆ ಯೋಚಿಸಬೇಕು
  • ಅಮೆರಿಕ ಬಳಿ ಇಲ್ಲದಂತ ಮಿಸೈಲ್​ ಭಾರತದ ಬಳಿ ಸಿದ್ಧವಾಗಿದೆ!

ವಿಶ್ವದ ಅತ್ಯಂತ ಪವರ್​ಫುಲ್​ ಮಿಸೈಲ್​ ಹೈಪರ್ಸಾನಿಕ್ ಕ್ಷಿಪಣಿ (Hypersonic Missile) ವಿಷ್ಣುವನ್ನು ಪರೀಕ್ಷಿಸಲು ಭಾರತ ಸಿದ್ಧವಾಗಿದೆ. ಈ ಮಿಸೈಲ್​ ವಿಶ್ವದ ಅತ್ಯಂತ ಅಪಾಯಕಾರಿಯಾಗಿದ್ದು ಯಾವುದೇ ಸಾಧನವೂ ಇದನ್ನು ತಡೆಯಲು ಸಾಧ್ಯವೇ ಇಲ್ಲ. ಭೂಮಿ, ನೀರು ಹಾಗೂ ಗಾಳಿಯಲ್ಲೂ ಇದನ್ನೂ ಉಡಾವಣೆ ಮಾಡಬಹುದು. ಒಂದು ಬಾರಿ ಈ ವಿಷ್ಣು ಪರಾಕ್ರಮಕ್ಕೆ ನಿಂತರೇ ಶತ್ರುಗಳ ಬೂದಿ ಕೂಡ ಸಿಗುವುದೇ ಇಲ್ಲ.

ಹೈಪರ್ಸಾನಿಕ್ ಮಿಸೈಲ್ ವಿಷ್ಣು ಅತ್ಯಂತ ಬಲಶಾಲಿ. ಇದನ್ನು ಯಾವುದೇ ರಾಡರ್ ವ್ಯವಸ್ಥೆಯೂ ಪತ್ತೆ ಹಚ್ಚಲು ಸಾಧ್ಯವೇ ಇಲ್ಲ. ಒಮ್ಮೆ ಉಡಾವಣೆಯಾದರೆ ಈ ವಿಷ್ಣುವನ್ನು ತಡೆಯುವ ಶಕ್ತಿ ಯಾವುದೇ ವಾಯು ರಕ್ಷಣಾ ವ್ಯವಸ್ಥೆಗೆ ಇಲ್ಲವೇ ಇಲ್ಲ. ಸದ್ಯ ಇದು ವಿಶ್ವದಲ್ಲಿ ಇರೋದು ರಷ್ಯಾ ಹಾಗೂ ಚೀನಾದಲ್ಲಿ ಮಾತ್ರ. ಇದು ಬಿಟ್ಟರೇ ಇದೀಗ ಭಾರತ ಈ ಅತ್ಯಂತ ಪ್ರಬಲವಾದ ಹೈಪರ್ಸಾನಿಕ್ ಕ್ಷಿಪಣಿ ತಯಾರಿಸುತ್ತಿದ್ದು ಟೆಸ್ಟ್​ ಮಾಡಲು ರೆಡಿಯಾಗಿದೆ.

publive-image

ಡಿಆರ್​ಡಿಒ ಸಂಸ್ಥೆಯಿಂದ ಪ್ರಾಜೆಕ್ಟ್​ ವಿಷ್ಣು ಹೆಸರಲ್ಲಿ ವಿಷ್ಣವಿನ ಕೆಲಸ ಇನ್ನು ನಡೆಯುತ್ತಿದ್ದು ಶೀಘ್ರದಲ್ಲೇ ಪರೀಕ್ಷೆಗೆ ಒಳಪಡಲಿದೆ. ಒಮ್ಮೆ ಇದು ಸಂಪೂರ್ಣವಾಗಿ ರೆಡಿಯಾದರೆ ಭಾರತದ ಗೇಮ್​ ಚೇಂಜರ್ ಎಂದು ಹೇಳಬಹುದು. ಏಕೆಂದರೆ ಈ ಒಂದು ಕ್ಷಿಪಣಿ, 2019ರಲ್ಲಿ ರಿವೀಲ್ ಆದ ರಷ್ಯಾದ ಹೈಪರ್ಸಾನಿಕ್ ಮಿಸೈಲ್ ಅವಂಗಾರ್ಡ್ (Avangard)ಗಿಂತ 3 ಪಟ್ಟು ಸ್ಪೀಡ್​ ಹೊಂದಿದೆ. ಜೊತೆಗೆ ಪರಮಾಣು ಸಿಡಿತಲೆಗಳನ್ನ ಹೊತ್ತೊಯ್ಯುವ ಸಾಮರ್ಥ್ಯ ವಿಷ್ಣುಗಿದೆ. ರಷ್ಯಾದ ಮಿಸೈಲ್ ಅವಂಗಾರ್ಡ್ ಇದು ಕ್ಷಿಪಣಿ ಅಲ್ಲ. ಇದು ಕೇವಲ ಇಂಟರ್​ಕ್ಯಾಂಟಿನೆಟಲ್​ ಬ್ಯಾಲೆಸ್ಟಿಕ್ ಮಿಸೈಲ್ ಸಿಸ್ಟಮ್ (ಐಸಿಬಿಎಂ) ಆಗಿದೆ.

ಹೈಪರ್ಸಾನಿಕ್ ಮಿಸೈಲ್ ವಿಷ್ಣು ಬಹುಪಯೋಗಿ ಹೈಪರ್‌ಸಾನಿಕ್ ಗ್ಲೈಡ್ ವಾಹನ (Hypersonic Glide Vehicle)ವಾಗಿದೆ. ಇದರ ವೇಗವೂ ಮ್ಯಾಕ್ 10 ಇದೆ. ಅದಂತೆ ನಮ್ಮ ನಿರೀಕ್ಷೆಗೂ ಮೀರಿದೆ. ಅಂದರೆ ಕೇವಲ ಒಂದು ಗಂಟೆಯಲ್ಲಿ 10,000 ಕಿಲೋ ಮೀಟರ್​ನಿಂದ 12,000 ಕಿಲೋ ಮೀಟರ್​ನಷ್ಟು ವೇಗದಲ್ಲಿ ಸಾಗುತ್ತದೆ.

ಇದನ್ನೂ ಓದಿ:ಟೀಮ್ ಇಂಡಿಯಾದ ಮಾನ ಕಾಪಾಡಿದ KL ರಾಹುಲ್.. ಸಿಡಿಲಬ್ಬರದ ಶತಕ ಸಿಡಿಸಿದ ಕನ್ನಡಿಗ

publive-image

ವಿಷ್ಣುವಿನ ​ವ್ಯಾಪ್ತಿಯೂ 5 ಸಾವಿರ ಕಿಲೋ ಮೀಟರ್ ಎಂದು ನಿರೀಕ್ಷಿಸಲಾಗಿದೆ. ನ್ಯೂಕ್ಲಿಯರ್ ವೆಪನ್​ಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಇದಕ್ಕಿದೆ. VISHNU ಫುಲ್ ಫಾರ್ಮ್ ಎಂದರೆ, Vehicle for Integrated and Strategic Hypersonic Navigation and Utility ಎಂದು ಆಗಿದೆ. ಇದನ್ನು ಗಾಳಿ, ಭೂಮಿ ಹಾಗೂ ಸಮುದ್ರದಲ್ಲೂ ಲಾಂಚ್ ಮಾಡಬಹುದು. ಎದುರಾಳಿಗಳಿಂದ ತಪ್ಪಿಸಿಕೊಂಡು ನುಗ್ಗಿ ಹೊಡೆಯುವ ಶಕ್ತಿ ಈ ವಿಷ್ಣವಿಗೆ ಇದೆ.

  • ಗಂಭೀರ ಬೆದರಿಕೆ ಸಂದರ್ಭದಲ್ಲಿ ವಿಷ್ಣು ಮಿಸೈಲ್ ಭಾರತದ ಬಲವಾದ ಶಕ್ತಿಯಾಗಿರುತ್ತಾನೆ
  • ಶತ್ರು ರಾಷ್ಟ್ರ ಪಾಕ್ ಬಳಸುತ್ತಿರುವ ಮಿಸೈಲ್​ಗಳಿಗಿಂತ ವಿಷ್ಣು ತುಂಬಾ ಶಕ್ತಿವಂತ
  • ಹೆಚ್ಚಿನ ನಿಖರತೆಯೊಂದಿಗೆ ಶತ್ರುವಿನ ಮೇಲೆ ನುಗ್ಗಿ ಹೊಡೆಯಬಹುದು
  • ಅತ್ಯಂತ ಬಲವಾದ ಮಿಸೈಲ್ ಸಿದ್ಧಪಡಿಸುವುದರಿಂದ ಭಾರತ ವಿಶ್ವಕ್ಕೆ ತನ್ನ ಮಿಲಿಟರಿ ಸಾಮರ್ಥ್ಯ ತೋರಿಸಿದಂತೆ ಆಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment