/newsfirstlive-kannada/media/post_attachments/wp-content/uploads/2025/02/U19_WORLDCUP.jpg)
ICC ಮಹಿಳೆಯರ T20 ಅಂಡರ್-19 ವಿಶ್ವಕಪ್​ನ 2ನೇ ಸೆಮಿಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾದ ಯಂಗ್ ಗರ್ಲ್ಸ್​ ಅಮೋಘ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಒಂದು ಪಂದ್ಯವನ್ನು ಸೋಲದೇ ಭಾರತದ ಯುವತಿಯರು ಫೈನಲ್​ಗೆ ಎಂಟ್ರಿ ಕೊಟ್ಟಿದ್ದಾರೆ.
ಕೌಲಾಲಂಪುರ್​ದ ಸ್ಟೇಡಿಯಂನಲ್ಲಿ ನಡೆದ 2 ಸೆಮಿಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್​ನ ಅಂಡರ್-19 ತಂಡದ ಕ್ಯಾಪ್ಟನ್ ಅಬಿ ನಾರ್ಗ್ರೋವ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದರು. ಅದರಂತೆ ಭಾರತದ ಅಂಡರ್-19 ತಂಡ ಫೀಲ್ಡಿಂಗ್​ಗೆ ಆಗಮಿಸಿತು. ಬೌಲಿಂಗ್​ನಲ್ಲಿ ಪರಾಕ್ರಮ ಮೆರೆದ ಭಾರತದ ವನಿತೆಯರು ಇಂಗ್ಲೆಂಡ್​ ತಂಡವನ್ನು 113 ರನ್​ಗೆ ಕಟ್ಟಿ ಹಾಕಿದರು. ಭಾರತದ ಆಯುಷಿ ಶುಕ್ಲಾ 2 ವಿಕೆಟ್ ಪಡೆದ್ರೆ, ಪರುಣಿಕಾ ಸಿಸೋಡಿಯಾ, ವೈಷ್ಣವಿ ಶರ್ಮಾ ತಲಾ 3 ವಿಕೆಟ್ ಪಡೆದು ತಂಡಕ್ಕೆ ನೆರವಾದರು.
ಇದನ್ನೂ ಓದಿ: ಕಿರುತೆರೆ ನಟಿ ವಿರುದ್ಧ ಗಂಡನಿಂದ ಕಿರುಕುಳ ಆರೋಪ.. ಪೊಲೀಸರ ನೋಟಿಸ್​ಗೂ ಡೋಂಟ್​ ಕೇರ್
113 ರನ್​ಗಳ ಸುಲಭ ಗುರಿ ಬೆನ್ನತ್ತಿದ ಭಾರತದ ಯುವತಿಯರು ಕೇವಲ 1 ವಿಕೆಟ್​ ಕಳೆದುಕೊಂಡು 117 ರನ್​ಗಳನ್ನು ಗಳಿಸುವ ಮೂಲಕ 9 ವಿಕೆಟ್​ಗಳ ಅಮೋಘ ಗೆಲುವು ಪಡೆಯಿತು. ಜಿ ಕಮಲಿನಿ ಓಪನಿಂಗ್ ಬ್ಯಾಟಿಂಗ್​ಗೆ ಆಗಮಿಸಿ 8 ಫೋರ್ ಸಮೇತ ಹಾಫ್ ಸೆಂಚುರಿ ಸಿಡಿಸಿ ತಂಡವನ್ನು ಗುರಿಯನ್ನು ಮುಟ್ಟಿಸಿ ಅಜೆಯರಾಗಿ ಉಳಿದರು. ಇನ್ನು ಪರುಣಿಕಾ ಸಿಸೋಡಿಯಾ ಪ್ಲೇಯರ್ ಆಫ್ ​ದೀ ಮ್ಯಾಚ್ ಪ್ರಶಸ್ತಿ ಪಡೆದರು. ವಿಶೇಷ ಎಂದರೆ ನಿನ್ನೆ ಭಾರತಕ್ಕೆ ಎರಡೂ ಕಡೆಯೂ ಗೆಲುವು ಸಿಕ್ಕಿದೆ.
ICC ಮಹಿಳೆಯರ T20 ಅಂಡರ್-19 ವಿಶ್ವಕಪ್​ನ ಫೈನಲ್​ ಪಂದ್ಯ ಮಲೇಷ್ಯಾದಲ್ಲಿ ನಡೆಯಲಿದೆ. ಫೈನಲ್​ನಲ್ಲಿ ಬಲಿಷ್ಠ ಸೌತ್ ಆಫ್ರಿಕಾ ಟೀಮ್ ಅನ್ನು ಟೀಮ್ ಇಂಡಿಯಾದ ಯಂಗ್ ಗರ್ಲ್ಸ್​ ಎದುರಿಸಲಿದ್ದಾರೆ. ಹಾಲಿ ಚಾಂಪಿಯನ್ ಆಗಿರುವ ಭಾರತ ಹಾಗೂ ಸೌ ಆಫ್ರಿಕಾ ಈ ಟೂರ್ನಿಯಲ್ಲಿ ಒಂದು ಸೋಲು ಕೂಡ ಕಂಡಿಲ್ಲ. ಫೈನಲ್​ನಲ್ಲಿ ಯಾವ ಟೀಮ್ ಗೆಲ್ಲುತ್ತದೆಯೋ ಅವರಿಗೆ ಟ್ರೋಫಿ ಜೊತೆಗೆ ಬಹುಮಾನಗಳು ಹರಿದು ಬರಲಿವೆ. ಇದರ ಜೊತೆಗೆ ಮಹಿಳೆಯರ ತಂಡದಲ್ಲಿ ಅವಕಾಶ ಸಿಗುವ ಸಾಧ್ಯತೆ ಇರುತ್ತವೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ